Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿಗರ ಗಮನಕ್ಕೆ : ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಾಳೆ ಸಂಚಾರ ವ್ಯತ್ಯಯ

BREAKING: ಮೇ.20ರಿಂದ ರಾಜ್ಯಾಧ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಫಿಕ್ಸ್, ಸಾಧನಾ ಸಮಾವೇಶಕ್ಕೂ ಕಪ್ಪು ಪಟ್ಟಿ ಬಿಸಿ!

‘ಸಚಿವ ಜಮೀರ್ ಅಹ್ಮದ್’ಗೆ ಬಿಗ್ ಶಾಕ್: ನಕಲಿ ಐಟಿಸಿ ಹಗರಣದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ಗೆ IT ನೋಟಿಸ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಮೇ.20ರಿಂದ ರಾಜ್ಯಾಧ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಫಿಕ್ಸ್, ಸಾಧನಾ ಸಮಾವೇಶಕ್ಕೂ ಕಪ್ಪು ಪಟ್ಟಿ ಬಿಸಿ!
KARNATAKA

BREAKING: ಮೇ.20ರಿಂದ ರಾಜ್ಯಾಧ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಫಿಕ್ಸ್, ಸಾಧನಾ ಸಮಾವೇಶಕ್ಕೂ ಕಪ್ಪು ಪಟ್ಟಿ ಬಿಸಿ!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ವೇತನ ಹೆಚ್ಚಳದ ಬಿಕ್ಕಟ್ಟು ಮತ್ತಷ್ಟು ತಾರಕಕ್ಕೇರಿದೆ. ಸರ್ಕಾರದ ಸಂಧಾನ ಸೂತ್ರಗಳಿಗೆ ಬಗ್ಗದ ಸಾರಿಗೆ ನೌಕರರ ಒಕ್ಕೂಟಗಳು ಮೇ 20 ರಿಂದ ಅನಿರ್ದಿಷ್ಟಾವಧಿ ಬಸ್ ಮುಷ್ಕರಕ್ಕೆ ಅಧಿಕೃತವಾಗಿ ಸಜ್ಜಾಗಿವೆ. ಇದರ ನಡುವೆ, ಮೇ 19 ರಂದು ತುಮಕೂರಿನಲ್ಲಿ ನಡೆಯಲಿರುವ ಸರ್ಕಾರದ ಮೂರು ವರ್ಷಗಳ ‘ಸಾಧನಾ ಸಮಾವೇಶ’ಕ್ಕೂ ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಹೋರಾಟದ ಬಿಸಿ ಮುಟ್ಟಿಸಲು ನೌಕರರು ನಿರ್ಧರಿಸಿದ್ದು, ಸರ್ಕಾರಕ್ಕೆ ಭಾರಿ ತಲೆನೋವಾಗಿ ಪರಿಣಮಿಸಿದೆ.

12.5% ವೇತನ ಏರಿಕೆ ಆದೇಶ ತಿರಸ್ಕರಿಸಿದ ನೌಕರರು

ವೇತನ ಪರಿಷ್ಕರಣೆಗಾಗಿ ಕಳೆದ ಹಲವು ದಿನಗಳಿಂದ ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ನೌಕರರನ್ನು ಸಮಾಧಾನಪಡಿಸಲು ಸರ್ಕಾರವು ಆರಂಭದಲ್ಲಿ 7% ವೇತನ ಹೆಚ್ಚಳದ ಪ್ರಸ್ತಾಪ ಇಟ್ಟಿತ್ತು. ಅದಕ್ಕೆ ನೌಕರರು ಒಪ್ಪದಿದ್ದಾಗ ಸಾರಿಗೆ ಸಚಿವರು ನಡೆಸಿದ ಸಂಧಾನ ಸಭೆಯೂ ವಿಫಲವಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿಗಳ ಅಂಗಳ ತಲುಪಿದ ಈ ಬಿಕ್ಕಟ್ಟಿಗೆ ಪರಿಹಾರವಾಗಿ, 2025ರ ಮಾರ್ಚ್‌ನಿಂದ ಅನ್ವಯವಾಗುವಂತೆ 12.5% ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, “ನಮಗೆ 2024ರ ಜನವರಿಯಿಂದಲೇ ಅನ್ವಯವಾಗುವಂತೆ 25% ವೇತನ ಹೆಚ್ಚಳ ಮಾಡಲೇಬೇಕು” ಎಂದು ಪಟ್ಟು ಹಿಡಿದಿರುವ ನೌಕರರ ಸಂಘಟನೆಗಳು ಸರ್ಕಾರದ ಹೊಸ ಆದೇಶವನ್ನು ಕಡಾಖಂಡಿತವಾಗಿ ತಿರಸ್ಕರಿಸಿವೆ.

ಮೇ 19 ರ ಸಾಧನಾ ಸಮಾವೇಶದಲ್ಲಿ ಪ್ರತಿಭಟನೆ

ಮುಷ್ಕರಕ್ಕೂ ಮುನ್ನವೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ಸಂಘಟನೆಗಳು ತಂತ್ರ ರೂಪಿಸಿವೆ. ಮೇ 19 ರಂದು ತುಮಕೂರಿನಲ್ಲಿ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶ ಆಯೋಜನೆಗೊಂಡಿದ್ದು, ಅದೇ ದಿನ ತುಮಕೂರಿನ ಟೌನ್‌ಹಾಲ್ ಬಳಿ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ನೂರಾರು ಚಾಲಕರು ಮತ್ತು ನಿರ್ವಾಹಕರು ನಿರ್ಧರಿಸಿದ್ದಾರೆ.

