ವಾಷಿಂಗ್ಟನ್: ಕೊರೊನಾ ಮಾದರಿಯಲ್ಲೇ ಮತ್ತೊಂದು ವೈರಸ್ ಜಗತ್ತನ್ನು ಬೆಚ್ಚಿಬೀಳಿಸುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಕ್ರೂಸ್ ಹಡಗೊಂದರಲ್ಲಿ ಹರಡಿದ್ದ ಹಂಟಾವೈರಸ್ (Hantavirus), ಇದೀಗ ವಿಮಾನದ ಫ್ಲೈಟ್ ಅಟೆಂಡೆಂಟ್ ಒಬ್ಬರಿಗೆ ತಗುಲಿರುವುದು ದೃಢಪಟ್ಟಿದ್ದು, ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬೆಳವಣಿಗೆಯು ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ.
ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಿದ್ದ ಫ್ಲೈಟ್ ಅಟೆಂಡೆಂಟ್ ಒಬ್ಬರಲ್ಲಿ ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಪಾಸಣೆ ನಡೆಸಿದಾಗ ಅವರಿಗೆ ಹಂಟಾವೈರಸ್ ಇರುವುದು ಪತ್ತೆಯಾಗಿದೆ.
ಈ ಹಿಂದೆ ಒಂದು ಪ್ರವಾಸಿ ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸ್ಫೋಟಗೊಂಡಿತ್ತು. ಅಲ್ಲಿಂದಲೇ ಈ ಸೋಂಕು ಹರಡಿರಬಹುದು ಎಂದು ಸಂಶೋಧಕರು ಶಂಕಿಸಿದ್ದಾರೆ.
ವಿಮಾನಯಾನ ಮತ್ತು ಹಡಗು ಪ್ರಯಾಣ ಮಾಡುವವರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಸೋಂಕು ಪತ್ತೆಯಾದ ವಿಮಾನದಲ್ಲಿದ್ದ ಇತರ ಪ್ರಯಾಣಿಕರನ್ನು ಪತ್ತೆಹಚ್ಚುವ (Contact Tracing) ಪ್ರಕ್ರಿಯೆ ಆರಂಭವಾಗಿದೆ.
ಹಂಟಾವೈರಸ್ ಮುಖ್ಯವಾಗಿ ಇಲಿಗಳು ಮತ್ತು ಹೆಗ್ಗಣಗಳಿಂದ ಹರಡುವ ವೈರಸ್ ಆಗಿದೆ. ಇದು ನೇರವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವುದು ಅಪರೂಪವಾದರೂ, ಸೋಂಕಿತ ಪ್ರಾಣಿಗಳ ಮಲ-ಮೂತ್ರ ಅಥವಾ ಅವುಗಳ ಸಂಪರ್ಕಕ್ಕೆ ಬಂದ ಗಾಳಿಯನ್ನು ಸೇವಿಸುವುದರಿಂದ ಮನುಷ್ಯರಿಗೆ ತಗಲುತ್ತದೆ.








![ವಿಡಿಯೊ: ಮಲ್ಲಿಗೆ ಮುಡಿದು, ತೆಳು ನೀಲಿ ಸೀರೆಯಲ್ಲಿ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂದ ತ್ರಿಶಾ ದಳಪತಿ ವಿಜಯ್ ರಾಜಕೀಯ ಪ್ರವೇಶ - [Dalapathi Vijay Politics], ತ್ರಿಶಾ ಕೃಷ್ಣನ್ ತಿಳಿ ನೀಲಿ ಸೀರೆ - [Trisha Krishnan in Blue Saree], ತಮಿಳಗ ವೆಟ್ರಿ ಕಳಗಂ ಮುಖ್ಯಮಂತ್ರಿ - [TVK Chief Minister Vijay]](https://kannadanewsnow.com/kannada/wp-content/uploads/2026/05/ವಿಜಯ್-ಪ್ರಮಾಣವಚನ-ಕಾರ್ಯಕ್ರಮದಲ್ಲಿ-ತ್ರಿಶಾ-ಕೃಷ್ಣನ್-Trisha-Krishnan-at-Vijay-Swearing-in-Ceremony-450x253.jpg)