Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ
KARNATAKA

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

By ಸುರೇಶ್‌

ಬೆಂಗಳೂರು : ‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆ ಸಾಕಾರವಾಗಲು ಎಲ್ಲಾ ರಾಜಕೀಯ ಪಕ್ಷಗಳ ಸಹಮತ ಬೇಕು. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು ಎಂದು ಒಂದು ದೇಶ ಒಂದು ಚುನಾವಣೆ ಕುರಿತ ಸಂಸತ್ತಿನ ಜಂಟಿ ಸದನ ಸಮಿತಿ ಅಧ್ಯಕ್ಷ ಪಿ.ಪಿ.ಚೌಧರಿ ತಿಳಿಸಿದರು.

ಒಂದು ದೇಶ ಒಂದು ಚುನಾವಣೆ ಬಗ್ಗೆ ಸಂಸತ್ತಿನ ಜಂಟಿ ಸದನ ಸಮಿತಿ ಬೆಂಗಳೂರಿನ ಖಾಸಗಿ ಹೊಟೇಲ್​​ನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿತು.‌ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಿ ಸಮಿತಿ ಮುಂದೆ ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡಿದರು.

ಸಭೆ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ, ರಾಜಕೀಯ ಪಕ್ಷಗಳ ಸಲಹೆ ಸ್ವೀಕರಿಸಲಾಗಿದೆ. ರಾಜ್ಯದ ಮುಖಂಡರು ಉತ್ತಮ ವಿಚಾರಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ್​ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್​, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರು ಬಂದಿದ್ದರು. ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದರು.

ಕೆಲ ರಾಜ್ಯಗಳಲ್ಲಿ ಏಕಕಾಲದ ಕ್ರಮವನ್ನು (one-time measure) ಅನ್ವಯಿಸಲಾಗುತ್ತದೆ. ಅಲ್ಲಿ ಚುನಾವಣೆಗಳು ಯಾವಾಗ ನಡೆದರೂ ಸರಿ, ತದನಂತರದ ಎಲ್ಲಾ ಚುನಾವಣೆಗಳನ್ನು ಪ್ರತಿಯೊಂದು ರಾಜ್ಯಕ್ಕೂ 2034 ರಲ್ಲಿ ಒಟ್ಟಿಗೆ ನಡೆಸಲಾಗುತ್ತದೆ. ಇದರರ್ಥ, ಒಂದು ರಾಜ್ಯವು 2032 ರಲ್ಲಿ ಚುನಾವಣೆ ನಡೆಸಿದರೆ, ಅದರ ಅವಧಿಯನ್ನು 2034 ಕ್ಕೆ ಕೊನೆಗೊಳ್ಳುವಂತೆ ಪರಿಣಾಮಕಾರಿಯಾಗಿ ಕಡಿತಗೊಳಿಸಲಾಗುತ್ತದೆ.

ಏಕೆಂದರೆ, synchronization ಸಾಧಿಸಲು ಇದೊಂದೇ ಮಾರ್ಗವಾಗಿದೆ. ವಾಸ್ತವವಾಗಿ, ಇದನ್ನು ಸಾಧಿಸುವುದೇ ಅತ್ಯಂತ ದೊಡ್ಡ ಸವಾಲಾಗಿದೆ. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಾವು ಅಗತ್ಯವಿರುವ ಸಾಂವಿಧಾನಿಕ ತಿದ್ದುಪಡಿಗಳನ್ನು ತರಬಹುದಾಗಿದೆ ಎಂದರು.

Share. Facebook Twitter LinkedIn WhatsApp Email

Related Posts

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

1 Min Read

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Mins Read

ಯಾವ ವಯಸ್ಸಿನವರು ದಿನಕ್ಕೆ ಎಷ್ಟು ಕಿಲೋಮೀಟರ್ ನಡೆಯಬೇಕು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

2 Mins Read
Recent News

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಯಾವ ವಯಸ್ಸಿನವರು ದಿನಕ್ಕೆ ಎಷ್ಟು ಕಿಲೋಮೀಟರ್ ನಡೆಯಬೇಕು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

State News
KARNATAKA

ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ 4 ಅಕೌಂಟ್ ಫ್ರೀಜ್ : ಒಂದೊಂದು ಅಕೌಂಟ್ನಲ್ಲೂ ನೂರಾರು ಕೋಟಿ ರೂ. ಪತ್ತೆ!

By ಸುರೇಶ್‌ KARNATAKA 1 Min Read

ಬೆಳಗಾವಿ : 4,500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಐಡಿ ಅಧಿಕಾರಿಗಳು 4500 ಕೋಟಿ ಪ್ರಕರಣದ ಬೆನ್ನತ್ತಿದ್ದಾರೆ. ನಿನ್ನೆಯವರೆಗೂ…

ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು : ಪಿ.ಪಿ.ಚೌಧರಿ

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಯಾವ ವಯಸ್ಸಿನವರು ದಿನಕ್ಕೆ ಎಷ್ಟು ಕಿಲೋಮೀಟರ್ ನಡೆಯಬೇಕು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.