Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಗಲಕೋಟೆ : ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳಿಂದ ಹಲ್ಲೆ!

`EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ `ATM-UPI’ ಮೂಲಕ `PF’ ಹಣ ವಿತ್ ಡ್ರಾ ಮಾಡಬಹುದು.!

ಮದುವೆಗೆ ಚಿನ್ನ ಖರೀದಿಸಬೇಡಿ.. ಪ್ರಧಾನಿ ಮೋದಿ ಕರೆ ಹಿಂದಿನ ಅಸಲಿ ಕಾರಣಗಳೇನು ಗೊತ್ತೇ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING :: ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೆ, ಚಿನ್ನದ ದರದಲ್ಲಿ ಭಾರಿ ಇಳಿಕೆ | Gold Price
INDIA

BREAKING :: ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೆ, ಚಿನ್ನದ ದರದಲ್ಲಿ ಭಾರಿ ಇಳಿಕೆ | Gold Price

By kannadanewsnow57

ನವದೆಹಲಿ: ದೇಶದ ಆರ್ಥಿಕತೆಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಒಂದು ಮಹತ್ವದ ಕರೆ ಈಗ ಇಡೀ ದೇಶದ ಆಭರಣ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. “ಮುಂದಿನ ಒಂದು ವರ್ಷದ ಕಾಲ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಬೇಡಿ” ಎಂಬ ಪ್ರಧಾನಿಯವರ ಮನವಿಯ ಬೆನ್ನಲ್ಲೇ, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.

ಜೂನ್ ತಿಂಗಳ ಚಿನ್ನದ ಫ್ಯೂಚರ್ ಕಾಂಟ್ರಾಕ್ಟ್ ಬೆಲೆಯು ಬೆಳಗ್ಗೆ 9:40ರ ವೇಳೆಗೆ 574 ರೂ. (0.38%) ಇಳಿಕೆಯಾಗಿದ್ದು, ಪ್ರಸ್ತುತ 1,53,669 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ.ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಬೆಳ್ಳಿಯ ದರವು ಜೂನ್ ಫ್ಯೂಚರ್‌ನಲ್ಲಿ 698 ರೂ. (0.26%) ಏರಿಕೆಯಾಗಿ 2,65,957 ರೂ. ತಲುಪಿದೆ.ಸಂಜೆ 3:30ಕ್ಕೆ ಮಾರುಕಟ್ಟೆ ಮುಕ್ತಾಯವಾಗುವ ವೇಳೆಗೆ ಈ ದರಗಳಲ್ಲಿ ಮತ್ತಷ್ಟು ಏರಿಳಿತವಾಗುವ ನಿರೀಕ್ಷೆಯಿದೆ.

ಏಕೀ ಕರೆ? ಮೋದಿಯವರ ಈ ನಿರ್ಧಾರದ ಹಿಂದಿನ ಅಸಲಿ ಗುಟ್ಟು!

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಕಪ್ಪುಛಾಯೆ ಬೀರಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ:

ವಿದೇಶಿ ವಿನಿಮಯ ರಕ್ಷಣೆ: ಭಾರತವು ಹೆಚ್ಚಿನ ಪ್ರಮಾಣದ ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ ಭಾರಿ ಪ್ರಮಾಣದ ವಿದೇಶಿ ಕರೆನ್ಸಿ ಹೊರಹೋಗುತ್ತಿದೆ. ಇದನ್ನು ತಡೆದು ರೂಪಾಯಿಯ ಮೌಲ್ಯ ರಕ್ಷಿಸುವುದು ಸರ್ಕಾರದ ಗುರಿ.

ಆಮದು ವೆಚ್ಚ ಕಡಿತ: ಆಮದು ವೆಚ್ಚವನ್ನು ತಗ್ಗಿಸಿ ಆ ಹಣವನ್ನು ದೇಶದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವ ಆಶಯ ಸರ್ಕಾರದೂಗಿದೆ.

