Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಮದುವೆ ಭರವಸೆ ಉಲ್ಲಂಘನೆ ಅತ್ಯಾಚಾರವಲ್ಲ’ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

07/05/2026 6:02 AM

BIG NEWS :ರಾಜ್ಯದಲ್ಲಿ ಮರ್ಯಾದೆ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಕಾಯ್ದೆ’ ಜಾರಿ

07/05/2026 5:54 AM

BREAKING : ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ `ಸುವೇಂದು ಅಧಿಕಾರಿ’ ಆಪ್ತ ಸಹಾಯಕನ ಭೀಕರ ಹತ್ಯೆ.!

07/05/2026 5:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS :ರಾಜ್ಯದಲ್ಲಿ ಮರ್ಯಾದೆ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಕಾಯ್ದೆ’ ಜಾರಿ
KARNATAKA

BIG NEWS :ರಾಜ್ಯದಲ್ಲಿ ಮರ್ಯಾದೆ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಕಾಯ್ದೆ’ ಜಾರಿ

By kannadanewsnow5707/05/2026 5:54 AM

ಬೆಂಗಳೂರು: ಕರ್ನಾಟಕದಲ್ಲಿ ವಿವಾಹದ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಮತ್ತು ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ರಾಜ್ಯ ಸರ್ಕಾರವು ‘ಇವ ನಮ್ಮವ’ (ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ, ನಿಷೇಧ ಕಾಯ್ದೆ-2026) ಅನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಮಂಗಳವಾರ ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕಾಯ್ದೆಯ ಪ್ರಮುಖ ಉದ್ದೇಶಗಳು:

ಜಾತಿ ಆಧಾರಿತ ಅಪರಾಧಗಳ ಮೂಲಕ ನಡೆಯುವ ಮಾನವ ಹಕ್ಕು ಉಲ್ಲಂಘನೆ ತಡೆಯುವುದು.

ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡುವುದು ಮತ್ತು ವೈಯಕ್ತಿಕ ಆಯ್ಕೆಗಳ ಮೇಲೆ ಜಾತಿ ಆಧಾರಿತ ಬಲವಂತದ ಭೇದಭಾವವನ್ನು ತಡೆಯುವುದು.

ಪ್ರಾಪ್ತ ವಯಸ್ಕ ಗಂಡು-ಹೆಣ್ಣು ಪರಸ್ಪರ ಒಪ್ಪಿ ಮದುವೆಯಾಗಲು ಯಾರ ಅನುಮತಿಯೂ ಬೇಕಿಲ್ಲ ಹಾಗೂ ಕುಟುಂಬದವರಿಂದ ಯಾವುದೇ ಅಡೆತಡೆ ಇಲ್ಲದಂತೆ ವಿವಾಹವಾಗುವ ಹಕ್ಕನ್ನು ಖಚಿತಪಡಿಸುವುದು.

ಯಾವೆಲ್ಲಾ ಕೃತ್ಯಗಳು ಅಪರಾಧ?

ಈ ಹೊಸ ಕಾನೂನಿನ ಅಡಿಯಲ್ಲಿ ಈ ಕೆಳಗಿನವುಗಳನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ:

ವಿವಾಹಿತ ಅಥವಾ ಪ್ರೇಮಿಗಳ ಮೇಲೆ ಸಂಬಂಧಿಕರು ಅಥವಾ ಸ್ನೇಹಿತರು ನಡೆಸುವ ದೈಹಿಕ ಹಲ್ಲೆ ಮತ್ತು ಕೊಲೆ.

ಅಂತರ್ಜಾತಿ ವಿವಾಹಿತರಿಗೆ ಕಿರುಕುಳ ನೀಡುವುದು ಅಥವಾ ಅವರನ್ನು ಬೇರ್ಪಡಿಸಲು ಯತ್ನಿಸುವುದು.

ಅಪಹರಣ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಗೂ ದಂಪತಿಗಳನ್ನು ಅಥವಾ ಅವರ ಕುಟುಂಬವನ್ನು ಗ್ರಾಮದಿಂದ ಹೊರಹಾಕುವುದು.

ದಂಪತಿಗಳ ವಿರುದ್ಧ ತಿಥಿ ಅಥವಾ ಅಂತ್ಯಕ್ರಿಯೆ ಶಾಸ್ತ್ರಗಳನ್ನು ಮಾಡುವುದು.

ಮದುವೆಯಾದ ಜೋಡಿಗಳನ್ನು ಬಲವಂತವಾಗಿ ಅಣ್ಣ-ತಂಗಿ ಎಂದು ಘೋಷಿಸುವುದು ಅಥವಾ ಮನೆಯಲ್ಲಿ ಬಂಧಿಯಾಗಿಡುವುದು.

ಆಸ್ತಿ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ದ್ವೇಷ ಹರಡುವುದು.

