Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬಾಂಗ್ಲಾದೇಶದಲ್ಲಿ ಶ್ರೀರಾಮನ ಮೂರ್ತಿ ವಿರೂಪಕ್ಕೆ ಆಕ್ರೋಶ: ಹಿಂದೂಗಳಿಂದ ಬೃಹತ್ ಪಂಜಿನ ಮೆರವಣಿಗೆ, ಸರ್ಕಾರಕ್ಕೆ 72 ಗಂಟೆಗಳ ಗಡುವು!

BIG NEWS : `PF’ ಖಾತೆದಾರರೇ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ? ಜಸ್ಟ್ ಮಿಸ್ಡ್ ಕಾಲ್ ಕೊಟ್ಟು ಹೀಗೆ ಚೆಕ್ ಮಾಡಿ!

ನೀಟ್ ಮರುಪರೀಕ್ಷೆ: ಟೆಲಿಗ್ರಾಂ ನಿಷೇಧದ ನಡುವೆಯೂ ನಕಲಿ ಪ್ರಶ್ನೆಪತ್ರಿಕೆ ಮಾರಾಟ; ರಾಜಸ್ಥಾನದ ಯುವಕನ ಬಂಧನ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪರಿಸರ ರಕ್ಷಣೆಯತ್ತ ‘ಲಯನ್ಸ್ ಕ್ಲಬ್’ ಮಹತ್ವದ ಹೆಜ್ಜೆ: ಸಾಗರ ಮಾರಿಕಾಂಬ ರುದ್ರಭೂಮಿಗೆ ‘ಪ್ಲಾಸ್ಟಿಕ್ ಬಾಟಲ್ ಕಲೆಕ್ಷನ್ ಬೂತ್’ ಹಸ್ತಾಂತರ
KARNATAKA

ಪರಿಸರ ರಕ್ಷಣೆಯತ್ತ ‘ಲಯನ್ಸ್ ಕ್ಲಬ್’ ಮಹತ್ವದ ಹೆಜ್ಜೆ: ಸಾಗರ ಮಾರಿಕಾಂಬ ರುದ್ರಭೂಮಿಗೆ ‘ಪ್ಲಾಸ್ಟಿಕ್ ಬಾಟಲ್ ಕಲೆಕ್ಷನ್ ಬೂತ್’ ಹಸ್ತಾಂತರ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಗರದ ಲಯನ್ಸ್ ಕ್ಲಬ್ ಶ್ಲಾಘನೀಯ ಹೆಜ್ಜೆಯಿರಿಸಿದೆ. ನಗರದ ಶ್ರೀ ಮಾರಿಕಾಂಬ ರುದ್ರಭೂಮಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹದ ಬೂತ್‌ಗಳನ್ನು ವಿತರಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದೆ.

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಚಾಲನೆ

ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪ್ಲಾಸ್ಟಿಕ್ ಸಂಗ್ರಹದ ಬೂತ್‌ಗಳ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದನ್ನು ತಡೆಗಟ್ಟಲು ಇಂತಹ ಕ್ರಮಗಳು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.

ನಗರದಾದ್ಯಂತ ಬೂತ್‌ಗಳ ವಿತರಣೆ

ಶಾಸಕರು ಚಾಲನೆ ನೀಡಿದ ಬೆನ್ನಲ್ಲೇ ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಪ್ರಸನ್ನ ಟಿ. ಮತ್ತು ಅವರ ತಂಡವು ನಗರದ ಪ್ರಮುಖ ಪ್ರದೇಶಗಳಾದ ಸರ್ಕಾರಿ ಆಸ್ಪತ್ರೆ ಹಾಗೂ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ಲಾಸ್ಟಿಕ್ ಬಾಟಲ್ ಕಲೆಕ್ಷನ್ ಬೂತ್‌ಗಳನ್ನು ವಿತರಿಸಿದರು.

ಮಾರಿಕಾಂಬ ರುದ್ರಭೂಮಿಗೆ ಬೂತ್ ಹಸ್ತಾಂತರ

ಶ್ರೀ ಮಾರಿಕಾಂಬ ರುದ್ರಭೂಮಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ ಟಿ., ಲಯನ್ಸ್ ಪದಾಧಿಕಾರಿಗಳಾದ ಈ.ಎನ್. ನಾಗರಾಜ್, ಗುರುಲಿಂಗಯ್ಯ, ಪ್ರಭಾಕರ್ ಜೈನ್ ಅವರು ಜೊತೆಗೂಡಿ ರುದ್ರಭೂಮಿಯ ನಿರ್ವಹಣೆ ಮಾಡುತ್ತಿರುವ ದಯಾನಂದ್ ಅವರಿಗೆ ಪ್ಲಾಸ್ಟಿಕ್ ಬಾಟಲ್ ಸಂಗ್ರಹದ ಬೂತ್ ಅನ್ನು ಹಸ್ತಾಂತರಿಸಿದರು.

