Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಿತ್ರದುರ್ಗದಲ್ಲಿ ಭೀಕರ ಮರ್ಡರ್ : ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

03/05/2026 12:19 PM

BIG NEWS : ಸೋದರ ಸಂಬಂಧಿಗಳ ಮದುವೆ `ಹಿಂದೂ ವಿವಾಹ ಕಾಯ್ದೆಯಡಿ’ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು

03/05/2026 12:18 PM

ಮನೆಯಿಂದಲೇ ಆನ್ ಲೈನ್ ಮೂಲಕ ಹಣ ಗಳಿಸಬೇಕೆ? ಇಲ್ಲಿವೆ 10 ಸುಲಭ ಮಾರ್ಗಗಳು!

03/05/2026 12:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸೋದರ ಸಂಬಂಧಿಗಳ ಮದುವೆ `ಹಿಂದೂ ವಿವಾಹ ಕಾಯ್ದೆಯಡಿ’ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು
INDIA

BIG NEWS : ಸೋದರ ಸಂಬಂಧಿಗಳ ಮದುವೆ `ಹಿಂದೂ ವಿವಾಹ ಕಾಯ್ದೆಯಡಿ’ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5703/05/2026 12:18 PM

ರಾಯ್ಪುರ: “ಯಾವುದೇ ಸಾಮಾಜಿಕ ಸಂಪ್ರದಾಯ ಅಥವಾ ಪದ್ಧತಿಗಳು ಕಾನೂನಿಗಿಂತ ಮಿಗಿಲಲ್ಲ,” ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್ಗಢ ಹೈಕೋರ್ಟ್, ಸೋದರ ಸಂಬಂಧಿಗಳ (ತಾಯಿಯ ತಂಗಿ ಅಥವಾ ಅಕ್ಕನ ಮಕ್ಕಳು ) ನಡುವಿನ ವಿವಾಹವು ಹಿಂದೂ ವಿವಾಹ ಕಾಯ್ದೆಯಡಿ ಅಸಿಂಧು ಎಂದು ಮಹತ್ವದ ತೀರ್ಪು ನೀಡಿದೆ.

ಜಾಂಜ್ಗಿರ್-ಚಂಪಾ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಹಳೆಯ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್ನ ವಿಭಾಗೀಯ ಪೀಠವು ಈ ಸ್ಪಷ್ಟನೆ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?

2018ರಲ್ಲಿ ಜಾಂಜ್ಗಿರ್-ಚಂಪಾ ಜಿಲ್ಲೆಯ ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು (ದೊಡ್ಡಮ್ಮನ ಮಗಳು) ವಿವಾಹವಾಗಿದ್ದನು. ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ನಂತರ, ಪತಿಯು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, “ನಮ್ಮಿಬ್ಬರ ತಾಯಂದಿರು ಸೋದರಿಯರಾಗಿದ್ದು, ನಾವು ನಿಷೇಧಿತ ಸಂಬಂಧದ ವ್ಯಾಪ್ತಿಗೆ ಬರುತ್ತೇವೆ. ಆದ್ದರಿಂದ ಈ ವಿವಾಹವನ್ನು ರದ್ದುಗೊಳಿಸಬೇಕು,” ಎಂದು ಕೋರಿದ್ದನು.

ಕೌಟುಂಬಿಕ ನ್ಯಾಯಾಲಯದ ಹಳೆಯ ತೀರ್ಪು

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಫ್ಯಾಮಿಲಿ ಕೋರ್ಟ್, ಸ್ಥಳೀಯ ಪಟೇಲ್ ಸಮಾಜದ ‘ಬ್ರಹ್ಮ ವಿವಾಹ’ ಪದ್ಧತಿಯಲ್ಲಿ ಇಂತಹ ಮದುವೆಗಳಿಗೆ ಅವಕಾಶವಿದೆ ಎಂಬ ಕಾರಣ ನೀಡಿ ವಿವಾಹವು ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿತ್ತು. ಹೆಂಡತಿಯ ಪರ ವಕೀಲರು ಕೂಡ ಸಾಮಾಜಿಕ ಸಂಪ್ರದಾಯದಂತೆ ಮದುವೆ ನಡೆದಿರುವುದರಿಂದ ಪತಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಜಸ್ಟಿಸ್ ಸಂಜಯ್ ಕೆ. ಅಗರ್ವಾಲ್ ಮತ್ತು ಜಸ್ಟಿಸ್ ಸಂಜಯ್ ಜೈಸ್ವಾಲ್ ಅವರಿದ್ದ ಪೀಠವು ಈ ವಾದವನ್ನು ತಳ್ಳಿಹಾಕಿದೆ. ಯಾವುದೇ ಸಾಮಾಜಿಕ ಪದ್ಧತಿಯು ಕಾನೂನಿನ ಮಾನ್ಯತೆ ಪಡೆಯಬೇಕಾದರೆ ಅದು ಅತ್ಯಂತ ಪುರಾತನವಾಗಿರಬೇಕು, ನಿರಂತರವಾಗಿರಬೇಕು ಮತ್ತು ಸಾರ್ವಜನಿಕ ನೀತಿಗೆ ಅನುಗುಣವಾಗಿರಬೇಕು.

ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ಸೋದರ ಸಂಬಂಧಿಗಳ ನಡುವಿನ ವಿವಾಹವು ‘ಪ್ರತಿಷೇಧಿತ ಸಂಬಂಧದ’ (Degrees of Prohibited Relationship) ಅಡಿಯಲ್ಲಿ ಬರುತ್ತದೆ. ಇಂತಹ ವಿವಾಹಗಳು ಕಾನೂನಿನ ದೃಷ್ಟಿಯಲ್ಲಿ ಶೂನ್ಯ (Void).ವಿವಾಹವು ಕಾನೂನುಬದ್ಧವಾಗಿ ಅಸಿಂಧುಗೊಂಡರೂ ಸಹ, ಪತ್ನಿಯು ಪತಿಯಿಂದ ಭರಾಣಪೋಷಣೆ (Maintenance) ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೌಟುಂಬಿಕ ಮತ್ತು ಸಾಮಾಜಿಕ ಪದ್ಧತಿಗಳಿಗಿಂತ ದೇಶದ ಕಾನೂನೇ ದೊಡ್ಡದು ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ಇನ್ನು ಮುಂದೆ ಇಂತಹ ವಿವಾದಾತ್ಮಕ ವಿವಾಹ ಪ್ರಕರಣಗಳಿಗೆ ಈ ತೀರ್ಪು ಒಂದು ಪ್ರಮುಖ ನಿದರ್ಶನವಾಗಲಿದೆ.

BIG NEWS: Marriage of cousins ​​is not permissible under the Hindu Marriage Act: High Court gives important verdict
Share. Facebook Twitter LinkedIn WhatsApp Email

Related Posts

‘ಆಪರೇಷನ್ ಸಿಂದೂರ್’ ಭಯೋತ್ಪಾದನೆ ನಿರ್ಮೂಲನೆಗೆ ಭಾರತದ ಸಂಕಲ್ಪದ ಪ್ರತೀಕ: ರಾಜನಾಥ್ ಸಿಂಗ್ ಮಹತ್ವದ ಹೇಳಿಕೆ

03/05/2026 11:33 AM1 Min Read

​ಜೋರು ಸದ್ದಿನ ಡಿಜೆ ಸಂಗೀತಕ್ಕೆ 140 ಕೋಳಿಗಳು ಸಾವು: ಅಬ್ಬರದ ಸಂಗೀತ ಪ್ರಾಣ ತೆಗೆಯಬಲ್ಲದೇ?

03/05/2026 10:34 AM1 Min Read

​ಒಂದೇ ಫೋನ್ ನಂಬರ್ ಎಲ್ಲೆಡೆ ಬಳಸ್ತಿದ್ದೀರಾ? ಹಾಗಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು

03/05/2026 9:44 AM2 Mins Read
Recent News

BREAKING : ಚಿತ್ರದುರ್ಗದಲ್ಲಿ ಭೀಕರ ಮರ್ಡರ್ : ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

03/05/2026 12:19 PM

BIG NEWS : ಸೋದರ ಸಂಬಂಧಿಗಳ ಮದುವೆ `ಹಿಂದೂ ವಿವಾಹ ಕಾಯ್ದೆಯಡಿ’ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು

03/05/2026 12:18 PM

ಮನೆಯಿಂದಲೇ ಆನ್ ಲೈನ್ ಮೂಲಕ ಹಣ ಗಳಿಸಬೇಕೆ? ಇಲ್ಲಿವೆ 10 ಸುಲಭ ಮಾರ್ಗಗಳು!

03/05/2026 12:12 PM
BREAKING NEWS

BREAKING : ಬೆಂಗಳೂರಲ್ಲಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನ : ಮಕ್ಕಳು ಸಾವು, ಮಹಿಳೆ ಬಚಾವ್!

03/05/2026 11:53 AM
State News
KARNATAKA

BREAKING : ಚಿತ್ರದುರ್ಗದಲ್ಲಿ ಭೀಕರ ಮರ್ಡರ್ : ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

By kannadanewsnow0503/05/2026 12:19 PM KARNATAKA 1 Min Read

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಮನೆಗೆ ನುಗ್ಗಿ ಮಾರಕಸ್ತ್ರಗಳಿಂದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ…

ಮನೆಯಿಂದಲೇ ಆನ್ ಲೈನ್ ಮೂಲಕ ಹಣ ಗಳಿಸಬೇಕೆ? ಇಲ್ಲಿವೆ 10 ಸುಲಭ ಮಾರ್ಗಗಳು!

03/05/2026 12:12 PM
BREAKING NEWS

BREAKING : ಬೆಂಗಳೂರಲ್ಲಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನ : ಮಕ್ಕಳು ಸಾವು, ಮಹಿಳೆ ಬಚಾವ್!

03/05/2026 11:53 AM

ಸಾಮಾನ್ಯ ಪೆಟ್ರೋಲ್ V/s ಪವರ್ ಪೆಟ್ರೋಲ್ : ನಿಮ್ಮ ವಾಹನಕ್ಕೆ ಯಾವುದು ಬೆಸ್ಟ್ ತಿಳಿಯಿರಿ

03/05/2026 11:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.