ಬೆಂಗಳೂರು : ನಿನ್ನೆ ಬೆಂಗಳೂರಿನ ಬಾಗಲೂರು ಹೆಣ್ಣೂರು ಬಳಿ ರಸ್ತೆದಾಟುವಾಗ ಬಾಲಕ್ಕನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ತಳದಲ್ಲಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬಸ್ ಡಿಕ್ಕಿ ಹೊಡೆದು ಬಾಲಕ ಸಾವನಪ್ಪಿಲ್ಲ. ರಸ್ತೆ ದಾಟಲು ನಿಂತಿದ್ದಾಗ ತಲೆ ಸುತ್ತಿ ಬಿದ್ದು ಖಾಸಗಿ ಬಸ್ ತಲೆ ಮೇಲೆ ಹರಿದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ನಡೆದಿದೆ.
ವರುಣ್ (16) ಮೃತ ದುರ್ದೈವಿ. ನಿನ್ನೆ ಬೆಳಿಗ್ಗೆ ಈ ಒಂದು ಘಟನೆ ನಡದಿದ್ದು, ಬಸ್ ಡಿಕ್ಕಿಯಾಗಿ ವರುಣ್ ಸಾವನಪ್ಪಿದ್ದ ಎಂದು ತಿಳಿದುಬಂದಿತ್ತು. ಆದರೆ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ, ವರುಣ್ ತಂದೆಗೆ ಆರಾಮಿಲ್ಲ ಎಂದು ಔಷಧಿ ತರಲು ಹೋಗಿದ್ದ. ರಸ್ತೆ ದಾಟಲು ನಿಂತಾಗ ತಲೆ ಸುತ್ತಿ ಬಿದ್ದಿದ್ದಾನೆ. ಈ ವೇಳೆ ಏಕಾಏಕಿ ಖಾಸಗಿ ಬಸ್ ಅಡಿಗೆ ಸಿಲುಕಿದ್ದಾನೆ. ವಿದ್ಯಾರ್ಥಿಯ ಮೇಲೆ ಬಸ್ ಹರಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ವರುಣ್ ಎಸ್ಎಸ್ಎಲ್ಸಿ ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದ. ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ನಡೆಯುತ್ತಿದೆ. ಈ ಹಿನ್ನೆಲೆ ಎರಡೂ ಭಾಗದ ವಾಹನಗಳು ಒಂದೇ ದಾರಿಯಲ್ಲಿ ಸಾಗಬೇಕು. ಇದರಿಂದ ರಸ್ತೆಯುದ್ದಕ್ಕೂ ವಾಹನದಟ್ಟಣೆ ಕಿರಿಕಿರಿ ಹೆಚ್ಚಾಗಿದೆ. ರಸ್ತೆ ದಾಟಬೇಕೆಂದರೆ ಜನ ಕಾದುಕಾದು ಸುಸ್ತಾಗಬೇಕು. ರಸ್ತೆ ದಾಟಲು ನಿಂತಾಗ ವರುಣ್ ತಲೆ ಸುತ್ತಿ ಬಿದ್ದು ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