ಲಯನ್ಸ್ ಕ್ಲಬ್‌ಗೆ ಧನ್ಯವಾದ

ಲಯನ್ಸ್ ಕ್ಲಬ್‌ನ ಈ ಸಾಮಾಜಿಕ ಸೇವೆಯನ್ನು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾದ ಪವಿತ್ರಾ ನಾಗರಾಜ್ ಅವರು ಶ್ಲಾಘಿಸಿದ್ದಾರೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅಧ್ಯಕ್ಷ ಪ್ರಸನ್ನ ಟಿ. ಹಾಗೂ ಅವರ ತಂಡವು ಮಾಡಿರುವ ಈ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ ಅವರು, ಇಂತಹ ಸಾಮಾಜಿಕ ಸೇವೆಗಳು ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮಂಜೂರು ಮಾಡಲು ಸರ್ಕಾರಕ್ಕೆ, ಸಿಎಸ್ ಷಡಕ್ಷರಿಗೆ ಸಾಗರ ತಾಲ್ಲೂಕು ಅಧ್ಯಕ್ಷ ಸಂತೋಷ್ ಕುಮಾರ್ ಮನವಿ

ಗಮನಿಸಿ: ಕೆಎಸ್ಆರ್ ಬೆಂಗಳೂರು–ಸಿಂಧನೂರು ಡೈಲಿ ಎಕ್ಸ್’ಪ್ರೆಸ್ ವೇಳಾಪಟ್ಟಿ ಪರಿಷ್ಕರಣೆ

BIG NEWS: ‘ಟೂರಿಸ್ಟ್ ವೀಸಾ’ದಲ್ಲಿ ರೆಸ್ಟೋರೆಂಟ್, ಹೋಟೆಲ್ ನಡೆಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

Share. Facebook Twitter LinkedIn WhatsApp Email

Related Posts

ಸೂರ್ಯನ ಸುತ್ತ `ಉಂಗುರಾಕಾರ’ದ ಮನಮೋಹಕ ದೃಶ್ಯ : ಅಪರೂಪದ ಖಗೋಳ ವಿಸ್ಮಯ ಕಂಡು ಬೆರಗಾದ ವಿದ್ಯಾರ್ಥಿಗಳು.!

1 Min Read

ಬಡವರು, ರೈತರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಿ: ಸಾಗರದಲ್ಲಿ ಹೆಚ್.ಎಲ್.ಶ್ರೀಧರ್ ಆಗ್ರಹ

2 Mins Read

BREAKING : ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಪ್ರಚಾರ: ‘ಕುಮಾರಸ್ವಾಮಿ ಫಾರ್ ಸಿಎಂ’ ಜಾಲತಾಣದ ವಿರುದ್ಧ `FIR’ ದಾಖಲು.!

1 Min Read
Recent News

​ಬಾಂಗ್ಲಾದೇಶದಲ್ಲಿ ಶ್ರೀರಾಮನ ಮೂರ್ತಿ ವಿರೂಪಕ್ಕೆ ಆಕ್ರೋಶ: ಹಿಂದೂಗಳಿಂದ ಬೃಹತ್ ಪಂಜಿನ ಮೆರವಣಿಗೆ, ಸರ್ಕಾರಕ್ಕೆ 72 ಗಂಟೆಗಳ ಗಡುವು!

BIG NEWS : `PF’ ಖಾತೆದಾರರೇ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ? ಜಸ್ಟ್ ಮಿಸ್ಡ್ ಕಾಲ್ ಕೊಟ್ಟು ಹೀಗೆ ಚೆಕ್ ಮಾಡಿ!

ನೀಟ್ ಮರುಪರೀಕ್ಷೆ: ಟೆಲಿಗ್ರಾಂ ನಿಷೇಧದ ನಡುವೆಯೂ ನಕಲಿ ಪ್ರಶ್ನೆಪತ್ರಿಕೆ ಮಾರಾಟ; ರಾಜಸ್ಥಾನದ ಯುವಕನ ಬಂಧನ!

ನಾಳೆ ದೇಶದ 551 ನಗರಗಳಲ್ಲಿ `NEET-UG’ ಮರು ಪರೀಕ್ಷೆ : ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ | NEET-UG Re Exam

State News
KARNATAKA

ಸೂರ್ಯನ ಸುತ್ತ `ಉಂಗುರಾಕಾರ’ದ ಮನಮೋಹಕ ದೃಶ್ಯ : ಅಪರೂಪದ ಖಗೋಳ ವಿಸ್ಮಯ ಕಂಡು ಬೆರಗಾದ ವಿದ್ಯಾರ್ಥಿಗಳು.!

By kannadanewsnow57 KARNATAKA 1 Min Read

ವಿಜಯಪುರ: ಜಿಲ್ಲೆಯ ತಿಕೋಟ ತಾಲೂಕಿನ ಘೋನಸಗಿ ಗ್ರಾಮದಲ್ಲಿ ವಿಶಿಷ್ಟ ಹಾಗೂ ಅಪರೂಪದ ಖಗೋಳ ವಿಸ್ಮಯವೊಂದು ಸಂಭವಿಸಿದೆ. ಇಲ್ಲಿನ ಸರ್ಕಾರಿ ಕನ್ನಡ…

ಬಡವರು, ರೈತರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಿ: ಸಾಗರದಲ್ಲಿ ಹೆಚ್.ಎಲ್.ಶ್ರೀಧರ್ ಆಗ್ರಹ

BREAKING : ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಪ್ರಚಾರ: ‘ಕುಮಾರಸ್ವಾಮಿ ಫಾರ್ ಸಿಎಂ’ ಜಾಲತಾಣದ ವಿರುದ್ಧ `FIR’ ದಾಖಲು.!

ಮನ್ಮುಲ್ ನಿಂದ ಕೆರೆಗೆ ಹರಿದ ರಾಸಾಯನಿಕಯುಕ್ತ ನೀರು: ಸಾವಿರಾರು ಮೀನುಗಳ ಮಾರಣಹೋಮ, ಲಕ್ಷಾಂತರ ರೂ. ನಷ್ಟ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.