ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೆಯ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ. ಎಸಿಎಫ್ ಮೋಹನ್ ಹಾಗು ಜೀಪ್ ಡ್ರೈವರ್ ಮೇಲೂ ಕೂಡ ವಾಮಾಚಾರ ಪ್ರಯೋಗ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಮನೆ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ.
ಕಿಡಿಗೇಡಿಗಳು ಎ ಸಿ ಎಫ್ ಮೋಹನ್ ಹಾಗೂ ಜೀಪ್ ಚಾಲಕನ ಫೋಟೋ ಇಟ್ಟು ವಾಮಾಚಾರ ಮಾಡಿದ್ದಾರೆ. ಕೂಡಲೇ ಕಚೇರಿಯ ಸಿಬ್ಬಂದಿಯ ಮೇಲೆ ಅನುಮಾನ ಬಂದು ಎ ಸಿ ಎಫ್ ಮೋಹನ್ ಇದೀಗ ದೂರು ನೀಡಿದ್ದಾರೆ. ಮೋಹನ್ ಅವರ ದೂರಿನ ಆಧಾರದ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








