ತುಮಕೂರು : ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭಾರಿ ಗೆಲುವಿನೊಂದಿಗೆ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ. ಇದೀಗ ಕರ್ನಾಟಕ ಮೂಲದ ವ್ಯಕ್ತಿ ಒಬ್ಬರು ಟಿವಿಕೆ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದಳಪತಿ ವಿಜಯ್ ಟಿವಿಕೆ ಪಕ್ಷದಿಂದ ಕರ್ನಾಟಕದ ಶಾಸಕರಾಗಿದ್ದು ತಮಿಳುನಾಡಿನ ಮೆಟ್ಟುಪಾಳ್ಯಂ ಕ್ಷೇತ್ರದಲ್ಲಿ ಸುನಿಲ್ ಆನಂದ್ ಎನ್ನುವವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಹೌದು ಸುನೀಲ್ ಆನಂದ್ ಮೂಲತಹ ಕರ್ನಾಟಕದವರು. ಇವರು ತುಮಕೂರು ಮೂಲದವರಾಗಿದ್ದು, ಕಳೆದ 96 ವರ್ಷಗಳ ಹಿಂದೆ ತಮಿಳುನಾಡಿಗೆ ಅವರ ಕುಟುಂಬ ವಲಸೆ ಹೋಗಿತ್ತು. ಬರಗಾಲದಲ್ಲಿ ತಮಿಳುನಾಡು ಸೇರಿದ ಸುನಿಲ್ ಕುಟುಂಬ, ಸುನಿಲ್ ಆನಂದ್ ಮುತ್ತತ ಬೋರೇಗೌಡ ಸ್ಥಳಾಂತರ ಆಗಿದ್ದರು. ಇದೀಗ ಪಕ್ಷದ ಶಾಸಕರಾಗಿ ಸುನಿಲ್ ಆನಂದ್ ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೆಗೆಟ್ಟ ಹೋಬಳಿಯ ಒಣಕೆಘಟ್ಟ ಮೂಲದವರಾಗಿದ್ದು, ಇದೀಗ ಸುನಿಲ್ ಆನಂದ್ ಅವರು, ಮೆಟ್ಟುಪಾಳ್ಯಂ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮೆಟ್ಟುಪಾಳ್ಯಂನಲ್ಲಿ ಕನ್ನಡಿಗನ ಜಯಭೇರಿ
ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ತಮಿಳುನಾಡಿನ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುನಿಲ್ ಆನಂದ್ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ಹೊರರಾಜ್ಯದ ರಾಜಕೀಯ ಅಖಾಡದಲ್ಲಿ ಕನ್ನಡಿಗರೊಬ್ಬರು ಗೆಲುವಿನ ಪತಾಕೆ ಹಾರಿಸಿದ್ದಾರೆ.
ಕರ್ನಾಟಕದ ನಂಟು ಮತ್ತು ರಾಜಕೀಯ ಪಯಣ
ಶಾಸಕರಾಗಿ ಆಯ್ಕೆಯಾದ ಸುನಿಲ್ ಆನಂದ್ ಅವರು ಮೂಲತಃ ಕರ್ನಾಟಕದವರಾಗಿದ್ದು, ದೀರ್ಘಕಾಲದಿಂದ ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ವಿಜಯ್ ಅವರ ಸಮಾಜಮುಖಿ ಕಾರ್ಯಗಳು ಮತ್ತು ಟಿವಿಕೆ ಪಕ್ಷದ ಸಿದ್ಧಾಂತಗಳಿಂದ ಪ್ರೇರಿತರಾಗಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸುನಿಲ್ ಅವರಿಗೆ ದಳಪತಿ ವಿಜಯ್ ಅವರು ಟಿಕೆಟ್ ನೀಡಿ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಮತದಾರರು ಅವರ ಕೈ ಹಿಡಿದಿದ್ದು, ಮೆಟ್ಟುಪಾಳ್ಯಂನ ಶಾಸಕರಾಗಿ ಆಯ್ಕೆ ಮಾಡಿದ್ದಾರೆ.
ಟಿವಿಕೆ ಪಕ್ಷದ ಭರ್ಜರಿ ಪ್ರದರ್ಶನ
ದ್ರಾವಿಡ ರಾಜಕಾರಣದ ಭದ್ರಕೋಟೆಯಾಗಿರುವ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಅಂತಹ ದೊಡ್ಡ ಪಕ್ಷಗಳ ನಡುವೆ ಟಿವಿಕೆ ಪಕ್ಷವು ತನ್ನದೇ ಆದ ಪ್ರಾಬಲ್ಯ ಮೆರೆದಿದೆ. ಯುವಕರು ಮತ್ತು ಅಭಿಮಾನಿಗಳ ಬೆಂಬಲದೊಂದಿಗೆ ವಿಜಯ್ ಅವರು ಸೃಷ್ಟಿಸಿದ ಈ ಅಲೆ ಈಗ ಅಧಿಕೃತವಾಗಿ ಶಾಸನಸಭೆಯಲ್ಲಿ ಪ್ರತಿಧ್ವನಿಸಲಿದೆ. ಸುನಿಲ್ ಆನಂದ್ ಅವರಂತಹ ನಿಷ್ಠಾವಂತ ಕಾರ್ಯಕರ್ತರ ಗೆಲುವು ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕನ್ನಡಿಗರ ಸಂಭ್ರಮ
ನೆರೆಯ ರಾಜ್ಯದಲ್ಲಿ ಕನ್ನಡಿಗರೊಬ್ಬರು ಶಾಸಕರಾಗಿ ಆಯ್ಕೆಯಾಗಿರುವುದು ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಅವರ ತವರು ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ದಳಪತಿ ವಿಜಯ್ ಅವರ ನಾಯಕತ್ವ ಮತ್ತು ಸುನಿಲ್ ಆನಂದ್ ಅವರ ಪರಿಶ್ರಮಕ್ಕೆ ಸಿಕ್ಕ ಫಲ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.








