ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸದ ವೇಳೆ ರಾಜತಾಂತ್ರಿಕ ವಲಯದಲ್ಲಿ ಹೈ-ಡ್ರಾಮಾ ನಡೆದಿದೆ. ಬೀಜಿಂಗ್ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಟ್ರಂಪ್ ಅವರಿಗೆ ಒಂದು ಕಡೆ ತೀವ್ರ ಮುಖಭಂಗ ಅಥವಾ ‘ಬ್ರೂಟಲ್ ಇನ್ಸಲ್ಟ್’ (Brutal Insult) ಉಂಟಾಗಿದ್ದರೆ, ಮತ್ತೊಂದೆಡೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಟ್ರಂಪ್ ಮನವೊಲಿಸಲು ಅತ್ಯಂತ ಆಕರ್ಷಕ ಹಾಗೂ ವಿಶೇಷ ಉಡುಗೊರೆಯೊಂದನ್ನು (Feel-good gift) ನೀಡುವ ಮೂಲಕ ಜಾಣ ನಡೆ ಪ್ರದರ್ಶಿಸಿದ್ದಾರೆ.
ಜಾಗತಿಕ ಮಟ್ಟದ ಉದ್ವಿಗ್ನತೆ ಮತ್ತು ವ್ಯಾಪಾರ ಸಮರದ ನಡುವೆ ನಡೆದಿರುವ ಈ ಇಬ್ಬರು ಅತಿರಥ ನಾಯಕರ ಭೇಟಿಯಲ್ಲಿ ನಡೆದಿರುವ ಈ ತೆರೆಮರೆಯ ವಿದ್ಯಮಾನ ಈಗ ಜಾಗತಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಚೀನಾ ಪ್ರವಾಸದ ಆರಂಭಿಕ ಮಾತುಕತೆಗಳ ವೇಳೆ ಕೆಲವು ಪ್ರಮುಖ ಜಾಗತಿಕ ಮತ್ತು ಆರ್ಥಿಕ ನೀತಿಗಳ ವಿಷಯದಲ್ಲಿ ಚೀನಾ ಸರ್ಕಾರವು ಅಮೆರಿಕದ ಬೇಡಿಕೆಗಳನ್ನು ಕಡಖಂಡಿತವಾಗಿ ನಿರಾಕರಿಸುವ ಮೂಲಕ ಟ್ರಂಪ್ ಅವರಿಗೆ ರಾಜತಾಂತ್ರಿಕವಾಗಿ ಭಾರಿ ಆಘಾತ ನೀಡಿತ್ತು ಎನ್ನಲಾಗಿದೆ.
ಆದರೆ, ಈ ಮುಖಭಂಗದಿಂದ ಉಂಟಾದ ಕಹಿ ವಾತಾವರಣವನ್ನು ತಿಳಿಗೊಳಿಸಲು ಮತ್ತು ಟ್ರಂಪ್ ಅವರನ್ನು ಸಮಾಧಾನಪಡಿಸಲು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಉಭಯ ದೇಶಗಳ ನಡುವಿನ ಬೃಹತ್ ವ್ಯಾಪಾರ ಒಪ್ಪಂದಗಳ ಜೊತೆಗೆ, ವೈಯಕ್ತಿಕವಾಗಿ ಟ್ರಂಪ್ಗೆ ಅತ್ಯಂತ ಗೌರವಯುತವಾದ ಮತ್ತು ಅವರ ಮನಸ್ಸಿಗೆ ಮುದ ನೀಡುವಂತಹ ವಿಶೇಷ ಸಾಂಪ್ರದಾಯಿಕ ಉಡುಗೊರೆಯನ್ನು ನೀಡಿದ್ದಾರೆ.
ಚೀನಾದ ‘ಕ್ಲಾಸಿಕ್’ ರಾಜತಾಂತ್ರಿಕ ನಡೆ!
ಅಂತರರಾಷ್ಟ್ರೀಯ ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ಚೀನಾದ ಹಳೆಯ ಮತ್ತು ಅತ್ಯಂತ ಪ್ರಸಿದ್ಧ ರಾಜತಾಂತ್ರಿಕ ಶೈಲಿಯಾಗಿದೆ. ಮಾತುಕತೆಯ ಮೇಜಿನ ಮೇಲೆ ತನ್ನ ನಿಲುವುಗಳನ್ನು ಅತ್ಯಂತ ಕಠಿಣವಾಗಿ ಮಂಡಿಸಿ ಎದುರಾಳಿಯನ್ನು ಕಟ್ಟಿಹಾಕುವುದು, ಆ ನಂತರ ಪರಿಸ್ಥಿತಿ ತೀರಾ ಹದಗೆಡದಂತೆ ತಡೆಯಲು ದೊಡ್ಡ ಮಟ್ಟದ ಆರ್ಥಿಕ ಒಪ್ಪಂದಗಳು ಹಾಗೂ ‘ಫೀಲ್-ಗುಡ್’ ಉಡುಗೊರೆಗಳನ್ನು ನೀಡಿ ಬೀಳ್ಕೊಡುವುದು ಚೀನಾದ ತಂತ್ರಗಾರಿಕೆಯಾಗಿದೆ.








