ಭಯೋತ್ಪಾದನೆಯ ವಿಷಯಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶನಿವಾರ (ಮೇ 16) ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, “ಅವರು ಭೌಗೋಳಿಕವಾಗಿ ಅಸ್ತಿತ್ವದಲ್ಲಿರಬೇಕೋ ಅಥವಾ ಇತಿಹಾಸದ ಪುಟ ಸೇರಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು,” ಎಂದು ಹೇಳಿದ್ದಾರೆ. ನಾಗರಿಕ ಮತ್ತು ಸೇನಾ ಸಂವಾದ ಕಾರ್ಯಕ್ರಮವಾದ ‘ಸೇನಾ ಸಂವಾದ್’ನಲ್ಲಿ ಮಾತನಾಡಿದ ಜನರಲ್ ದ್ವಿವೇದಿ, “…
…ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಮತ್ತು ಭಾರತದ ವಿರುದ್ಧ ಸಂಚು ರೂಪಿಸುವುದನ್ನು ಹೀಗೆಯೇ ಮುಂದುವರಿಸಿದರೆ, ಅವರು ಜಗತ್ತಿನ ಭೂಪಟದಲ್ಲಿ ಇರಬೇಕೋ ಅಥವಾ ಇತಿಹಾಸವಾಗಿ ಉಳಿಯಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕಾಗುತ್ತದೆ,” ಎಂದರು.
’ಯೂನಿಫಾರ್ಮ್ ಅನ್ವೇಲ್ಡ್’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, “ಒಂದು ವೇಳೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗೆ ಕಾರಣವಾದಂತಹ ಪರಿಸ್ಥಿತಿಯೇ ಮತ್ತೆ ಎದುರಾದರೆ ಭಾರತೀಯ ಸೇನೆ ಹೇಗೆ ಪ್ರತಿಕ್ರಿಯಿಸಲಿದೆ?” ಎಂದು ಜನರಲ್ ದ್ವಿವೇದಿ ಅವರಿಗೆ ಪ್ರಶ್ನಿಸಲಾಯಿತು.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತೀಯ ಪಡೆಗಳು ನಿಖರವಾದ ದಾಳಿ (ಪ್ರೆಸಿಷನ್ ಸ್ಟ್ರೈಕ್ಸ್) ನಡೆಸಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವವನ್ನು ಭಾರತ ಮತ್ತು ಅದರ ಸಶಸ್ತ್ರ ಪಡೆಗಳು ಆಚರಿಸಿದ ಕೆಲವೇ ದಿನಗಳ ನಂತರ ಈ ಹೇಳಿಕೆ ಹೊರಬಿದ್ದಿದೆ.
ಭಾರತ ನಡೆಸಿದ ಆ ದಾಳಿಗಳ ಬೆನ್ನಲ್ಲೇ ಪಾಕಿಸ್ತಾನವು ಪ್ರತಿಕಾರವಾಗಿ ಆಕ್ರಮಣವನ್ನು ಪ್ರಾರಂಭಿಸಿತ್ತು, ಇದಕ್ಕೆ ಪ್ರತಿಯಾಗಿ ಭಾರತವು ಅದೇ ಮಿಲಿಟರಿ ಅಭಿಯಾನದ ಅಡಿಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗಳನ್ನು ನಡೆಸಿತ್ತು.








