Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಭೀಕರ ಅಪಘಾತ : ಸೇತುವೆಯ ಮೇಲಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದು ನಾಲ್ವರು ಸ್ಥಳದಲ್ಲೇ ದುರ್ಮರಣ!

BREAKING : ರಾಜ್ಯಾದ್ಯಂತ 3 ದಿನ ಭಾರಿ ಮಳೆ : ಬೆಂಗಳೂರಲ್ಲಿ ಯಲ್ಲೋ ಅಲರ್ಟ್ ಘೋಷಣೆ, ಹವಾಮಾನ ಇಲಾಖೆ ಮುನ್ಸೂಚನೆ

BREAKING : ವಿವಾದಿತ ಭೋಜಶಾಲಾ ಸ್ಥಳ ಇನ್ಮುಂದೆ ಹಿಂದೂ ದೇವಾಲಯ : ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಿವಾದಿತ ಭೋಜಶಾಲಾ ಸ್ಥಳ ಇನ್ಮುಂದೆ ಹಿಂದೂ ದೇವಾಲಯ : ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು!
INDIA

BREAKING : ವಿವಾದಿತ ಭೋಜಶಾಲಾ ಸ್ಥಳ ಇನ್ಮುಂದೆ ಹಿಂದೂ ದೇವಾಲಯ : ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು!

By ಸುರೇಶ್‌

ಭೋಪಾಲ್ : ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ದಶಕಗಳಿಂದಲೂ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುದೀರ್ಘ ಕಾನೂನು ಹೋರಾಟಕ್ಕೆ ಪ್ರಮುಖ ತಿರುವು ನೀಡಿರುವ ಉನ್ನತ ನ್ಯಾಯಾಲಯವು, ವಿವಾದಿತ ಭೋಜಶಾಲಾ ಆವರಣವನ್ನು “ದೇವಸ್ಥಾನ” ಎಂದು ಘೋಷಿಸಿ ಐತಿಹಾಸಿಕ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ತಿ ಅವರನ್ನೊಳಗೊಂಡ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೇ 12 ರಂದೇ ಎಲ್ಲಾ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯವು, ತೀರ್ಪನ್ನು ಕಾಯ್ದಿರಿಸಿತ್ತು. ತೀವ್ರ ಕುತೂಹಲ ಕೆರಳಿಸಿದ್ದ ಈ ತೀರ್ಪನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ ಐತಿಹಾಸಿಕ ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದು, ವಿವಾದಿತ ಇಡೀ ಸಂಕೀರ್ಣವು ಮೂಲತಃ ವಾಗ್ದೇವಿ (ಸರಸ್ವತಿ ದೇವಿ)ಯ ಮಂದಿರವಾಗಿತ್ತು ಮತ್ತು ಇದನ್ನು ರಾಜ ಭೋಜನು ಸ್ಥಾಪಿಸಿದ್ದ ಪ್ರಸಿದ್ಧ ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂದು ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ಈ ಜಾಗವು ಮೂಲತಃ ಹಿಂದೂ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿತ್ತು ಎಂಬ ವಾದಕ್ಕೆ ನ್ಯಾಯಾಲಯವು ಕಾನೂನು ಮುದ್ರೆ ಒತ್ತಿದೆ.

ಭಾರತೀಯ ಪುರಾತತ್ವ ಇಲಾಖೆ (ASI) ಇತ್ತೀಚೆಗೆ ನಡೆಸಿದ್ದ ಸುದೀರ್ಘ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ಹೈಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಮೀಕ್ಷೆಯ ವೇಳೆ ಪತ್ತೆಯಾಗಿದ್ದ ಶಾಸನಗಳು, ಕೆತ್ತನೆಗಳು ಮತ್ತು ಮಂದಿರದ ಅವಶೇಷಗಳು ಈ ಸಂಕೀರ್ಣದ ಮೂಲ ಸ್ವರೂಪವನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಈ ಐತಿಹಾಸಿಕ ತೀರ್ಪು ಹೊರಬೀಳುತ್ತಿದ್ದಂತೆ ಧಾರ್ ಜಿಲ್ಲೆ ಸೇರಿದಂತೆ ಮಧ್ಯಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣು ಇಡಲಾಗಿದ್ದು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಆಡಳಿತ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Share. Facebook Twitter LinkedIn WhatsApp Email

