ಮಂಡ್ಯ : ಮಂಡ್ಯದಲ್ಲಿ ಅನುಮಾನಾಸ್ಪದವಾಗಿ ಗ್ರಹಿಣಿ ಸಾವನ್ನಪ್ಪಿದ್ದಾರೆ ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಮಂಡ್ಯ ತಾಲೂಕಿನ ಜವನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಬನಂಗಾಡಿಯ ನಾಗವೇಣಿ (24) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಜವನ ಹಳ್ಳಿಯ ಬಾವಿಯಲ್ಲಿ ನಾಗವೇಣಿಯ ಶವಪತ್ತೆಯಾಗಿದೆ. ಆರು ವರ್ಷಗಳ ಹಿಂದೆ ಬ್ಯಾಟಗೆಗೌಡನ ಜೊತೆಗೆ ನಾಗವೇಣಿ ಮದುವೆ ಆಗಿತ್ತು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. ಮದುವೆ ವೇಳೆ 80 ಗ್ರಾಂ ಚಿನ್ನಾಭರಣ ಹಾಗೂ ಅರವತ್ತು ಸಾವಿರ ವರದಕ್ಷಿಣೆ ಸಹ ನೀಡಲಾಗಿತ್ತು. ಆದರೆ ಇನ್ನಷ್ಟು ವರದಕ್ಷಿಣೆ ಬೇಕು ಎಂದು ಬ್ಯಾಟಗೆಗೌಡ ಪೀಡಿಸುತ್ತಿದ್ದ.
ಆರು ತಿಂಗಳ ಹಿಂದೆ ಕುಟುಂಬ ಆದರೂ ಕೂಡ ಮತ್ತಷ್ಟು ಹಣ ತರುವಂತೆ ನಾಗವೇಣಿಗೆ ಪತಿ ಕಿರುಕುಳ ನೀಡಿದ್ದಾನೆ. ಮನೆಯಲ್ಲಿ ಸಾಯಿಸಿ ಬಾವಿಗೆ ಹೆಣ ಹಾಕಿದ್ದಾರೆ ಎಂದು ಇದೀಗ ನಾಗವೇಣಿ, ಕುಟುಂಬಸ್ಥರು ಆರೋಪಿಸಿದ್ದಾರೆ. ನಾಗವೇಣಿ ಪತಿ ಮತ್ತು ಅತ್ತೆ ಹಾಗೂ ಅವರ ಕುಟುಂಬದವರು ಘಟನೆಯ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








