ನವದೆಹಲಿ:ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು (ಮೇ 4) ಬೆಳಿಗ್ಗೆಯಿಂದ ಆರಂಭವಾಗಿದೆ. ಆದರೆ, ಅಧಿಕೃತವಾಗಿ ಯಾರು ಗೆಲ್ಲುತ್ತಾರೆ ಎಂಬ ಸ್ಪಷ್ಟ ಚಿತ್ರಣ ಸಿಗುವ ಮೊದಲೇ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವದ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿವೆ.
ಪಕ್ಷದ ಕಚೇರಿಯಲ್ಲಿ ನೂರಾರು ಕೆಜಿ ಬಿಸಿಬಿಸಿ ಜಿಲೇಬಿಗಳನ್ನು ತಯಾರಿಸಲಾಗುತ್ತಿದೆ. ಕಾರ್ಯಕರ್ತರು ಮತ್ತು ನಾಯಕರಿಗೆ ಸಿಹಿ ಹಂಚಲು ದೊಡ್ಡ ಮಟ್ಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಬೆಳಿಗ್ಗೆ 4 ಗಂಟೆಯಿಂದಲೇ ಅಡುಗೆ ಕೆಲಸಗಳು ಶುರುವಾಗಿದ್ದು, ಸುಮಾರು 400 ರಿಂದ 500 ಜನರಿಗೆ ಉಪಹಾರ ಮತ್ತು ಸಿಹಿ ತಿಂಡಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಲ್ಲಿನ ಮುಖ್ಯ ಬಾಣಸಿಗರು ತಿಳಿಸಿದ್ದಾರೆ.
ಜಿಲೇಬಿ ಮಾತ್ರವಲ್ಲದೆ ಬಂಗಾಳದ ರಸಗುಲ್ಲಾ, ಮಿಸ್ತಿ ದೋಯಿ (ಸಿಹಿ ಮೊಸರು), ರಬ್ರಿ, ಸ್ಯಾಂಡ್ವಿಚ್, ಆಲೂ ಪೂರಿ ಮತ್ತು ಪೋಹಾವನ್ನು ಕೂಡ ಮೆನುವಿನಲ್ಲಿ ಸೇರಿಸಲಾಗಿದೆ.
#WATCH | Delhi: Jalebis are being prepared at the BJP Headquarters in Delhi as counting of votes for the elections to the Assemblies of Assam, Keralam, Tamil Nadu, West Bengal and Puducherry begins.
Counting of votes for by-polls in seven Assembly constituencies of five… pic.twitter.com/9zBuvWQnfz
— ANI (@ANI) May 4, 2026








