ರಾಯಚೂರು : ರಾಯಚೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಪಕ್ಕದ ಜಮೀನಿನಿಂದ ಬೆಂಕಿ ಕಿಡ್ಡಿ ತಗುಲಿ ಕುರಿ ಶೆಡ್ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ 20 ಕೋಳಿಗಳು, 10 ಮೇಕೆ ಸಜೀವ ದಹನಗೊಂಡಿದ್ದು, ಮನೆಗೂ ಹಾನಿಯಾಗಿದೆ ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ನಾಗಮ್ಮ ಎಂಬುವರಿಗೆ ಈ ಒಂದು ಕುರಿ ಶೆಡ್ ಹಾಗೂ ಮನೆ ಸೇರಿತ್ತು. ನಾಗಮ್ಮಳ ಪಕ್ಕದ ಹೊಲದಲ್ಲಿ ಕಸಕ್ಕೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಬೆಂಕಿ ಕಿಡಿ ತಾಗಿ ಶೆಡ್ ಹಾಗೂ ಮನೆ ಹೊತ್ತಿ ಉರಿದಿದೆ. 3 ಲಕ್ಷ ಮೌಲ್ಯದ 20 ಕೋಳಿಗಳು, ಹಾಗೂ 10 ಮೇಕೆಗಳು ಸಜೀವ ದಹನಗೊಂಡಿವೆ. ಹತ್ತಿ ಮಾರಾಟದಿಂದ ಬಂದಿದ್ದ 2 ಲಕ್ಷ ನಗದು ಸಹ ಸುಟ್ಟು ಬಸ್ಮವಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ








