Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

BREAKING : ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೇಟಿನ್ ಕಡ್ಡಿ ಪತ್ತೆ ಕೇಸ್ : ಕೊನೆಗೂ ಅಸಲಿ ಕಾರಣ ಪತ್ತೆ!

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೇಟಿನ್ ಕಡ್ಡಿ ಪತ್ತೆ ಕೇಸ್ : ಕೊನೆಗೂ ಅಸಲಿ ಕಾರಣ ಪತ್ತೆ!
KARNATAKA

BREAKING : ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೇಟಿನ್ ಕಡ್ಡಿ ಪತ್ತೆ ಕೇಸ್ : ಕೊನೆಗೂ ಅಸಲಿ ಕಾರಣ ಪತ್ತೆ!

By ಸುರೇಶ್‌

ಬೆಂಗಳೂರು : ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್ ಆಶ್ರಮದ ಬಳಿ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭ ಜಿಲೆಟಿನ್ ಪತ್ತೆಯಾದ ಪ್ರಕರಣಕ್ಕೆ ದ್ವೇಷವೇ ಕಾರಣ ಎಂಬುದು ತಿಳಿದುಬಂದಿದೆ. ಆಶ್ರಮದ ಮೇಲಿನ ದ್ವೇಷದಿಂದ ಕೃತ್ಯ ಎಸಗಲಾಗಿದೆ. ಪ್ರಧಾನಿ ಮೋದಿ ಭೇಟಿ ತಡೆಯಲು ಆಶ್ರಮದ ವಿರೋಧಿಗಳು ಹೂಡಿದ್ದ ತಂತ್ರ ಅದಾಗಿತ್ತು ಎಂಬುದನ್ನು ದಕ್ಷಿಣ ವಲಯ ಪೊಲೀಸರು ಕೊನೆಗೂ ಅಸಲಿ ಕಾರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದ್ದ ಸಂದರ್ಭದಲ್ಲೇ ಈ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ದೇಶದ ಅತ್ಯುನ್ನತ ನಾಯಕರ ಭೇಟಿಯ ವೇಳೆಯಲ್ಲೇ ಇಂತಹ ಘಟನೆ ನಡೆದಿದ್ದರಿಂದ, ಇದು ಪ್ರಧಾನಿ ಭದ್ರತೆಗೆ ಎದುರಾದ ದೊಡ್ಡ ಸವಾಲು ಎಂದೇ ಭಾವಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯದ ಗುಪ್ತಚರ ಸಂಸ್ಥೆಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ದಕ್ಷಿಣ ವಲಯ ಪೊಲೀಸರು ತೀವ್ರ ನಿಗಾ ವಹಿಸಿ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ನೆಟ್‌ವರ್ಕ್ ಟವರ್‌ಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದರು. ಈ ವೇಳೆ ಆಶ್ರಮದ ದ್ವೇಷಿಗಳು ಹಾಗೂ ವಿರೋಧಿಗಳೇ ಈ ಸಂಚಿನ ರೂವಾರಿಗಳು ಎಂಬುದು ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಅವರ ಭೇಟಿಯನ್ನು ಹೇಗಾದರೂ ಮಾಡಿ ತಡೆಯಬೇಕು ಮತ್ತು ಆಶ್ರಮದ ಕೀರ್ತಿಗೆ ಮಸಿ ಬಳಿಯಬೇಕು ಎಂಬ ದುರುದ್ದೇಶದಿಂದ ಆಶ್ರಮದ ವಿರೋಧಿಗಳು ಈ ಕುತಂತ್ರ ರೂಪಿಸಿದ್ದರು ಎಂಬುದು ಪೊಲೀಸ್ ವಿಚಾರಣೆಯಿಂದ ದೃಢಪಟ್ಟಿದೆ.

ಆಶ್ರಮದ ಸುತ್ತಮುತ್ತಲ ಪ್ರದೇಶದಲ್ಲಿ ಜಿಲೆಟಿನ್ ಇರಿಸುವ ಮೂಲಕ ಭದ್ರತಾ ಲೋಪದ ಭೀತಿ ಸೃಷ್ಟಿಸುವುದು ಹಾಗೂ ಆ ಮೂಲಕ ಪ್ರಧಾನಿಯವರ ಕಾರ್ಯಕ್ರಮ ರದ್ದಾಗುವಂತೆ ಮಾಡುವುದು ಆರೋಪಿಗಳ ಮುಖ್ಯ ತಂತ್ರವಾಗಿತ್ತು. ಈ ಮೂಲಕ ಆಶ್ರಮದ ಆಡಳಿತ ಮಂಡಳಿಗೆ ಮುಜುಗರ ಉಂಟುಮಾಡಲು ಅವರು ಯತ್ನಿಸಿದ್ದರು. ಆದರೆ, ಪೊಲೀಸರ ಸಕಾಲಿಕ ತಪಾಸಣೆಯಿಂದಾಗಿ ಜಿಲೆಟಿನ್ ಕಡ್ಡಿಗಳು ಸಮಯಕ್ಕೆ ಸರಿಯಾಗಿ ಪತ್ತೆಯಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ವಿಪ್ಲವವೊಂದು ತಪ್ಪಿದಂತಾಗಿದೆ.

ಸದ್ಯ ದಕ್ಷಿಣ ವಲಯ ಪೊಲೀಸರು ಪ್ರಕರಣದ ಅಸಲಿ ಕಾರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಮತ್ತು ಇವರಿಗೆ ಕುಮ್ಮಕ್ಕು ನೀಡಿದ ಆಶ್ರಮದ ವಿರೋಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯು ಸಾರ್ವಜನಿಕರಲ್ಲಿ ಮತ್ತು ಆಶ್ರಮದ ಭಕ್ತರಲ್ಲಿ ಮೂಡಿದ್ದ ಭೀತಿಯನ್ನು ದೂರ ಮಾಡಿದೆ.

Share. Facebook Twitter LinkedIn WhatsApp Email

Related Posts

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

2 Mins Read

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

2 Mins Read

SHOCKING : ರಾಜ್ಯದಲ್ಲಿ ಮತ್ತೊಂದು ದರೋಡೆ :ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ 27 ಲಕ್ಷ ರೂ ಸುಲಿಗೆ

1 Min Read
Recent News

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

BREAKING : ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೇಟಿನ್ ಕಡ್ಡಿ ಪತ್ತೆ ಕೇಸ್ : ಕೊನೆಗೂ ಅಸಲಿ ಕಾರಣ ಪತ್ತೆ!

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

ನೆದರ್ಲ್ಯಾಂಡ್ಸ್‌ನಲ್ಲಿ ಮೋದಿ ಮೋಡಿ: ಹೇಗ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ, ಭವ್ಯ ಭಾರತೀಯ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಂಡ ಪ್ರಧಾನಿ!

State News
KARNATAKA

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

By kannadanewsnow57 KARNATAKA 2 Mins Read

ಮಗಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುವ ಕುಟುಂಬಗಳಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆ’ (SSY) ಅತ್ಯಂತ ಜನಪ್ರಿಯ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ.…

BREAKING : ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೇಟಿನ್ ಕಡ್ಡಿ ಪತ್ತೆ ಕೇಸ್ : ಕೊನೆಗೂ ಅಸಲಿ ಕಾರಣ ಪತ್ತೆ!

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

SHOCKING : ರಾಜ್ಯದಲ್ಲಿ ಮತ್ತೊಂದು ದರೋಡೆ :ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ 27 ಲಕ್ಷ ರೂ ಸುಲಿಗೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.