ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಇಂದು ಹೊಸ ದಾಖಲೆ ನಿರ್ಮಾಣವಾಗಿದೆ. ಖ್ಯಾತ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಐತಿಹಾಸಿಕ ಮುನ್ನಡೆಯನ್ನು ಸಂಭ್ರಮಿಸಲು ಸಾವಿರಾರು ಅಭಿಮಾನಿಗಳು ರಸ್ತೆಗಿಳಿದಿದ್ದಾರೆ.
ರಸ್ತೆಯುದ್ದಕ್ಕೂ ವಿಜಯ್ ಅಭಿಮಾನಿಗಳ ಹರ್ಷೋದ್ಗಾರ
ಮತ ಎಣಿಕೆಯ ಟ್ರೆಂಡ್‌ಗಳಲ್ಲಿ ವಿಜಯ್ ಅವರ ಪಕ್ಷವು ಪ್ರಬಲ ಪೈಪೋಟಿ ನೀಡಿ ಮ್ಯಾಜಿಕ್ ನಂಬರ್‌ನತ್ತ ಮುನ್ನುಗ್ಗುತ್ತಿದ್ದಂತೆ, ವಿಜಯ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು. ಈ ವೇಳೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ವಿಜಯ್ ಅವರ ಕಾರು ಬರುತ್ತಿದ್ದಂತೆ ಸಾವಿರಾರು ಬೆಂಬಲಿಗರು ಕಾರನ್ನು ಸುತ್ತುವರಿದರು.ತಮ್ಮ ನೆಚ್ಚಿನ ‘ದಳಪತಿ’ ಮೇಲೆ ಅಭಿಮಾನಿಗಳು ರಸ್ತೆಯುದ್ದಕ್ಕೂ ಹೂವಿನ ಎಸಳುಗಳನ್ನು ಸುರಿಸುವ ಮೂಲಕ ಭವ್ಯ ಸ್ವಾಗತ ಕೋರಿದರು.
“ತಮಿಳುನಾಡಿನ ಮುಂದಿನ ಸಿಎಂ ವಿಜಯ್” ಎಂಬ ಘೋಷಣೆಗಳು ಚೆನ್ನೈನ ಬೀದಿಗಳಲ್ಲಿ ಮೊಳಗಿದವು.
ದಶಕಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳ ನಡುವೆಯೇ ಹಂಚಿಹೋಗಿದ್ದ ತಮಿಳುನಾಡು ರಾಜಕೀಯಕ್ಕೆ ವಿಜಯ್ ಅವರು ಮೂರನೇ ಪ್ರಬಲ ಶಕ್ತಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
#WATCH | Chennai | TVK chief Vijay’s supporters surround his vehicle and shower petals on his car, to congratulate him on his party’s performance in Tamil Nadu elections pic.twitter.com/lib0WzgLLh
— ANI (@ANI) May 4, 2026








