Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾವಿನ ಭಯವೇ? ಕೇವಲ 5 ರೂಪಾಯಿ ಖರ್ಚಿನಲ್ಲಿ ಹಾವುಗಳನ್ನು ದೂರ ಓಡಿಸಲು ಇಲ್ಲಿದೆ ಮ್ಯಾಜಿಕ್ ಪುಡಿ!

02/05/2026 9:28 PM

ಮದ್ದೂರಿನಲ್ಲಿ ಮೈಸೂರು ದಸರಾ ಮಾದರಿಯ ದೀಪಾಲಂಕಾರ: ಶಾಸಕ ಉದಯ್ ಚಾಲನೆ!

02/05/2026 9:19 PM

ಮನೆಯಲ್ಲಿ ಯುವ ನ್ಯಾಯಾಧೀಶ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ | Delhi judge Aman Sharma

02/05/2026 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದ್ದೂರಿನಲ್ಲಿ ಮೈಸೂರು ದಸರಾ ಮಾದರಿಯ ದೀಪಾಲಂಕಾರ: ಶಾಸಕ ಉದಯ್ ಚಾಲನೆ!
KARNATAKA

ಮದ್ದೂರಿನಲ್ಲಿ ಮೈಸೂರು ದಸರಾ ಮಾದರಿಯ ದೀಪಾಲಂಕಾರ: ಶಾಸಕ ಉದಯ್ ಚಾಲನೆ!

By kannadanewsnow0902/05/2026 9:19 PM

ಮಂಡ್ಯ : ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ದಸರಾ ವೇಳೆ ಜಗಮಗಿಸುವ ದೀಪಾಲಂಕಾರದ ರೀತಿಯಲ್ಲಿ ಮದ್ದೂರು ಉತ್ಸವದ ಅಂಗವಾಗಿ ನಗರದಾದ್ಯಂತ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಶಾಸಕ ಕೆ.ಎಂ.ಉದಯ್ ಶನಿವಾರ ಸಂಜೆ ಚಾಲನೆ ನೀಡಿದರು.

ಮದ್ದೂರು ನಗರದ ಪ್ರವಾಸಿ ಮಂದಿರದ ಬಳಿ ಜಿಲ್ಲಾಧಿಕಾರಿ ಡಾ.ಕುಮಾರ್, ನಗರಸಭಾ ಪೌರಾಯುಕ್ತೆ ಎಸ್.ಎನ್.ರಾಧಿಕಾ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಉದಯ್ ಮದ್ದೂರು ಉತ್ಸವದ ಅಂಗವಾಗಿ ಕಳೆದ ಬಾರಿ ಸಮಯದ ಅಭಾವದಿಂದ ನಗರದ ವಿವಿಧ ಭಾಗಗಳಿಗೆ 10 ಲಕ್ಷ ರೂ ವೆಚ್ಚದಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಆದರೆ, ಈ ಬಾರಿ ಗ್ರಾಮದೇವತೆ ಹಬ್ಬವಾದ ಶ್ರೀ ಮದ್ದೂರಮ್ಮ ಉತ್ಸವ ಹಾಗೂ ಶ್ರೀ ಉಗ್ರ ನರಸಿಂಹ ಸ್ವಾಮಿ ರಥೋತ್ಸವದ ಅಂಗವಾಗಿ ಮದ್ದೂರು ಉತ್ಸವ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಮ್ಯಾರಥಾನ್, ಉತ್ತಮ ರಾಸುಗಳಿಗೆ ಚಾಂಪಿಯನ್ಸ್ ಟ್ರೋಫಿ ಹಾಗೂ 2ಲಕ್ಷ ರೂ ಬಹುಮಾನ, ಕಬ್ಬಡ್ಡಿ, ವಾಲಿಬಾಲ್, ರಂಗೋಲಿ ಸ್ಪರ್ಧೆ ಹಾಗೂ ಏ.6 ರಂದು ಸಂಜೆ ತಾಲೂಕು ಕ್ರೀಡಾಂಗಣದಲ್ಲಿ ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದರ ಜೊತೆಗೆ ಕಳೆದ ಬಾರಿಗಿಂತ ಈ ವರ್ಷ ಮತ್ತಷ್ಟು ಮೆರಗನ್ನು ತರಬೇಕೆಂಬ ಉದ್ದೇಶದಿಂದ ನಗರಸಭೆ ಮತ್ತು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂದಾಜು 25 ಲಕ್ಷ ವೆಚ್ಚದಲ್ಲಿ ಮದ್ದೂರು ನಗರದಾದ್ಯಂತ 8 ದಿನಗಳ ಕಾಲ ದಸರಾ ಮಾದರಿಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಮದ್ದೂರು ಉತ್ಸವಕ್ಕೆ ಮತ್ತಷ್ಟು ಮೆರಗನ್ನು ತರಲಾಗಿದೆ ಎಂದರು.

