ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಮುಖ್ಯಸ್ಥ ವಿಜಯ್, ತಮ್ಮ ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಗೆಲುವನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುವುದಾಗಿ ಹೇಳಿರುವ ಅವರು, “ನನಗೆ ಅಧಿಕಾರಕ್ಕಿಂತ ಜನರ ಸೇವೆಯೇ ಮುಖ್ಯ” ಎಂದು ಘೋಷಿಸಿದ್ದಾರೆ.
“ಇದು ನನ್ನ ವೈಯಕ್ತಿಕ ಗೆಲುವಲ್ಲ, ಇದು ತಮಿಳುನಾಡಿನ ಪ್ರತಿಯೊಬ್ಬ ಪ್ರಜೆಯ ಜಯ. ಬದಲಾವಣೆಗಾಗಿ ಹಂಬಲಿಸುತ್ತಿದ್ದ ಜನತೆ ನನಗೆ ಈ ಅವಕಾಶ ನೀಡಿದ್ದಾರೆ,” ಎಂದು ವಿಜಯ್ ಅಭಿಮಾನಿಗಳನ್ನುದ್ದೇಶಿಸಿ ಹೇಳಿದ್ದಾರೆ.ರಾಜಕೀಯ ಕೇವಲ ಒಂದು ಸಾಧನವಷ್ಟೇ ಹೊರತು ಗುರಿಯಲ್ಲ. ನಮ್ಮ ಪಕ್ಷದ ಮೂಲ ಮಂತ್ರ “ಮೊದಲು ಜನ, ಆಮೇಲೆ ರಾಜಕಾರಣ” (People First, Politics Later) ಎಂಬುದಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಗೆಲುವಿನ ಅಬ್ಬರದಲ್ಲಿ ಯಾರನ್ನೂ ಅವಹೇಳನ ಮಾಡಬಾರದು ಮತ್ತು ದ್ವೇಷದ ರಾಜಕಾರಣಕ್ಕೆ ಅವಕಾಶ ನೀಡಬಾರದು ಎಂದು ಅವರು ತಮ್ಮ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.







