ಶಿವಮೊಗ್ಗ: ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಗರದ ಲಯನ್ಸ್ ಕ್ಲಬ್ ಶ್ಲಾಘನೀಯ ಹೆಜ್ಜೆಯಿರಿಸಿದೆ. ನಗರದ ಶ್ರೀ ಮಾರಿಕಾಂಬ ರುದ್ರಭೂಮಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹದ ಬೂತ್ಗಳನ್ನು ವಿತರಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಚಾಲನೆ
ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪ್ಲಾಸ್ಟಿಕ್ ಸಂಗ್ರಹದ ಬೂತ್ಗಳ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದನ್ನು ತಡೆಗಟ್ಟಲು ಇಂತಹ ಕ್ರಮಗಳು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ನಗರದಾದ್ಯಂತ ಬೂತ್ಗಳ ವಿತರಣೆ
ಶಾಸಕರು ಚಾಲನೆ ನೀಡಿದ ಬೆನ್ನಲ್ಲೇ ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಪ್ರಸನ್ನ ಟಿ. ಮತ್ತು ಅವರ ತಂಡವು ನಗರದ ಪ್ರಮುಖ ಪ್ರದೇಶಗಳಾದ ಸರ್ಕಾರಿ ಆಸ್ಪತ್ರೆ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ಲಾಸ್ಟಿಕ್ ಬಾಟಲ್ ಕಲೆಕ್ಷನ್ ಬೂತ್ಗಳನ್ನು ವಿತರಿಸಿದರು.
ಮಾರಿಕಾಂಬ ರುದ್ರಭೂಮಿಗೆ ಬೂತ್ ಹಸ್ತಾಂತರ
ಶ್ರೀ ಮಾರಿಕಾಂಬ ರುದ್ರಭೂಮಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ ಟಿ., ಲಯನ್ಸ್ ಪದಾಧಿಕಾರಿಗಳಾದ ಈ.ಎನ್. ನಾಗರಾಜ್, ಗುರುಲಿಂಗಯ್ಯ, ಪ್ರಭಾಕರ್ ಜೈನ್ ಅವರು ಜೊತೆಗೂಡಿ ರುದ್ರಭೂಮಿಯ ನಿರ್ವಹಣೆ ಮಾಡುತ್ತಿರುವ ದಯಾನಂದ್ ಅವರಿಗೆ ಪ್ಲಾಸ್ಟಿಕ್ ಬಾಟಲ್ ಸಂಗ್ರಹದ ಬೂತ್ ಅನ್ನು ಹಸ್ತಾಂತರಿಸಿದರು.
ಲಯನ್ಸ್ ಕ್ಲಬ್ಗೆ ಧನ್ಯವಾದ
ಲಯನ್ಸ್ ಕ್ಲಬ್ನ ಈ ಸಾಮಾಜಿಕ ಸೇವೆಯನ್ನು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾದ ಪವಿತ್ರಾ ನಾಗರಾಜ್ ಅವರು ಶ್ಲಾಘಿಸಿದ್ದಾರೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅಧ್ಯಕ್ಷ ಪ್ರಸನ್ನ ಟಿ. ಹಾಗೂ ಅವರ ತಂಡವು ಮಾಡಿರುವ ಈ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ ಅವರು, ಇಂತಹ ಸಾಮಾಜಿಕ ಸೇವೆಗಳು ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಗಮನಿಸಿ: ಕೆಎಸ್ಆರ್ ಬೆಂಗಳೂರು–ಸಿಂಧನೂರು ಡೈಲಿ ಎಕ್ಸ್’ಪ್ರೆಸ್ ವೇಳಾಪಟ್ಟಿ ಪರಿಷ್ಕರಣೆ
BIG NEWS: ‘ಟೂರಿಸ್ಟ್ ವೀಸಾ’ದಲ್ಲಿ ರೆಸ್ಟೋರೆಂಟ್, ಹೋಟೆಲ್ ನಡೆಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ








