ಬಾಗಲಕೋಟೆ : ಕಾಂಗ್ರೆಸ್ ಪಾರ್ಟಿ ಹ್ಯಾಸ್ ಬಿಕಮ್ ಮುಸ್ಲಿಂ ಲೀಗ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟ ಗ್ರಾಮದಲ್ಲಿ ಪ್ರಹ್ಲಾದ್ ಜೋಶಿ ಮಾತನಾಡಿ ಮುಸ್ಲಿಂ ಲೀಗ್ ಅಂದರೆ ಬಹಳ ಜನ ಮುಸ್ಲಿಮರ ಪಕ್ಷ ಅನ್ಕೊಂಡಿದ್ದರು. ಈ ದೇಶ ಇಬ್ಬಾಗಕ್ಕೆ ಕರೆಕೊಟ್ಟ ಮೊದಲ ಪಕ್ಷವೇ ಮುಸ್ಲಿಂ ಲೀಗ್.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಸ್ಲಿಂ ಲೀಗ್ ಮುಖ್ಯಸ್ಥ. ಮುಸ್ಲಿಂ ಲೀಗ್ ಮುಖ್ಯಸ್ಥ ರಾಹುಲ್ ಗಾಂಧಿ ಮೊಹಮ್ಮದ್ ಅಲಿ ಜಿನ್ನಾ ಇದ್ದಂತೆ. ಕೇರಳಂನಲ್ಲಿ ಮುಸ್ಲಿಂ ಲೀಗ್ ಬೆಂಬಲದಿಂದ ಸರ್ಕಾರ ರಚನೆ ಮಾಡುತ್ತಿದ್ದಾರೆ. ಮುಸ್ಲಿಂ ಲೀಗಿನ 18 ಜನರು ಮುಸ್ಲಿಮರು ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ. ಅಸ್ಸಾಂನಲ್ಲಿ ಕಾಂಗ್ರೆಸ್ಸಿನ 19 ಶಾಸಕರ ಪೈಕಿ 18 ಜನ ಮುಸ್ಲಿಮರಿದ್ದಾರೆ. ಅಬ್ದುಲ್ ಬದ್ರುದ್ದೀನ್ ಕಾಂಗ್ರೆಸ್ ಮುಸ್ಲಿಂ ಲೀಗ್ ಆಗಿದೆ ಅಂದಿದ್ದಾರೆ. ಕೇರಳ ಅಸ್ಸಾಂ ಪಶ್ಚಿಮ ಬಂಗಾಳ ಸೇರಿ 90 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.
ತಮಿಳುನಾಡಿನಲ್ಲಿ ಕಾಂಗ್ರೆಸ್ಸಿನ ಐವರು ಶಾಸಕರ ಪೈಕಿ ನಾಲ್ವರು ಮುಸ್ಲಿಮರಿದ್ದಾರೆ. ಮುಸ್ಲಿಂ ಲೀಗಿನವರು ಪ್ರತ್ಯೇಕ ಬಜೆಟ್ ಕೇಳಿದ್ದಾರೆ ಅಂದರೆ ಅರ್ಥವೇನು? ಬಾಂಗ್ಲಾ ನುಸುಳುಕೋರರ ಬಗ್ಗೆ ಕಾಂಗ್ರೆಸ್ ನವರು ಮಾತನಾಡುವುದಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಬ್ರದರ್ಸ್ ಅಂತ ಹೇಳುತ್ತಾರೆ ಡಿಕೆ ಶಿವಕುಮಾರ್ ಗೆ ಮುಸ್ಲಿಮರು ಹೇಗೆ ಬ್ರದರ್ ಎಂದು ಗೊತ್ತಿಲ್ಲ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಭುದ್ಧ ರಾಜಕಾರಣಿ ಯಾವುದೇ ವಿಷಯದ ಬಗ್ಗೆ ಗಂಭೀರತೆ ಇಲ್ಲದ ರಾಜಕೀಯ ನಾಯಕ ಅವನ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಹೇಳುತ್ತಿದ್ದಾರೆ ಎಂದು ಪ್ರಹ ಜೋಶಿ ಹೇಳಿಕೆ ನೀಡಿದರು.








