Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮಗೆ ಬೆದರಿಕೆ ಅಥವಾ ನಿಂದನೆಯ ಕರೆಗಳು ಬರುತ್ತಿವೆಯೇ? ಇಲ್ಲಿವೆ ನೀವು ಅನುಸರಿಸಬೇಕಾದ ಕಾನೂನು ಕ್ರಮಗಳು!

04/05/2026 6:30 AM

ಐಪಿಎಲ್‌ನಲ್ಲಿ ಮೆಗಾ ಡೀಲ್: 13,700 ಕೋಟಿ ರೂ.ಗೆ ‘ರಾಜಸ್ಥಾನ್ ರಾಯಲ್ಸ್’ ಮಾರಾಟ; ಮಿತ್ತಲ್-ಪೂನಾವಾಲಾ ತೆಕ್ಕೆಗೆ ಹಾರಿದ ರಾಯಲ್ಸ್ ಪಡೆ!

04/05/2026 6:24 AM

BREAKING : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆಯಲ್ಲಿ ಬಿಜೆಪಿಯ `ಡಿ.ಎನ್. ಜೀವರಾಜ್‌’ಗೆ ಗೆಲುವು : ಚುನಾವಣಾ ಆಯೋಗ ಅಧಿಕೃತ ಘೋಷಣೆ.!

04/05/2026 6:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ : ಪಂಚ ಗದ್ದುಗೆ ಯಾರಿಗೆ?
INDIA

BIG NEWS : ಇಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ : ಪಂಚ ಗದ್ದುಗೆ ಯಾರಿಗೆ?

By kannadanewsnow5704/05/2026 6:00 AM

ನವದೆಹಲಿ: ದೇಶದ ರಾಜಕೀಯ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಇಂದು (ಸೋಮವಾರ) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಮಧ್ಯಾಹ್ನ ಅಥವಾ ಸಂಜೆಯ ಹೊತ್ತಿಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.

ರಾಜ್ಯವಾರು ಕುತೂಹಲದ ಅಂಶಗಳು:
ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಬಿಜೆಪಿ ಭೇದಿಸುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇಲ್ಲಿ ಒಟ್ಟು 294 ಸ್ಥಾನಗಳಿದ್ದು, ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ.

ತಮಿಳುನಾಡು: ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಗೆ ಪಳನಿಸ್ವಾಮಿ ಹಾಗೂ ವಿಜಯ್ ಅವರ ಪಕ್ಷಗಳು ಹೇಗೆ ಪೈಪೋಟಿ ನೀಡಲಿವೆ ಎಂಬುದು ಕುತೂಹಲ ಮೂಡಿಸಿದೆ. ಒಟ್ಟು 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕು.

ಕೇರಳ: ಎಲ್‌ಡಿಎಫ್, ಯುಡಿಎಫ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 140 ಸ್ಥಾನಗಳಲ್ಲಿ ಅಧಿಕಾರ ಹಿಡಿಯಲು 71 ಸ್ಥಾನಗಳ ಅವಶ್ಯಕತೆಯಿದೆ.

ಅಸ್ಸಾಂ: ಬಿಜೆಪಿ ಇಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ನಗೆ ಬೀರಲು ಸಜ್ಜಾಗಿದ್ದರೆ, ಕಾಂಗ್ರೆಸ್ ಅಧಿಕಾರ ಕಸಿದುಕೊಳ್ಳುವ ತವಕದಲ್ಲಿದೆ. 126 ಸ್ಥಾನಗಳಲ್ಲಿ 64 ಸ್ಥಾನ ಗೆದ್ದವರು ಬಹುಮತ ಪಡೆಯಲಿದ್ದಾರೆ.

ಪುದುಚೇರಿ: ಇಲ್ಲಿ ರಂಗಸ್ವಾಮಿ ನೇತೃತ್ವದ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಹಣಾಹಣಿ ಇದ್ದು, ಒಟ್ಟು 30 ಸ್ಥಾನಗಳಲ್ಲಿ 16 ಸ್ಥಾನಗಳ ಬಹುಮತ ಬೇಕಾಗಿದೆ.

ದಾವಣಗೆರೆ, ಬಾಗಲಕೋಟೆ ಉಪಚುನಾವಣೆ: ಯಾರ ಮಡಿಲಿಗೆ ಜಯ?
ರಾಜ್ಯದ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯೂ ಇಂದು ನಡೆಯಲಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.