ಕಠಿಣ ಶಿಕ್ಷೆಯ ವಿವರಗಳು:

ಕಾಯ್ದೆಯ ಉಲ್ಲಂಘನೆಯಾದಲ್ಲಿ ಈ ಕೆಳಗಿನ ಶಿಕ್ಷೆಗಳನ್ನು ವಿಧಿಸಲಾಗುತ್ತದೆ:

ಮರ್ಯಾದೆ ಹತ್ಯೆ: ಕನಿಷ್ಠ 5 ವರ್ಷಗಳ ಶಿಕ್ಷೆ.

ಗಂಭೀರ ಹಲ್ಲೆ: ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ.

ಸಣ್ಣಪುಟ್ಟ ಹಲ್ಲೆ: 2 ವರ್ಷಗಳ ಕಠಿಣ ಸೆರೆಮನೆ ವಾಸ ಮತ್ತು 3 ಲಕ್ಷ ರೂ. ದಂಡ.

ವಂಚನೆಯ ಮದುವೆ: ಮದುವೆ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ನಡೆಸಿ, ನಂತರ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.

ಈ ಕಾಯ್ದೆಯು ಅಂತರ್ಜಾತಿ ವಿವಾಹವಾಗುವವರಿಗೆ ರಕ್ಷಣೆ ನೀಡಲು ‘ಇವ ನಮ್ಮವ’ ವೇದಿಕೆಯನ್ನು ಸ್ಥಾಪಿಸಲು ಕೂಡ ನಿಯಮ ರೂಪಿಸಿದೆ.

BIG NEWS: 5 years imprisonment fixed for honour killing in the state: `This is our law' implemented
Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದಲ್ಲೊಂದು ‘ಅರಣ್ಯ ಇಲಾಖೆಯ ನಡುತೋಪು’ ಅಕ್ರಮ ಕಡಿತಲೆ: ಕಣ್ಮುಚ್ಚಿ ಕುಳಿತ ‘ಅರಣ್ಯಾಧಿಕಾರಿ’ಗಳು!

06/05/2026 9:02 PM2 Mins Read

BREAKING: ರಾಸಲೀಲೆ ವಿಡಿಯೋ ಕೇಸ್: ರಾಜ್ಯ ಸರ್ಕಾರದಿಂದ ರಾಮಚಂದ್ರ ರಾವ್ ಅಮಾನತು ವಾಪಸ್

06/05/2026 8:45 PM1 Min Read

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

06/05/2026 8:40 PM1 Min Read
Recent News

BIG NEWS : `ಮದುವೆ ಭರವಸೆ ಉಲ್ಲಂಘನೆ ಅತ್ಯಾಚಾರವಲ್ಲ’ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

07/05/2026 6:02 AM

BIG NEWS :ರಾಜ್ಯದಲ್ಲಿ ಮರ್ಯಾದೆ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಕಾಯ್ದೆ’ ಜಾರಿ

07/05/2026 5:54 AM

BREAKING : ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ `ಸುವೇಂದು ಅಧಿಕಾರಿ’ ಆಪ್ತ ಸಹಾಯಕನ ಭೀಕರ ಹತ್ಯೆ.!

07/05/2026 5:44 AM

BREAKING: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಬಿಎ ಗುಂಡಿಕ್ಕಿ ಬರ್ಬರ ಹತ್ಯೆ

06/05/2026 11:45 PM
State News
KARNATAKA

BIG NEWS :ರಾಜ್ಯದಲ್ಲಿ ಮರ್ಯಾದೆ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್ : `ಇವ ನಮ್ಮವ ಕಾಯ್ದೆ’ ಜಾರಿ

By kannadanewsnow5707/05/2026 5:54 AM KARNATAKA 2 Mins Read

ಬೆಂಗಳೂರು: ಕರ್ನಾಟಕದಲ್ಲಿ ವಿವಾಹದ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಮತ್ತು ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ರಾಜ್ಯ…

BIG NEWS: ರಾಜ್ಯದಲ್ಲೊಂದು ‘ಅರಣ್ಯ ಇಲಾಖೆಯ ನಡುತೋಪು’ ಅಕ್ರಮ ಕಡಿತಲೆ: ಕಣ್ಮುಚ್ಚಿ ಕುಳಿತ ‘ಅರಣ್ಯಾಧಿಕಾರಿ’ಗಳು!

06/05/2026 9:02 PM

BREAKING: ರಾಸಲೀಲೆ ವಿಡಿಯೋ ಕೇಸ್: ರಾಜ್ಯ ಸರ್ಕಾರದಿಂದ ರಾಮಚಂದ್ರ ರಾವ್ ಅಮಾನತು ವಾಪಸ್

06/05/2026 8:45 PM

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

06/05/2026 8:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.