Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು: ಬಿಕೆ ಹರಿಪ್ರಸಾದ್ ವ್ಯಂಗ್ಯ!

BREAKING : ವೀರಶೈವ ಲಿಂಗಾಯತ ಸಾಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dilip Raj

Watch Video: ಮಿತವ್ಯಯದ ಹಾದಿಯಲ್ಲಿ ಪ್ರಧಾನಿ ಮೋದಿ: ಬೆಂಗಾವಲು ಪಡೆ ವಾಹನಗಳ ಸಂಖ್ಯೆಯಲ್ಲಿ ಭಾರಿ ಕಡಿತ | PM Modi

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವೀರಶೈವ ಲಿಂಗಾಯತ ಸಾಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dilip Raj
KARNATAKA

BREAKING : ವೀರಶೈವ ಲಿಂಗಾಯತ ಸಾಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dilip Raj

By ಸುರೇಶ್‌

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಮೂಲಕ ಮನೆಮಾತಾಗಿದ್ದ ಖ್ಯಾತ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ (47) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸದಾ ಸಕ್ರಿಯರಾಗಿರುತ್ತಿದ್ದ ನಟನ ಹಠಾತ್ ಸಾವು ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಬೆಂಗಳೂರಿನಲ್ಲಿ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಲಿಂಗಾಯತ ಸಂಪ್ರದಾಯದಂತೆ ವಿದಾಯ: ದಿಲೀಪ್ ರಾಜ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನದ ನಂತರ ರಾಮನಗರ ತಾಲೂಕಿನ ಗುನ್ನೂರು ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಅಲ್ಲಿನ ಅವರ ಸ್ವಂತ ಫಾರ್ಮ್‌ಹೌಸ್ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.ದಿಲೀಪ್ ರಾಜ್ ಅವರ ಸಹೋದರ ದೀಪಕ್ ರಾಜ್ ಎಲ್ಲ ವಿಧಿ ವಿಧಾನ ಪೂರೈಸಿದರು. ಕುಟುಂಬದ ಆಪ್ತರು ಮತ್ತು ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಅಂತಿಮ ವಿಧಿಗಳನ್ನು ಪೂರೈಸಿ, ಮಣ್ಣು ಮಾಡಲಾಯಿತು.

10 ವರ್ಷಗಳ ಹಿಂದೆ ನಟ ದಿಲೀಪ್ ರಾಜ್ 1 ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ತೋಟ ನಿರ್ಮಾಣ ಮಾಡಿಕೊಂಡು ಮನೆ ಕಟ್ಟಿದ್ದರು. ತಿಂಗಳಿಗೊಮ್ಮೆ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿದ್ದರು. ಇಂದು ಬೆಳಗಿನ ಜಾವ ದಿಲೀಪ್ ರಾಜ್‌ಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ರಾಜ್ ಅವರ ಮೃತದೇಹ ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಯಲ್ಲಿರಿಸಲಾಗಿದೆ. ದಿಲೀಪ್ ನಿಧನಕ್ಕೆ ಕನ್ನಡ ಚಿತ್ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ದಿಲೀಪ್ ರಾಜ್ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದರು. ಆ ಪಾತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು. 2005ರಲ್ಲಿ ಬಿಡುಗಡೆಯಾದ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಿಲನ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು.

ಸುಗ್ರೀವ, ಗೆಳೆಯ, ಯೂಟರ್ನ್, ಸೇರಿದಂತೆ 28 ಚಿತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ಸದ್ಯ ಜನಪ್ರಿಯ ಧಾರಾವಾಹಿ `ಕೃಷ್ಣ ರುಕ್ಕು’ ಧಾರವಾಹಿ ಪ್ರೊಡ್ಯೂಸ್ ಮಾಡುತ್ತಿದ್ದರು. 47 ವರ್ಷದ ದಿಲೀಪ್ ರಾಜ್ ಕೊನೆಯದಾಗಿ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಮನೆಯೊಂದು ಮೂರು ಬಾಗಿಲು, ರಥಸಪ್ತಮಿ, ಪ್ರೀತಿಗಾಗಿ ಧಾರಾವಾಹಿಗಳಲ್ಲೂ ನಟಿಸಿದ್ದರು.

