ಚೆನ್ನೈ: ತಮಿಳು ನಟ ದಳಪತಿ ವಿಜಯ್ ಅವರ ರಾಜಕೀಯ ಎಂಟ್ರಿ ಇಡೀ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿರುವುದು ಹಳೆಯ ಮಾತು. ಆದರೆ, ಅವರ ಮೇಲಿನ ಅಭಿಮಾನ ಕೇವಲ ದೊಡ್ಡವರಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಮಕ್ಕಳಲ್ಲಿಯೂ ಅತೀಯಾಗಿ ಮನೆಮಾಡಿದೆ. ಇತ್ತೀಚಿನ ವರದಿಗಳ ಪ್ರಕಾರ, ವಿಜಯ್ ಅವರ ಪಕ್ಷಕ್ಕೆ ಮತ ಹಾಕುವಂತೆ ಮಕ್ಕಳು ತಮ್ಮ ಪೋಷಕರಿಗೆ ವಿಚಿತ್ರ ಹಾಗೂ ಆಘಾತಕಾರಿ ರೀತಿಯಲ್ಲಿ ‘ಬೆದರಿಕೆ’ ಹಾಕುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.
ಮಕ್ಕಳ ವಿಚಿತ್ರ ‘ಬೆದರಿಕೆ’ ತಂತ್ರಗಳು
ವಿಜಯ್ ಅಭಿಮಾನಿ ಸಂಘದ ಮೂಲಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮಕ್ಕಳು ತಮ್ಮ ಪೋಷಕರನ್ನು ಒಪ್ಪಿಸಲು ಈ ಕೆಳಗಿನ ಹಾದಿ ಹಿಡಿದಿದ್ದಾರೆ:
ಅನ್ನಕ್ಕೆ ವಿಷ ಹಾಕುವ ಎಚ್ಚರಿಕೆ: ಕೆಲವು ಮಕ್ಕಳು ತಮ್ಮ ಪೋಷಕರು ಬೇರೆ ಪಕ್ಷಕ್ಕೆ ಮತ ಹಾಕಲು ನಿರ್ಧರಿಸಿದರೆ, “ನೀವು ವಿಜಯ್ ಅಣ್ಣನಿಗೆ ವೋಟ್ ಹಾಕದಿದ್ದರೆ, ನಾವು ತಿನ್ನುವ ಅನ್ನಕ್ಕೆ ವಿಷ ಹಾಕಿಕೊಳ್ಳುತ್ತೇವೆ ಅಥವಾ ನಿಮಗೂ ಹಾಕುತ್ತೇವೆ” ಎಂದು ಹಠ ಮಾಡುತ್ತಿದ್ದಾರಂತೆ!
ಸಗಣಿ ಎರಚುವ ಬೆದರಿಕೆ: ಇನ್ನು ಕೆಲವು ತುಂಟ ಮಕ್ಕಳು, ಒಂದು ವೇಳೆ ಪೋಷಕರು ವಿಜಯ್ ಪಕ್ಷಕ್ಕೆ ಬೆಂಬಲ ನೀಡದಿದ್ದರೆ ಮನೆಯ ಮುಂದೆ ಅಥವಾ ಪೋಷಕರ ಮೇಲೆ ಸಗಣಿ ಎರಚುವುದಾಗಿ ಬೆದರಿಸುತ್ತಿದ್ದಾರೆ.
“ನಮ್ಮಿಷ್ಟದ ನಾಯಕ ಗೆಲ್ಲಬೇಕು, ನೀವೆಲ್ಲ ಅವರಿಗೆ ಮತ ಹಾಕಬೇಕು” ಎಂದು ಹೇಳಿ ಊಟ ಬಿಟ್ಟು ಹಠ ಮಾಡುತ್ತಿರುವ ನೂರಾರು ಉದಾಹರಣೆಗಳು ತಮಿಳುನಾಡಿನ ಹಳ್ಳಿಗಳಲ್ಲಿ ವರದಿಯಾಗಿವೆ.
ಮಕ್ಕಳ ಈ ಅತಿರೇಕದ ವರ್ತನೆಯನ್ನು ನೋಡಿ ಪೋಷಕರು ಒಂದು ಕಡೆ ಬೆಚ್ಚಿಬಿದ್ದರೆ, ಮತ್ತೊಂದೆಡೆ ನಟ ವಿಜಯ್ ಅವರ ವರ್ಚಸ್ಸು ಕಿರಿಯ ವಯಸ್ಸಿನವರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ವಿಜಯ್ ಅವರ ಸಿನೆಮಾಗಳು ಮತ್ತು ಅವರು ಇತ್ತೀಚೆಗೆ ನಡೆಸಿದ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮಗಳು ಮಕ್ಕಳ ಮನಸ್ಸಿನಲ್ಲಿ ಅವರನ್ನು ಒಬ್ಬ ದೊಡ್ಡ ‘ರೋಲ್ ಮಾಡೆಲ್’ ಆಗಿ ಕೂರಿಸಿವೆ.
நல்ல குடும்பம்.அம்மா நல்லா இருந்தாதான் குழந்தை நல்லா வளரும் pic.twitter.com/jVBEBdG8ia
— உளவாளி (@withkaran) April 21, 2026