ಮೇ 19 ರ ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತ?

ಮೇ 20 ರಿಂದ ಅಧಿಕೃತವಾಗಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದ್ದರೂ, ಮೇ 19 ರ ರಾತ್ರಿಯಿಂದಲೇ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನೌಕರರು ಮುಂದಾಗಿದ್ದಾರೆ. ಇದರಿಂದಾಗಿ ಮೇ 19 ರ ರಾತ್ರಿ ಮತ್ತು ಮೇ 20 ರ ಮುಂಜಾನೆಯಿಂದಲೇ ಸಾರ್ವಜನಿಕ ಪ್ರಯಾಣಿಕರಿಗೆ ಭಾರಿ ತೊಂದರೆಯಾಗುವ ಆತಂಕ ಎದುರಾಗಿದೆ.

‘ಎಸ್ಮಾ’ (ESMA) ಎಚ್ಚರಿಕೆಗೂ ಕ್ಯಾರೆ ಎನ್ನದ ಸಿಬ್ಬಂದಿ

ಸಾರ್ವಜನಿಕ ಸಾರಿಗೆಗೆ ಧಕ್ಕೆಯಾಗದಂತೆ ತಡೆಯಲು ಸರ್ಕಾರವು ಮುಷ್ಕರ ನಿರತ ನೌಕರರ ವಿರುದ್ಧ ‘ಎಸ್ಮಾ’ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸರ್ಕಾರದ ಈ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಸಾರಿಗೆ ಮುಖಂಡರು ಸ್ಪಷ್ಟಪಡಿಸಿದ್ದಾರೆ. “ಎಸ್ಮಾ ಜಾರಿಯಾದರೂ ಸರಿ, ನಮ್ಮ ನ್ಯಾಯಸಮ್ಮತ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ನೌಕರರು ಪಟ್ಟು ಹಿಡಿದಿರುವುದರಿಂದ ಸಾರಿಗೆ ಸಮರ ರೋಚಕ ಹಂತ ತಲುಪಿದೆ.

ಹೊಸನಗರದಲ್ಲಿ ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ: ಅಕ್ರಮ ಮರ ಕಡಿತಲೆ, ಒತ್ತುವರಿ ಮಾಡಿ ಆರೋಪಿ ಅರೆಸ್ಟ್

PM Modi: ನೆದರ್‌ಲ್ಯಾಂಡ್ಸ್‌ನಲ್ಲಿ ಭಾರತದ ಭವಿಷ್ಯದ 4 ಮಹತ್ವಾಕಾಂಕ್ಷೆಗಳನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ

Share. Facebook Twitter LinkedIn WhatsApp Email

Related Posts

ಬೆಂಗಳೂರಿಗರ ಗಮನಕ್ಕೆ : ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಾಳೆ ಸಂಚಾರ ವ್ಯತ್ಯಯ

1 Min Read

‘ಸಚಿವ ಜಮೀರ್ ಅಹ್ಮದ್’ಗೆ ಬಿಗ್ ಶಾಕ್: ನಕಲಿ ಐಟಿಸಿ ಹಗರಣದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ಗೆ IT ನೋಟಿಸ್!

2 Mins Read

ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಕೆಂಪೇಗೌಡ ಏರ್ಪೋರ್ಟ್!

1 Min Read
Recent News

ಬೆಂಗಳೂರಿಗರ ಗಮನಕ್ಕೆ : ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಾಳೆ ಸಂಚಾರ ವ್ಯತ್ಯಯ

BREAKING: ಮೇ.20ರಿಂದ ರಾಜ್ಯಾಧ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಫಿಕ್ಸ್, ಸಾಧನಾ ಸಮಾವೇಶಕ್ಕೂ ಕಪ್ಪು ಪಟ್ಟಿ ಬಿಸಿ!

‘ಸಚಿವ ಜಮೀರ್ ಅಹ್ಮದ್’ಗೆ ಬಿಗ್ ಶಾಕ್: ನಕಲಿ ಐಟಿಸಿ ಹಗರಣದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ಗೆ IT ನೋಟಿಸ್!

PM Modi: ನೆದರ್‌ಲ್ಯಾಂಡ್ಸ್‌ನಲ್ಲಿ ಭಾರತದ ಭವಿಷ್ಯದ 4 ಮಹತ್ವಾಕಾಂಕ್ಷೆಗಳನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ

State News
KARNATAKA

ಬೆಂಗಳೂರಿಗರ ಗಮನಕ್ಕೆ : ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಾಳೆ ಸಂಚಾರ ವ್ಯತ್ಯಯ

By ಸುರೇಶ್‌ KARNATAKA 1 Min Read

ಬೆಂಗಳೂರು : ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮೇ 17ರಂದು ಸಂಚಾರ ವ್ಯತ್ಯಯ ಉಂಟಾಗಲಿದೆ.…

BREAKING: ಮೇ.20ರಿಂದ ರಾಜ್ಯಾಧ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಫಿಕ್ಸ್, ಸಾಧನಾ ಸಮಾವೇಶಕ್ಕೂ ಕಪ್ಪು ಪಟ್ಟಿ ಬಿಸಿ!

‘ಸಚಿವ ಜಮೀರ್ ಅಹ್ಮದ್’ಗೆ ಬಿಗ್ ಶಾಕ್: ನಕಲಿ ಐಟಿಸಿ ಹಗರಣದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ಗೆ IT ನೋಟಿಸ್!

ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಕೆಂಪೇಗೌಡ ಏರ್ಪೋರ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.