Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಾವು ಪ್ರಿಯರೇ ಎಚ್ಚರ: ಮಾವಿನ ಹಣ್ಣಿನ ಜೊತೆ ಈ 7 ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಗಂಡಾಂತರ!

ನಾಳೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ, ಕಾರ್ಯಕ್ರಮದಿಂದ ಶಶಿ ತರೂರ್ ದೂರ!

ಬಿಸಿಲ ಬೇಗೆಗೆ ತಂಪಾದ ಮುಲಾಮು: ಬೇಸಿಗೆಯಲ್ಲಿ ಮಧ್ಯಾಹ್ನದ ನಿದ್ದೆ ಇಷ್ಟೊಂದು ಸುಖ ನೀಡಲು ಕಾರಣವೇನು ಗೊತ್ತಾ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ, ಕಾರ್ಯಕ್ರಮದಿಂದ ಶಶಿ ತರೂರ್ ದೂರ!
INDIA

ನಾಳೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ, ಕಾರ್ಯಕ್ರಮದಿಂದ ಶಶಿ ತರೂರ್ ದೂರ!

By ಗೋಪಾಲ್‌ ಎನ್‌

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಹಿರಿಯ ನಾಯಕ ವಿ.ಡಿ. ಸತೀಶನ್ (V D Satheesan) ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಮೇ 18ರಂದು (ಸೋಮವಾರ) ಬೆಳಗ್ಗೆ 10 ಗಂಟೆಗೆ ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

​ಈ ಹೈಫೈ ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಹರಿದುಬರಲಿದ್ದು, ಇತ್ತೀಚೆಗಷ್ಟೇ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಈ ಆಹ್ವಾನ ರಾಜಕೀಯವಾಗಿ ಭಾರಿ ಪ್ರಾಮುಖ್ಯತೆ ಪಡೆದಿದೆ.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಮುಖ ಆಕರ್ಷಣೆಯಾಗಲಿದ್ದಾರೆ.ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಮಂತ್ರಣ ಕಳುಹಿಸಲಾಗಿದೆ.

​ಮತ್ತೊಂದೆಡೆ, ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್ ಅವರು ಈ ಮಹತ್ವದ ಸಮಾರಂಭದಿಂದ ದೂರ ಉಳಿಯಲಿದ್ದಾರೆ. ಆದರೆ, ಇದಕ್ಕೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯ ಕಾರಣವಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ತಮಗಿರುವ ಮುಂಚಿನ ವಿದೇಶಿ ಪ್ರವಾಸದ ಉಲ್ಲೇಖ ಮಾಡಿರುವ ತರೂರ್, “ನನ್ನ ಸಹೋದ್ಯೋಗಿ ವಿ.ಡಿ. ಸತೀಶನ್ ಅವರ ಪ್ರಮಾಣ ವಚನ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ಬೇಸರವಿದೆ. ನಾನು ಈ ವಾರಾಂತ್ಯದಲ್ಲಿ ಅಮೆರಿಕದ ಬೋಸ್ಟನ್‌ನಲ್ಲಿದ್ದು, ನನ್ನ ಹಳೆಯ ವಿದ್ಯಾಸಂಸ್ಥೆಯಾದ ಫ್ಲೆಚರ್ ಸ್ಕೂಲ್ ಆಫ್ ಲಾ ಅಂಡ್ ಡಿಪ್ಲೊಮಸಿಯ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ” ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಸತೀಶನ್ ಅವರಿಗೆ ಶುಭ ಹಾರೈಸಿದ್ದಾರೆ.

Tomarrow vd satisan cm keralam
Share. Facebook Twitter LinkedIn WhatsApp Email

Related Posts

ಬಿಸಿಲ ಬೇಗೆಗೆ ತಂಪಾದ ಮುಲಾಮು: ಬೇಸಿಗೆಯಲ್ಲಿ ಮಧ್ಯಾಹ್ನದ ನಿದ್ದೆ ಇಷ್ಟೊಂದು ಸುಖ ನೀಡಲು ಕಾರಣವೇನು ಗೊತ್ತಾ?

1 Min Read

JEE Advanced 2026 : ಆರಂಭವಾಯ್ತು ದೇಶದ ಅತ್ಯಂತ ಕಠಿಣ ಪರೀಕ್ಷೆ; ಬೆಳಗ್ಗೆ 9 ಗಂಟೆಗೆ ‘ಪೇಪರ್ 1’ ಶುರು, ಕೇಂದ್ರಗಳತ್ತ ಜಿಗಿದ ಐಐಟಿ ಆಕಾಂಕ್ಷಿಗಳು!

1 Min Read

BREAKING : ಬೆಳ್ಳಂಬೆಳಗ್ಗೆ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ : ಪ್ರಯಾಣಿಕರೆಲ್ಲರೂ ಸುರಕ್ಷಿತ | Hazrat Nizamuddin Rajdhani Express

1 Min Read
Recent News

ALERT : ಮಾವು ಪ್ರಿಯರೇ ಎಚ್ಚರ: ಮಾವಿನ ಹಣ್ಣಿನ ಜೊತೆ ಈ 7 ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಗಂಡಾಂತರ!

ನಾಳೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ, ಕಾರ್ಯಕ್ರಮದಿಂದ ಶಶಿ ತರೂರ್ ದೂರ!

ಬಿಸಿಲ ಬೇಗೆಗೆ ತಂಪಾದ ಮುಲಾಮು: ಬೇಸಿಗೆಯಲ್ಲಿ ಮಧ್ಯಾಹ್ನದ ನಿದ್ದೆ ಇಷ್ಟೊಂದು ಸುಖ ನೀಡಲು ಕಾರಣವೇನು ಗೊತ್ತಾ?

BIG NEWS: ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಬೇಕೇ? ಅಧಿಕಾರಿಗಳ ನವೀಕೃತ ಫೋನ್ ನಂಬರ್ ಪಟ್ಟಿ ಇಲ್ಲಿದೆ | Karnataka Lokayukta

State News
KARNATAKA

ALERT : ಮಾವು ಪ್ರಿಯರೇ ಎಚ್ಚರ: ಮಾವಿನ ಹಣ್ಣಿನ ಜೊತೆ ಈ 7 ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಗಂಡಾಂತರ!

By kannadanewsnow57 KARNATAKA 2 Mins Read

ಬೆಂಗಳೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದ್ದು, ಮಾರುಕಟ್ಟೆಗೆ ಬಗೆಬಗೆಯ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿವೆ. ಅಬಾಲವೃದ್ಧರಾಗಿ ಎಲ್ಲರೂ…

BIG NEWS: ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಬೇಕೇ? ಅಧಿಕಾರಿಗಳ ನವೀಕೃತ ಫೋನ್ ನಂಬರ್ ಪಟ್ಟಿ ಇಲ್ಲಿದೆ | Karnataka Lokayukta

BIG NEWS : 12 ವರ್ಷದಿಂದ ಶಾಲಾ -ಕಾಲೇಜುಗಳು ಬಳಸುತ್ತಿರುವ ಜಾಗ ಇನ್ಮುಂದೆ ರಾಜ್ಯ ಸರ್ಕಾರ ಸ್ವತ್ತು.!

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.