ಬೆಂಗಳೂರು : ಕೇಂದ್ರ ಸರ್ಕಾರವು ರಾಜ್ಯದ ಆಹಾರ ಭದ್ರತೆ ಕಾಯ್ದೆಯಡಿ 2026ನೇ ಮೇ ತಿಂಗಳಿಗೂ ಜೂನ್ ಈ ಎರಡೂ ತಿಂಗಳುಗಳಲ್ಲಿ ಸಂಬಂದಿಸಿದ ಪಡಿತರ ಅಕ್ಕಿಯನ್ನು ಇದೇ ತಿಂಗಳ ಅಂದರೆ 2026ನೇ ಮೇ ತಿಂಗಳಲ್ಲಿಯೇ ವಿತರಣೆ ಮಾಡುವಂತೆ ನಿರ್ದೇಶನಗಳನ್ನು ಇರುವುದರಿಂದ ಪ್ರಸ್ತುತ 2026ನೇ ಮೇ ತಿಂಗಳಲ್ಲಿ ಮೇ ಹಾಗೂ ಜೂನ್ ಈ ಎರಡೂ ತಿಂಗಳ ಸಂಬಂದಿಸಿದಂತೆ ಅಕ್ಕಿಯನ್ನು ವಿತರಣೆ ಮಾಡುವ ಜಿಲ್ಲೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆಯನ್ನು ನೀಡಲಾಗಿರುತ್ತದೆ.
ಅಂತ್ಯೋದಯ ಅನ್ನಯೋಜನೆ ಪಡಿತರ ಚೀಟಿಗೆ ಎರಡೂ ತಿಂಗಳ ಪಡಿತರ ಅಕ್ಕಿ ಒಟ್ಟು 70 ಕೆಜಿ, ಹಾಗೂ ಆಧ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿತಿಂಗಳು ಪ್ರತಿಸಿದಸ್ಯರಿಗೆ 5 ಕೆಜಿಯಂತೆ ಒಟ್ಟು 10 ಕೆಜಿ ಅಕ್ಕಿಯನ್ನು ಕೇಂದ್ರಿಯವಾಗಿ ಎರಡು ಪ್ರತ್ಯೇಕ ಬಯೋಮೆಟ್ರಿಕ್ ನೀಡುವ ಮೂಲಕ ಪಡಿತರ ಚೀಟಿದಾರರಿಗೆ ವಿತರಿಸಲಾಗುವುದು. ಹಾಗೂ ಕಾರ್ಡುಕೋರ ಸಾರ್ವಜನಿಕರು ನೀಡುತ್ತಿರುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಬಿ ಪಿ ಎಲ್ ಕಾರ್ಡುಗಳನ್ನು ರದ್ದು ಪಡಿಸಲಾಗುವುದು.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಮೇ ಹಾಗೂ ಜೂನ್ ತಿಂಗಳ ಅಕ್ಕಿಯನ್ನು 2026ನೇ ಜೂನ್ ತಿಂಗಳಲ್ಲಿ, ವಿತರಣೆ ಮಾಡಲಾಗುವುದೆಂದು ಈ ಮೂಲಕ ಸಾರ್ವಜನಿಕರಿಗೆ ಪತ್ರಿಕಾ ಮೂಲಕ ತಿಳಿಸಲಾಗಿದೆ.








