ತುಮಕೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು, ಪತ್ನಿ ಪರಪುರುಷನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು ಅಲ್ಲದೆ bಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಲಕೆರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಜೀವನ್ (10) ಪ್ರಾಣೇಶ್ (5) ಮಕ್ಕಳನ್ನು ಕೊಲೆಗೈದು ಶಿವಣ್ಣ (40) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಗಂಡು ಮಕ್ಕಳನ್ನು ಉಸಿರುಗುಟ್ಟಿಸಿ ಸಾಯಿಸಿ ಶಿವಣ್ಣ ನೇಣಿಗೆ ಶರಣಾಗಿದ್ದಾರೆ. ಪಾಲ್ಕೆರೆ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇಗುಲದ ಅರ್ಚಕನಾಗಿದ್ದ ಶಿವಣ್ಣ.
ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ ಶಿವಣ್ಣ ಪತ್ನಿ, ಪರಪುರುಷನ ಜೊತೆಗೆ ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಪತ್ನಿ ಆತನ ಜೊತೆಗೆ ಪರಾರಿಯಾಗಿದ್ದಾಳೆ ಮನೆಯಲ್ಲಿ ಇದ್ದ ಚಿನ್ನ ಮತ್ತು ಹಣದ ಸಮೇತ ಪತ್ನಿ ಎಸ್ಕೇಪ್ ಆಗಿದ್ದಾಳೆ ಇದರಿಂದ ಮನನೊಂದು ಮಕ್ಕಳನ್ನು ಕೊಂದು ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.








