Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇಂಧನ ದರ ಏರಿಕೆ ಹಿನ್ನೆಲೆ : ಜುಲೈವರೆಗೂ ಅಂತರಾಷ್ಟ್ರೀಯ ಹಾರಾಟ ಕಡಿತಕ್ಕೆ ಏರ್ ಇಂಡಿಯ ನಿರ್ಧಾರ?!

02/05/2026 3:45 PM

BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!

02/05/2026 3:38 PM

ಬೆಂಗಳೂರಲ್ಲಿ ಅರೆಬೆಂದ ಸ್ಥಿತಿಯಲ್ಲಿ ವೃದ್ದೆಯ ಶವ ಪತ್ತೆ : ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ!

02/05/2026 3:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!
KARNATAKA

BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!

By kannadanewsnow0502/05/2026 3:38 PM

ಬೆಂಗಳೂರು : ಕಳೆದ 3 ವರ್ಷಗಳಿಂದ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನಲೆಯಲ್ಲಿ ಲಕ್ಷಾಂತರ ಅರ್ಹ ಬಡವರು ಬಿಪಿಎಲ್‌ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಬಡವರು ಬಿಪಿಎಲ್‌ ಪಡಿತರ ಚೀಟಿಗಾಗಿ ಕಾಯುತ್ತಿದ್ದರೂ, ರಾಜ್ಯ ಸರಕಾರ ಮಾತ್ರ ಕಳೆದ 3 ವರ್ಷಗಳಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನೇ ಕರೆದಿಲ್ಲ. ಇದರಿಂದ ಅರ್ಹ ಬಡವರು ಬಿಪಿಎಲ್‌ ಸೌಲಭ್ಯ ವಂಚಿತರಾಗಿದ್ದಾರೆ.

ರಾಜ್ಯ ಸರಕಾರದ ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಸ್ತುತ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯವರಿಗೆ, ಇ-ಶ್ರಮ್‌ ನೋಂದಾಯಿತ ಕಾರ್ಮಿಕರಿಗೆ, ಬುಡಕಟ್ಟು ಜನಾಂಗದವರಿಗೆ ಆದ್ಯತಾ ಪಡಿತರ ಚೀಟಿ ನೀಡುತ್ತಿದೆ. ಇದರ ಹೊರತಾಗಿ ಲಕ್ಷಾಂತರ ಮಂದಿ ಬಿಪಿಎಲ್‌ ಪಡಿತರ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದಲ್ಲಿ ಅಂತ್ಯೋದಯ ಅನ್ನ ಪಡಿತರ ಚೀಟಿ (ಎಎವೈ)ಗಳು 10,47,080 ಇದ್ದು, 42,76,526 ಫಲಾನುಭವಿಗಳಿದ್ದಾರೆ. ಆದ್ಯತಾ ಪಡಿತರ ಚೀಟಿಗಳು(ಬಿಪಿಎಲ್‌) 1,14,38,886 ಇದ್ದು, 4,00,46,744 ಫಲಾನುಭವಿಗಳಿದ್ದಾರೆ. ಆದ್ಯತೇತರ ಪಡಿತರ ಚೀಟಿಗಳು 29,71,601 ಇದ್ದು, 1,02,18,470 ಫಲಾನುಭವಿಗಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ 1,54,57,567 ಪಡಿತರ ಚೀಟಿಗಳಿದ್ದು, 5,45,41,740 ಫಲಾನುಭವಿಗಳಿದ್ದಾರೆ.

ಸೌಲಭ್ಯಗಳಿಂದ ವಂಚಿತರಾದ ಅರ್ಹ ಫಲಾನುಭವಿಗಳು

ಬಿಪಿಎಲ್‌ ಕಾರ್ಡ್ ಕೇವಲ ಅಕ್ಕಿ ಪಡೆಯಲು ಮಾತ್ರವಲ್ಲದೆ, ಸರ್ಕಾರದ ವಿವಿಧ ಯೋಜನೆಗಳಾದ ಉಚಿತ ವೈದ್ಯಕೀಯ ಚಿಕಿತ್ಸೆ (ಆಯುಷ್ಮಾನ್ ಭಾರತ್), ಗೃಹ ಲಕ್ಷ್ಮಿಯಂತಹ ಗ್ಯಾರಂಟಿ ಯೋಜನೆಗಳು ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯವಾಗಿದೆ. ಕಾರ್ಡ್‌ ಇಲ್ಲದ ಕಾರಣ ಬಡ ರೋಗಿಗಳು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲಾಗದೆ ಪರದಾಡುತ್ತಿದ್ದಾರೆ. “ಸರ್ಕಾರ ಯೋಜನೆಗಳನ್ನು ಘೋಷಿಸುತ್ತಿದೆಯೇ ಹೊರತು, ಅವುಗಳನ್ನು ಪಡೆಯಲು ಬೇಕಾದ ಮೂಲ ದಾಖಲೆಯನ್ನೇ ನೀಡುತ್ತಿಲ್ಲ” ಎಂಬುದು ಸಾರ್ವಜನಿಕರ ದೂರು.

