ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಾತಿಯ ಮಹತ್ವದ ಪರೀಕ್ಷೆಯಾದ ನೀಟ್ (NEET UG) ಇನ್ನು ಮುಂದೆ ಸಂಪೂರ್ಣವಾಗಿ ಬದಲಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನೀಟ್ ಪರೀಕ್ಷೆಯನ್ನು ಆನ್ಲೈನ್ (Computer Based Test) ಮೂಲಕ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದ್ದಾರೆ.
ಇನ್ನು ಮುಂದೆ ಅಭ್ಯರ್ಥಿಗಳು ಪೆನ್ ಮತ್ತು ಪೇಪರ್ ಬಳಸಿ ಒಎಂಆರ್ ಶೀಟ್ ತುಂಬುವ ಅಗತ್ಯವಿರುವುದಿಲ್ಲ.2026ರಲ್ಲಿ ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಇಂತಹ ಅವಾಂತರಗಳನ್ನು ತಪ್ಪಿಸಲು ಈ ಡಿಜಿಟಲ್ ಹೆಜ್ಜೆ ಇಡಲಾಗಿದೆ. ಆನ್ಲೈನ್ ಪರೀಕ್ಷೆಯಿಂದಾಗಿ ಅಕ್ರಮಗಳಿಗೆ ಕಡಿವಾಣ ಬೀಳಲಿದ್ದು, ಪರೀಕ್ಷಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಬರಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿತ್ತು. ಈಗ ಪರೀಕ್ಷಾ ಕ್ರಮವನ್ನೇ ಬದಲಾಯಿಸುತ್ತಿರುವುದು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶವನ್ನು ಹೊಂದಿದೆ. ಮುಂದಿನ ವರ್ಷದ ಪರೀಕ್ಷಾ ದಿನಾಂಕ ಮತ್ತು ಇತರ ತಾಂತ್ರಿಕ ಮಾಹಿತಿಗಳನ್ನು ಶೀಘ್ರದಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಲಿದೆ.
#WATCH | Delhi | Union Education Minister Dharmendra Pradhan says, "We have zero tolerance towards malpractices and this is a long fight against the examination mafia… Various social media handles are trying to spread misinformation, the system is being challenged and in view… pic.twitter.com/wRrKV3zoAp
— ANI (@ANI) May 15, 2026
#WATCH | Delhi | Union Education Minister Dharmendra Pradhan says, "The NTA is in the hands of an able person… It has been formed with the recommendation of the Supreme Court and conducts examination of nearly 1 crore students each year… We will ensure 0 errors in the NTA…" pic.twitter.com/yM2LjirD0a
— ANI (@ANI) May 15, 2026








