ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದ್ದು, ಇದರ ಮಧ್ಯ, ಸಂಪುಟ ಪುನಾರಚನೆ ಕುರಿತು ಕೂಡ ಕೆಲವು ಹಿರಿಯ ಕಾಂಗ್ರೆಸ್ಸಿನ ಶಾಸಕರು ದೆಹಲಿಗೆ ಭೇಟಿಯಾಗಿ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಚರ್ಚಿಸಿದ್ದಾರೆ.
ಇಂದು ಡಿಸಿಎಂ ಡಿಕೆ ಶಿವಕುಮಾರ್ ಜನ್ಮದಿನ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಶುಭಾಶಯಕೋರಿದ್ದಾರೆ. ಎಕ್ಸ್ ಖಾತೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳು, ಆತ್ಮೀಯರು ಆದ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಪಕ್ಷ ನಿಷ್ಠೆ, ಸೈದ್ಧಾಂತಿಕ ಬದ್ಧತೆಯು ಯುವ ಜನರಿಗೆ ಮಾದರಿಯಾದುದ್ದು. ಜನಸೇವೆಯ ನಿಮ್ಮ ಆಶಯಕ್ಕೆ ಭಗವಂತ ದೀರ್ಘ ಆಯಸ್ಸು, ಆರೋಗ್ಯವನ್ನು ನೀಡಿ ಬಲತುಂಬಲಿ ಎಂದು ಹಾರೈಸುತ್ತೇನೆ ಎಂದು ಶುಭ ಕೊರಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿಗಳು, ಆತ್ಮೀಯರು ಆದ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಪಕ್ಷ ನಿಷ್ಠೆ, ಸೈದ್ಧಾಂತಿಕ ಬದ್ಧತೆಯು ಯುವ ಜನರಿಗೆ ಮಾದರಿಯಾದುದ್ದು. ಜನಸೇವೆಯ ನಿಮ್ಮ ಆಶಯಕ್ಕೆ ಭಗವಂತ ದೀರ್ಘ ಆಯಸ್ಸು, ಆರೋಗ್ಯವನ್ನು ನೀಡಿ ಬಲತುಂಬಲಿ ಎಂದು ಹಾರೈಸುತ್ತೇನೆ. pic.twitter.com/24y1xAxvpt
— Siddaramaiah (@siddaramaiah) May 15, 2026