ತಾಂತ್ರಿಕ ನೆಪ ಹಾಗೂ ವಿಳಂಬ ನೀತಿ

ಅನರ್ಹ ಪಡಿತರ ಚೀಟಿಗಳ ರದ್ದತಿ ಮತ್ತು ಕೆವೈಸಿ (KYC) ಅಪ್‌ಡೇಟ್ ಮಾಡುವ ನೆಪದಲ್ಲಿ ಸರ್ಕಾರವು ಹೊಸ ಅರ್ಜಿ ಸ್ವೀಕಾರವನ್ನು ಮುಂದೂಡುತ್ತಲೇ ಬಂದಿದೆ. ಸುಮಾರು ಲಕ್ಷಾಂತರ ಅರ್ಜಿಗಳು ಈಗಾಗಲೇ ವಿಲೇವಾರಿಗೆ ಬಾಕಿ ಇವೆ ಎಂದು ಹೇಳಲಾಗುತ್ತಿದ್ದು, ಹೊಸ ಅರ್ಜಿ ಆಹ್ವಾನಿಸುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಇದರಿಂದಾಗಿ ಕೆಳಮಧ್ಯಮ ವರ್ಗದವರು ಮತ್ತು ಕೂಲಿ ಕಾರ್ಮಿಕರು ಖಾಸಗಿ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ದಿನಸಿ ಖರೀದಿಸುವುದು ಅನಿವಾರ್ಯವಾಗಿದೆ.

ಬಡವರ ಆಗ್ರಹವೇನು?

ರಾಜ್ಯ ಸರ್ಕಾರವು ಕೂಡಲೇ ಪೋರ್ಟಲ್ ತೆರೆದು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ವಿಶೇಷವಾಗಿ ಮರಣ ಹೊಂದಿದವರ ಅಥವಾ ಅನರ್ಹರ ಕಾರ್ಡ್‌ಗಳನ್ನು ರದ್ದುಗೊಳಿಸಿದ ಜಾಗದಲ್ಲಿ ಅರ್ಹ ಬಡವರಿಗೆ ತಕ್ಷಣವೇ ಕಾರ್ಡ್‌ ವಿತರಿಸುವ ಕೆಲಸವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಲಾಭ ಎಲ್ಲರಿಗೂ ತಲುಪಬೇಕಾದರೆ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಚುರುಕುಗೊಳ್ಳುವುದು ಅತ್ಯಗತ್ಯವಾಗಿದೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಅರೆಬೆಂದ ಸ್ಥಿತಿಯಲ್ಲಿ ವೃದ್ದೆಯ ಶವ ಪತ್ತೆ : ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ!

02/05/2026 3:36 PM1 Min Read

BREAKING: ಬೆಂಗಳೂರಲ್ಲಿ SSLC ಟಾಪರ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

02/05/2026 3:11 PM1 Min Read

ವಿದ್ಯುತ್‌ ವ್ಯತ್ಯಯ ದೂರಿಗೆ ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣ ಬಳಸಲು ಬೆಸ್ಕಾಂ ಮನವಿ

02/05/2026 3:11 PM1 Min Read
Recent News

BREAKING : ಇಂಧನ ದರ ಏರಿಕೆ ಹಿನ್ನೆಲೆ : ಜುಲೈವರೆಗೂ ಅಂತರಾಷ್ಟ್ರೀಯ ಹಾರಾಟ ಕಡಿತಕ್ಕೆ ಏರ್ ಇಂಡಿಯ ನಿರ್ಧಾರ?!

02/05/2026 3:45 PM

BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!

02/05/2026 3:38 PM

ಬೆಂಗಳೂರಲ್ಲಿ ಅರೆಬೆಂದ ಸ್ಥಿತಿಯಲ್ಲಿ ವೃದ್ದೆಯ ಶವ ಪತ್ತೆ : ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ!

02/05/2026 3:36 PM

SHOCKING: ಅತಿಯಾದ ನೀರು ಸೇವನೆಯೂ ಅಪಾಯಕಾರಿ: ಬಿಸಿಲಿಗೆ 5 ಲೀಟರ್ ನೀರು ಕುಡಿದು ಐಸಿಯು ಸೇರಿದ ಯುವಕ!

02/05/2026 3:14 PM
State News
KARNATAKA

BIG NEWS : ಹೊಸ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನೆಲೆ : ರಾಜ್ಯದಲ್ಲಿ 7.76 ಲಕ್ಷ ನಕಲಿ BPL ಕಾರ್ಡ್‌ ಪತ್ತೆ!

By kannadanewsnow0502/05/2026 3:38 PM KARNATAKA 2 Mins Read

ಬೆಂಗಳೂರು : ಕಳೆದ 3 ವರ್ಷಗಳಿಂದ ಪಡಿತರ ಚೀಟಿಗಾಗಿ ಅರ್ಜಿ ಕರೆಯದ ಹಿನ್ನಲೆಯಲ್ಲಿ ಲಕ್ಷಾಂತರ ಅರ್ಹ ಬಡವರು ಬಿಪಿಎಲ್‌ ಸೌಲಭ್ಯಗಳಿಂದ…

ಬೆಂಗಳೂರಲ್ಲಿ ಅರೆಬೆಂದ ಸ್ಥಿತಿಯಲ್ಲಿ ವೃದ್ದೆಯ ಶವ ಪತ್ತೆ : ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ!

02/05/2026 3:36 PM

BREAKING: ಬೆಂಗಳೂರಲ್ಲಿ SSLC ಟಾಪರ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

02/05/2026 3:11 PM

ವಿದ್ಯುತ್‌ ವ್ಯತ್ಯಯ ದೂರಿಗೆ ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣ ಬಳಸಲು ಬೆಸ್ಕಾಂ ಮನವಿ

02/05/2026 3:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.