ಕಂಬನಿ ಮಿಡಿದ ಚಿತ್ರರಂಗ: ಅಂತ್ಯಕ್ರಿಯೆಯ ವೇಳೆ ಚಿತ್ರರಂಗದ ಅನೇಕ ಹಿರಿಯ ಕಲಾವಿದರು, ಕಿರುತೆರೆಯ ಸಹೋದ್ಯೋಗಿಗಳು, ನಿರ್ದೇಶಕರು ಹಾಗೂ ತಾಂತ್ರಿಕ ವರ್ಗದವರು ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ದಿಲೀಪ್ ರಾಜ್ ಅವರ ಅಗಲಿಕೆಯಿಂದಾಗಿ ಅವರ ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ. ಆಪ್ತ ಸ್ನೇಹಿತರು ಮತ್ತು ಸಹನಟರು ತಮ್ಮ ನೆಚ್ಚಿನ ‘ಎಜೆ’ಯನ್ನು ನೆನೆದು ಕಣ್ಣೀರಿಟ್ಟರು.

ಸಾಧನೆಯ ಹಾದಿ: ದಿಲೀಪ್ ರಾಜ್ ಕೇವಲ ನಟರಾಗಿ ಮಾತ್ರವಲ್ಲದೆ, ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದರು. ‘ಮಿಲನ’ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಎಜೆ (ಅಭಿನಂದನ್ ಜಯವರ್ಧನ್) ಪಾತ್ರದ ಮೂಲಕ ಕರ್ನಾಟಕದ ಪ್ರತಿ ಮನೆಯಲ್ಲೂ ಗುರುತಿಸಿಕೊಂಡಿದ್ದರು. ನಟನೆ ಮತ್ತು ನಿರ್ಮಾಣ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಅವರ ಜೈತ್ರಯಾತ್ರೆ ಅರ್ಧಕ್ಕೇ ನಿಂತಿರುವುದು ಕಲಾಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ.

Share. Facebook Twitter LinkedIn WhatsApp Email

Related Posts

ಪ್ರಧಾನಿ ಮೋದಿ ಕರೆಗೆ ಆರ್.ಅಶೋಕ್ ಸ್ಪಂದನೆ: ಪೆಟ್ರೋಲ್ ಬಳಕೆ ಇಳಿಕೆ, ಬೆಂಗಾವಲು ವಾಹನಕ್ಕೂ ಬ್ರೇಕ್!

1 Min Read

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸರ್ಕಾರ ಬಂಪರ್ ಆಫರ್ : B ಖಾತಾದಿಂದ A ಖಾತಾ ಮಾಡಿಕೊಳ್ಳಲು ಗೈಡೆನ್ಸ್ ವ್ಯಾಲ್ಯೂ ಇಳಿಕೆ!

2 Mins Read

ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಚಿಕ್ಕಮಗಳೂರಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್​​ಟೇಬಲ್ ಸಾವು!

1 Min Read
Recent News

BIG NEWS : ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು: ಬಿಕೆ ಹರಿಪ್ರಸಾದ್ ವ್ಯಂಗ್ಯ!

BREAKING : ವೀರಶೈವ ಲಿಂಗಾಯತ ಸಾಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dilip Raj

Watch Video: ಮಿತವ್ಯಯದ ಹಾದಿಯಲ್ಲಿ ಪ್ರಧಾನಿ ಮೋದಿ: ಬೆಂಗಾವಲು ಪಡೆ ವಾಹನಗಳ ಸಂಖ್ಯೆಯಲ್ಲಿ ಭಾರಿ ಕಡಿತ | PM Modi

ಪ್ರಧಾನಿ ಮೋದಿ ಕರೆಗೆ ಆರ್.ಅಶೋಕ್ ಸ್ಪಂದನೆ: ಪೆಟ್ರೋಲ್ ಬಳಕೆ ಇಳಿಕೆ, ಬೆಂಗಾವಲು ವಾಹನಕ್ಕೂ ಬ್ರೇಕ್!

State News
KARNATAKA

BREAKING : ವೀರಶೈವ ಲಿಂಗಾಯತ ಸಾಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ | Actor Dilip Raj

By ಸುರೇಶ್‌ KARNATAKA 2 Mins Read

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಮೂಲಕ ಮನೆಮಾತಾಗಿದ್ದ ಖ್ಯಾತ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್…

ಪ್ರಧಾನಿ ಮೋದಿ ಕರೆಗೆ ಆರ್.ಅಶೋಕ್ ಸ್ಪಂದನೆ: ಪೆಟ್ರೋಲ್ ಬಳಕೆ ಇಳಿಕೆ, ಬೆಂಗಾವಲು ವಾಹನಕ್ಕೂ ಬ್ರೇಕ್!

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸರ್ಕಾರ ಬಂಪರ್ ಆಫರ್ : B ಖಾತಾದಿಂದ A ಖಾತಾ ಮಾಡಿಕೊಳ್ಳಲು ಗೈಡೆನ್ಸ್ ವ್ಯಾಲ್ಯೂ ಇಳಿಕೆ!

ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಚಿಕ್ಕಮಗಳೂರಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್​​ಟೇಬಲ್ ಸಾವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.