ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ನಡುವೆಯೆ ಕೆಲವು ಹಿರಿಯ ಶಾಸಕರಿಂದ ಸಂಪುಟ ಪುನರಚನೆ ಆಗಬೇಕು ಎಂದು ವಿಚಾರ ಕೇಳಿ ಬಂದಿತ್ತು. ಈಗ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ಕೂಡ ನನಗೂ ಕೂಡ ಮಂತ್ರಿ ಆಗಬೇಕು ಎಂಬ ಆಸೆ ಇದೆ. ಸಚಿವ ಸ್ಥಾನ ಸಿಕ್ಕಿದರು ಸಂತೋಷ ಸಿಗದಿದ್ದರೂ ಸಂತೋಷ. ಹಾಗಾಗಿ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರು ಭೇಟಿಯಾಗುತ್ತೇನೆ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ಶಾಸಕ ಪರದೆ ಈಶ್ವರ ಹೇಳಿಕೆ ನೀಡಿದರು.
ಇನ್ನೂ NTA ಇಂದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ರದ್ದು ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪರೀಕ್ಷೆ ರದ್ದು ಮಾಡಿದ್ದಕ್ಕೆ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಬೇಸರ ಆಗಿದೆ ರಾಜಸ್ಥಾನದಲ್ಲಿಯೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಯಾರು ಕಾರಣ? ಕರ್ನಾಟಕದ ವಿದ್ಯಾರ್ಥಿಗಳು ಭಯಪಡಬೇಡಿ. ಮಾನಸಿಕವಾಗಿ ಸಿದ್ದರಾಗಿ ಹೊಸದಾಗಿ ಶುಲ್ಕವನ್ನು ಕಟ್ಟಬೇಕಿಲ್ಲ. ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದರು.