Related Posts

BIG BREAKING : ಚಿನ್ನದ ಬೆಲೆಯಲ್ಲಿ 3,000 ರೂ. ಬೆಳ್ಳಿ ಬೆಲೆಯಲ್ಲಿ 19,000 ರೂ. ಇಳಿಕೆ | Gold silver prices fall

1 Min Read

Pan Card New Updates: `ಪ್ಯಾನ್ ಕಾರ್ಡ್’ ನಿಯಮದಲ್ಲಿ 2 ಮಹತ್ವದ ಬದಲಾವಣೆ: ಹಣ ಡ್ರಾ ಮಾಡುವ ಮುನ್ನ ಈ ಹೊಸ ಷರತ್ತುಗಳ ಪಾಲನೆ ಕಡ್ಡಾಯ.!

2 Mins Read

BREAKING : ನಡು ರಸ್ತೆಯಲ್ಲೇ ಹೊತ್ತಿ ಉರಿದ ತಿರುಪತಿಗೆ ಹೋಗುತ್ತಿದ್ದ ಬಸ್ : ತಪ್ಪಿದ ಭಾರೀ ದುರಂತ | Bus accident

1 Min Read
Recent News

BREAKING : ರಾಜ್ಯದಲ್ಲಿ ಭೀಕರ ಅಪಘಾತ : ಸೇತುವೆಯ ಮೇಲಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದು ನಾಲ್ವರು ಸ್ಥಳದಲ್ಲೇ ದುರ್ಮರಣ!

BREAKING : ರಾಜ್ಯಾದ್ಯಂತ 3 ದಿನ ಭಾರಿ ಮಳೆ : ಬೆಂಗಳೂರಲ್ಲಿ ಯಲ್ಲೋ ಅಲರ್ಟ್ ಘೋಷಣೆ, ಹವಾಮಾನ ಇಲಾಖೆ ಮುನ್ಸೂಚನೆ

BREAKING : ವಿವಾದಿತ ಭೋಜಶಾಲಾ ಸ್ಥಳ ಇನ್ಮುಂದೆ ಹಿಂದೂ ದೇವಾಲಯ : ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು!

BIG NEWS : ಹಿಜಾಬ್ ಹಿಂದಿನಿಂದಲೂ ಹಾಕುತ್ತಿದ್ದರು ಹೊಸದಾಗಿ ಏನೂ ಹಾಕುತ್ತಿಲ್ಲ : ಗೃಹ ಸಚಿವ ಪರಮೇಶ್ವರ್

State News
KARNATAKA

BREAKING : ರಾಜ್ಯದಲ್ಲಿ ಭೀಕರ ಅಪಘಾತ : ಸೇತುವೆಯ ಮೇಲಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದು ನಾಲ್ವರು ಸ್ಥಳದಲ್ಲೇ ದುರ್ಮರಣ!

By ಸುರೇಶ್‌ KARNATAKA 1 Min Read

ಕೊಪ್ಪಳ: ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ…

BREAKING : ರಾಜ್ಯಾದ್ಯಂತ 3 ದಿನ ಭಾರಿ ಮಳೆ : ಬೆಂಗಳೂರಲ್ಲಿ ಯಲ್ಲೋ ಅಲರ್ಟ್ ಘೋಷಣೆ, ಹವಾಮಾನ ಇಲಾಖೆ ಮುನ್ಸೂಚನೆ

BIG NEWS : ಹಿಜಾಬ್ ಹಿಂದಿನಿಂದಲೂ ಹಾಕುತ್ತಿದ್ದರು ಹೊಸದಾಗಿ ಏನೂ ಹಾಕುತ್ತಿಲ್ಲ : ಗೃಹ ಸಚಿವ ಪರಮೇಶ್ವರ್

BIG NEWS: ರಾಜ್ಯದಲ್ಲಿ ಹೊಸ ದಾಖಲೆ ಬರೆದ ಸಚಿವ ಕೃಷ್ಣಬೈರೇಗೌಡ: ಎಸಿ ಕೋರ್ಟ್ ಕೇಸ್ ಶೇ.90ರಷ್ಟು ವಿಲೇ, 7,490ಕ್ಕೆ ಇಳಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.