ಇದೇ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಮುನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಗ್ರೇಡ್ 2 ತಹಶೀಲ್ದಾರ್ ಸೋಮಶೇಖರ್, ಸಿಪಿಐ ನವೀನ್ ಕುಮಾರ್, ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಸದಸ್ಯರಾದ ಸಿದ್ದರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್, ಮಹದೇವಯ್ಯ, ರಾಜೇಂದ್ರ, ಅರುಣ್, ವಿಜಯ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಭಾರತೀಯ ನಾವಿಕರು ಸೇಫ್! ಹಾರ್ಮುಜ್ ಜಲಸಂಧಿ ದಾಟಿದ ಎಲ್‌ಪಿಜಿ ಹಡಗು

BIG NEWS: ನೀವು ಅಂಗಡಿಗಳಲ್ಲಿ ₹10 ನಾಣ್ಯ ತಿರಸ್ಕರಿಸುತ್ತೀರಾ? ಎಚ್ಚರ, ನಿಮ್ಮ ವಿರುದ್ಧ ಕಾನೂನು ಕ್ರಮ ಫಿಕ್ಸ್!

Share. Facebook Twitter LinkedIn WhatsApp Email

Related Posts

BIG NEWS: ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳದ ಎಫೆಕ್ಟ್: ಹೋಟೆಲ್ ತಿಂಡಿ-ಊಟದ ದರ ಹೆಚ್ಚಳಕ್ಕೆ ಮಾಲೀಕರ ನಿರ್ಧಾರ

02/05/2026 8:56 PM2 Mins Read

ಸಚಿವ ಸಂಪುಟ ಪುನಾರಚನೆಯಾದ್ರೆ ತಪ್ಪೇನು?: ಶಿವಮೊಗ್ಗದಲ್ಲಿ ಸಚಿವ ಬೈರತಿ ಸುರೇಶ್ ಪ್ರಶ್ನೆ

02/05/2026 8:53 PM1 Min Read

ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಿ: ಕೈಗಾರಿಕೋದ್ಯಮಿಗಳಲ್ಲಿ ಮದ್ದೂರು ಶಾಸಕ ಕೆ.ಎಂ.ಉದಯ್ ಮನವಿ

02/05/2026 7:54 PM2 Mins Read
Recent News

ಹಾವಿನ ಭಯವೇ? ಕೇವಲ 5 ರೂಪಾಯಿ ಖರ್ಚಿನಲ್ಲಿ ಹಾವುಗಳನ್ನು ದೂರ ಓಡಿಸಲು ಇಲ್ಲಿದೆ ಮ್ಯಾಜಿಕ್ ಪುಡಿ!

02/05/2026 9:28 PM

ಮದ್ದೂರಿನಲ್ಲಿ ಮೈಸೂರು ದಸರಾ ಮಾದರಿಯ ದೀಪಾಲಂಕಾರ: ಶಾಸಕ ಉದಯ್ ಚಾಲನೆ!

02/05/2026 9:19 PM

ಮನೆಯಲ್ಲಿ ಯುವ ನ್ಯಾಯಾಧೀಶ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ | Delhi judge Aman Sharma

02/05/2026 9:14 PM

ನೀವೂ ಬೆತ್ತಲಾಗಿ ಸ್ನಾನ ಮಾಡ್ತೀರಾ? ಹಾಗಿದ್ದರೆ ಈ ಅಪಾಯ ಕಟ್ಟಿಟ್ಟ ಬುತ್ತಿ!

02/05/2026 9:10 PM
State News
KARNATAKA

ಮದ್ದೂರಿನಲ್ಲಿ ಮೈಸೂರು ದಸರಾ ಮಾದರಿಯ ದೀಪಾಲಂಕಾರ: ಶಾಸಕ ಉದಯ್ ಚಾಲನೆ!

By kannadanewsnow0902/05/2026 9:19 PM KARNATAKA 1 Min Read

ಮಂಡ್ಯ : ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ದಸರಾ ವೇಳೆ ಜಗಮಗಿಸುವ ದೀಪಾಲಂಕಾರದ ರೀತಿಯಲ್ಲಿ ಮದ್ದೂರು ಉತ್ಸವದ ಅಂಗವಾಗಿ ನಗರದಾದ್ಯಂತ ವಿಶೇಷ…

BIG NEWS: ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳದ ಎಫೆಕ್ಟ್: ಹೋಟೆಲ್ ತಿಂಡಿ-ಊಟದ ದರ ಹೆಚ್ಚಳಕ್ಕೆ ಮಾಲೀಕರ ನಿರ್ಧಾರ

02/05/2026 8:56 PM

ಸಚಿವ ಸಂಪುಟ ಪುನಾರಚನೆಯಾದ್ರೆ ತಪ್ಪೇನು?: ಶಿವಮೊಗ್ಗದಲ್ಲಿ ಸಚಿವ ಬೈರತಿ ಸುರೇಶ್ ಪ್ರಶ್ನೆ

02/05/2026 8:53 PM

ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಿ: ಕೈಗಾರಿಕೋದ್ಯಮಿಗಳಲ್ಲಿ ಮದ್ದೂರು ಶಾಸಕ ಕೆ.ಎಂ.ಉದಯ್ ಮನವಿ

02/05/2026 7:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.