ಎಣಿಕಾ ಕೇಂದ್ರ: ದಾವಣಗೆರೆ ಜಿಲ್ಲೆಯ ಮತಗಳ ಎಣಿಕೆ ಡಿ.ಆರ್.ಆರ್. ವಿದ್ಯಾಸಂಸ್ಥೆಯಲ್ಲಿ ಹಾಗೂ ಬಾಗಲಕೋಟೆ ಕ್ಷೇತ್ರದ ಮತಗಳ ಎಣಿಕೆ ನಗರದ ತೋಟಗಾರಿಕೆ ವಿವಿಯಲ್ಲಿ ನಡೆಯಲಿದೆ.

ಭದ್ರತೆ: ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

BIG NEWS: Election results of five states today: Who will win the five seats?
Share. Facebook Twitter LinkedIn WhatsApp Email

Related Posts

ನಿಮಗೆ ಬೆದರಿಕೆ ಅಥವಾ ನಿಂದನೆಯ ಕರೆಗಳು ಬರುತ್ತಿವೆಯೇ? ಇಲ್ಲಿವೆ ನೀವು ಅನುಸರಿಸಬೇಕಾದ ಕಾನೂನು ಕ್ರಮಗಳು!

04/05/2026 6:30 AM1 Min Read

ಐಪಿಎಲ್‌ನಲ್ಲಿ ಮೆಗಾ ಡೀಲ್: 13,700 ಕೋಟಿ ರೂ.ಗೆ ‘ರಾಜಸ್ಥಾನ್ ರಾಯಲ್ಸ್’ ಮಾರಾಟ; ಮಿತ್ತಲ್-ಪೂನಾವಾಲಾ ತೆಕ್ಕೆಗೆ ಹಾರಿದ ರಾಯಲ್ಸ್ ಪಡೆ!

04/05/2026 6:24 AM1 Min Read

ಇರಾನ್ ಸಂಧಾನಕ್ಕೆ ಟ್ರಂಪ್ ಬ್ರೇಕ್! “ನಿಮ್ಮ ಆಫರ್ ಒಪ್ಪಲು ಸಾಧ್ಯವಿಲ್ಲ” ಎಂದ ಅಮೆರಿಕ ಅಧ್ಯಕ್ಷ !

04/05/2026 6:17 AM1 Min Read
Recent News

ನಿಮಗೆ ಬೆದರಿಕೆ ಅಥವಾ ನಿಂದನೆಯ ಕರೆಗಳು ಬರುತ್ತಿವೆಯೇ? ಇಲ್ಲಿವೆ ನೀವು ಅನುಸರಿಸಬೇಕಾದ ಕಾನೂನು ಕ್ರಮಗಳು!

04/05/2026 6:30 AM

ಐಪಿಎಲ್‌ನಲ್ಲಿ ಮೆಗಾ ಡೀಲ್: 13,700 ಕೋಟಿ ರೂ.ಗೆ ‘ರಾಜಸ್ಥಾನ್ ರಾಯಲ್ಸ್’ ಮಾರಾಟ; ಮಿತ್ತಲ್-ಪೂನಾವಾಲಾ ತೆಕ್ಕೆಗೆ ಹಾರಿದ ರಾಯಲ್ಸ್ ಪಡೆ!

04/05/2026 6:24 AM

BREAKING : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆಯಲ್ಲಿ ಬಿಜೆಪಿಯ `ಡಿ.ಎನ್. ಜೀವರಾಜ್‌’ಗೆ ಗೆಲುವು : ಚುನಾವಣಾ ಆಯೋಗ ಅಧಿಕೃತ ಘೋಷಣೆ.!

04/05/2026 6:24 AM

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

04/05/2026 6:17 AM
State News
KARNATAKA

BREAKING : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆಯಲ್ಲಿ ಬಿಜೆಪಿಯ `ಡಿ.ಎನ್. ಜೀವರಾಜ್‌’ಗೆ ಗೆಲುವು : ಚುನಾವಣಾ ಆಯೋಗ ಅಧಿಕೃತ ಘೋಷಣೆ.!

By kannadanewsnow5704/05/2026 6:24 AM KARNATAKA 1 Min Read

ಬೆಂಗಳೂರು: ಹೈಕೋರ್ಟ್ ಸೂಚನೆಯಂತೆ ನಡೆದ ಅಂಚೆ ಮತಗಳ ಮರುಎಣಿಕೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು…

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

04/05/2026 6:17 AM

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಂದು ಸುಪ್ರೀಂ ಕೋರ್ಟ್‌ ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ

04/05/2026 6:09 AM

BIG NEWS: ಇಂದು ಕರ್ನಾಟಕದ ಎರಡು ಕ್ಷೇತ್ರಗಳು ಸೇರಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ

04/05/2026 6:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.