ಆಭರಣ ಲೋಕಕ್ಕೆ ಆತಂಕ, ಜನಸಾಮಾನ್ಯರಲ್ಲಿ ಬೆಂಬಲ

ಮದುವೆ ಸೀಸನ್ ಆರಂಭವಾಗುತ್ತಿರುವ ಸಂದರ್ಭದಲ್ಲೇ ಬಂದಿರುವ ಈ ಕರೆ ಆಭರಣ ವ್ಯಾಪಾರಿಗಳ ನಿದ್ದೆ ಗೆಡಿಸಿದೆ. ವ್ಯಾಪಾರದಲ್ಲಿ ಭಾರಿ ಕುಸಿತ ಉಂಟಾಗುವ ಭೀತಿ ಎದುರಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಹಿತದೃಷ್ಟಿಯಿಂದ ಹೂಡಿಕೆಯನ್ನು ಬದಲಿಸುವ ಸರ್ಕಾರದ ಕರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (1 ಗ್ರಾಂ – 24 ಕ್ಯಾರಟ್)

ನಗರ ಚಿನ್ನದ ದರ (1 ಗ್ರಾಂ)
ಬೆಂಗಳೂರು ₹15,213
ದೆಹಲಿ ₹15,228
ಮುಂಬೈ ₹15,213
ಚೆನ್ನೈ ₹15,382
ಹೈದರಾಬಾದ್ ₹15,213
ಅಹಮದಾಬಾದ್ ₹15,218
BREAKING :: Gold price drops sharply after PM Modi's call | Gold Price
Share. Facebook Twitter LinkedIn WhatsApp Email

Related Posts

`EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ `ATM-UPI’ ಮೂಲಕ `PF’ ಹಣ ವಿತ್ ಡ್ರಾ ಮಾಡಬಹುದು.!

1 Min Read

ಮದುವೆಗೆ ಚಿನ್ನ ಖರೀದಿಸಬೇಡಿ.. ಪ್ರಧಾನಿ ಮೋದಿ ಕರೆ ಹಿಂದಿನ ಅಸಲಿ ಕಾರಣಗಳೇನು ಗೊತ್ತೇ?

2 Mins Read

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

2 Mins Read
Recent News

ಬಾಗಲಕೋಟೆ : ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳಿಂದ ಹಲ್ಲೆ!

`EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ `ATM-UPI’ ಮೂಲಕ `PF’ ಹಣ ವಿತ್ ಡ್ರಾ ಮಾಡಬಹುದು.!

ಮದುವೆಗೆ ಚಿನ್ನ ಖರೀದಿಸಬೇಡಿ.. ಪ್ರಧಾನಿ ಮೋದಿ ಕರೆ ಹಿಂದಿನ ಅಸಲಿ ಕಾರಣಗಳೇನು ಗೊತ್ತೇ?

BREAKING :: ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೆ, ಚಿನ್ನದ ದರದಲ್ಲಿ ಭಾರಿ ಇಳಿಕೆ | Gold Price

State News
KARNATAKA

ಬಾಗಲಕೋಟೆ : ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳಿಂದ ಹಲ್ಲೆ!

By ಸುರೇಶ್‌ KARNATAKA 1 Min Read

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜೈಲಲ್ಲಿ ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳು ಭೀಕರವಾಗಿ ಹಲ್ಲೆ…

ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ `ಇ-ಸ್ವತ್ತು’ ಅರ್ಜಿ ಸಲ್ಲಿಕೆ, ಉಚಿತವಾಗಿ ಸಿಗಲಿದೆ ನಮೂನೆ 11A, 11B

BREAKING : ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಸ್ಪೋಟಕ ಪತ್ತೆ ಪ್ರಕರಣ : ತನಿಖೆಗೆ ಎಂಟ್ರಿ ಕೊಟ್ಟ ‘NIA’!

ಅನ್ಯಾಯ ಮಾಡಲು ಬಂದರೆ ಮೆಟ್ಟಿನಿಂದ ಹೊಡೆಯುವೆ : ಜಾರಕಿಹೊಳಿ ವಿರುದ್ಧ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.