ಬೆಂಗಳೂರು : ಲಕ್ಕುಂಡಿಯಲ್ಲಿ ಮನೆ ನಿರ್ಮಾಣ ಮಾಡುವಾಗ ಪ್ರಾಚೀನ ಕಾಲದ ಚಿನ್ನಾಭರಣ ದೊರೆತಿದ್ದು, ದೇಶಾದ್ಯಂತ ಅಷ್ಟೆ ಭಾರಿ ಸದ್ದು ಮಾಡಿತ್ತು ಇದೀಗ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲು ತಯಾರಿ ನಡೆಸಿದ್ದು, ಎರಡು ತಿಂಗಳಲ್ಲಿ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದ ಸಲಹಾ ಸಮಿತಿಯು ಕಾನೂನಾತ್ಮಕವಾಗಿ ರಚನೆಯಾಗಿದೆ. ಲಕ್ಕುಂಡಿ ಪ್ರಾಧಿಕಾರ ಗದಗನ್ನು ಮುಖ್ಯ ಕಚೇರಿ ಮಾಡಿ ಕೆಲಸ ಆರಂಭಿಸಿದೆ. 3 ವರ್ಷದಲ್ಲಿ ಲಕ್ಕುಂಡಿ ತಾಣಕ್ಕೆ ರಾಜ್ಯ ಸರ್ಕಾರ ಹೊಸ ಸ್ಪರ್ಶವನ್ನು ನೀಡಿದೆ. ಲಕ್ಕುಂಡಿಯಲ್ಲಿ ಮೊದಲ ಹಂತವಾಗಿ ಪ್ರಾಚ್ಯಾವಶೇಷ ವಸ್ತುಗಳ ಅನ್ವೇಷಣೆ ಆರಂಭಿಸಲಾಗಿದೆ ಎಂದರು.
10 ಪಲ್ಲಕ್ಕಿ ಹೊತ್ತು, ಗ್ರಾಮ ಪಂಚಾಯತಿ ಸುತ್ತಾಡಿ ಪ್ರಾಚ್ಯಾವಶೇಷ ವಸ್ತುಗಳನ್ನು ನಮಗೆ ಕೊಡಿ ಎಂದು ಮನವಿ ಮಾಡಿದೆವು. ಆಗ ಗ್ರಾಮದವರು 1500 ಪ್ರಾಚೀನ ವಸ್ತುಗಳನ್ನು ನಮಗೆ ಕೊಟ್ಟು ಸ್ಪಂದನೆ ಮಾಡಿದರು. ಜನಾಂದೋಲನ ಮಾಡಬೇಕು ಅಂತ ಸಪ್ತಾಹ ಅಂತ ಮಾಡಿದೆವು. 12 ದಿನ ಆಗಿದೆ. 1400 ಪ್ರಾಚ್ಯ ಅವಶೇಷಗಳು ನಮಗೆ ಲಭ್ಯವಾಗಿವೆ ಎಂದು ಮಾಹಿತಿ ನೀಡಿದರು.








