ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜೈಲಲ್ಲಿ ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಜಮಖಂಡಿ ಜೈಲಿನ ಜೈಲರ್ ವಿಡಿ ಕುಂಬಾರ್ ಗೆ ಕೈದಿಗಳಿಂದ ಹಲ್ಲೆ ನಡೆದಿದೆ.
ಹೌದು ಜಮಖಂಡಿ ಜೈಲಿನ ಜೈಲರ್ ವಿಡಿ ಕುಂಬಾರ್ ಗೆ ಕೈದಿಗಳಿಂದ ಹಲ್ಲೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವಿಡಿ ಕುಂಬಾರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಡಿತರ ಅಕ್ಕಿ ಅಕ್ರಮ ಸಾಗಾಟ ಕೇಸ್ ನಲ್ಲಿ ಗ್ಯಾಂಗ್ ಅರೆಸ್ಟ್ ಆಗಿತ್ತು. ಜಾಕಿರ್ ಹುಸೇನ್ ಹಾಗು ಗ್ಯಾಂಗ್ ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಇದೀಗ ಅದೇ ಗ್ಯಾಂಗ್ ನಡುವೆ ನಿನ್ನೆ ಸಂಜೆ ಜೈಲಲ್ಲಿ ಜಗಳ ಆಗಿತ್ತು. ಈ ವೇಳೆ ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಹಲ್ಲೆ ಮಾಡಿದ್ದಾರೆ. ಜಾಕಿರ್ ಹುಸೇನ್, ಮಕಾಂದರ್ ಫಯಾಜ್, ಅಶೋಕ್, ಅಫ್ರಾತ ತಾಳಿಕೋಟಿಯಿಂದ ಜೈಲರ್ ವಿಡಿ ಕುಂಬಾರ್ ಮೇಲೆ ಹಲ್ಲೆ ನಡೆದಿದೆ.








