ಚಂಡೀಗಢ:ಪಂಜಾಬ್ ರಾಜ್ಯದಲ್ಲಿ ಒಂದೇ ದಿನ ಎರಡು ಕಡೆಗಳಲ್ಲಿ ಸ್ಫೋಟ ಸಂಭವಿಸಿದ್ದು, ಭದ್ರತಾ ಸಂಸ್ಥೆಗಳು ತಲ್ಲಣಗೊಂಡಿವೆ. ಜಲಂಧರ್ನಲ್ಲಿರುವ ಬಿಎಸ್ಎಫ್ (BSF) ಕೇಂದ್ರ ಕಚೇರಿ ಮತ್ತು ಅಮೃತಸರದ ಸೇನಾ ಶಿಬಿರದ (Army Camp) ಸಮೀಪ ಈ ಸ್ಫೋಟಗಳು ನಡೆದಿವೆ. ಘಟನೆಯ ಬೆನ್ನಲ್ಲೇ ಪಂಜಾಬ್ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
ಜಲಂಧರ್ನ ಬಿಎಸ್ಎಫ್ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಅಮೃತಸರದ ಖಾಸಾ ಪ್ರದೇಶದಲ್ಲಿರುವ ಸೇನಾ ಶಿಬಿರದ ಬಳಿಯೂ ಇದೇ ಮಾದರಿಯ ಸ್ಫೋಟ ನಡೆದಿದೆ ಎಂದು ವರದಿಯಾಗಿದೆ.
ಈ ಸ್ಫೋಟಗಳಿಗೆ ಬಳಸಲಾದ ಸ್ಫೋಟಕಗಳ ಬಗ್ಗೆ ವಿಧಿವಿಜ್ಞಾನ ತಂಡಗಳು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳು (NIA) ಮಾಹಿತಿಯನ್ನು ಕಲೆಹಾಕುತ್ತಿವೆ. ಇದು ಭಯೋತ್ಪಾದಕ ಕೃತ್ಯವೇ ಅಥವಾ ಡ್ರೋನ್ ಮೂಲಕ ನಡೆದ ದಾಳಿಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.








