ಬೆಂಗಳೂರು : ನಿರಾಶ್ರಿತರ ಆಶ್ರಮದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಪ್ರಜೆಗಳು ಪರಾರಿ ಆಗಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ನೈಜೀರಿಯಾ ಉಗಾಂಡಾ ಕಿನ್ಯಾ ಬಾಂಗ್ಲಾದ ಅಕ್ರಮ ವಲಸಿಗರು ಎಸ್ಕೇಪ್ ಆಗಿದ್ದಾರೆ. ನಾಲ್ವರು ಮಹಿಳೆಯರು ಪರಾರಿಯಾಗಿದ್ದಾರೆ. ತೊಪಿಷ್ಟ, ನಗವ, ಸಫೀನಾ, ಪಿತಿನ ಎನ್ನುವರು ಪರಾರಿಯಾಗಿದ್ದಾರೆ. ಅಕ್ರಮ ವಲಸಿಗರು ಈ ಕಟ್ಟಡದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ಪರಾರಿಯಾಗಿದ್ದಾರೆ. ಪೊಲೀಸರ ಬಂದೋಬಸ್ತ ನಡುವೆ ಪರಾರಿಯಾಗಿದ್ದಾರೆ.
ಅಕ್ರಮ ವಲಸಿಗರನ್ನು FRRO ಜೈಲಿನಲ್ಲಿ ಜಾಗ ಇಲ್ಲದ ಕಾರಣ ನಿರಾಶ್ರಿತರ ಕೇಂದ್ರದಲ್ಲಿ ಬಂದಿ ಇರಿಸಲಾಗಿತ್ತು. ಅಕ್ರಮವಾಗಿ ವಾಸವಿರುವ ವಿದೇಶಿಗರ ಬಳಿ ಗಾಂಜಾ ಡ್ರಗ್ಸ್ ಪತ್ತೆಯಾಗಿದ್ದು, ಎಸ್ಕೇಪ್ ಆಗಿ ಮತ್ತೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಈಗಾಗಲೇ ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ವೀಸಾ ಮುಗಿದರು, ತಮ್ಮ ದೇಶಕ್ಕೆ ಮರಳದೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಹೋಮ ಆಫ್ ಹೋಪ್ ನಿರಾಶ್ರಿತ ಕೇಂದ್ರದಲ್ಲಿ ಇಟ್ಟಿರುವ ಎಫ್ ಆರ್ ಆರ್ ಆರ್ ಬೆಂಗಳೂರಿನ ಚಿಕ್ಕ ಗುಬ್ಬಿ ಬಳಿ ಇರುವ ನಿರಾಶ್ರಿತರ ಕೇಂದ್ರ.








