ಬೆಂಗಳೂರು : ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಳಿಮಾವಿನ ಹಳೆ ಪೋಸ್ಟ್ ಆಫೀಸ್ ಬಳಿ ಈ ಒಂದು ಘಟನೆ ನಡೆದಿದೆ. ಇದು ಆತ್ಮಹತ್ಯೆ ಅಲ್ಲ ಕೊನೆಯಲ್ಲಿ ಗೃಹಿಣಿ ಪೋಷಕರು ಆರೋಪಸಿದ್ದು, ಪತಿಯ ಮನೆಯವರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಶರಣಾದ ಗ್ರಹಿಣಿಯನ್ನು ವಂದನ ಎಂದು ತಿಳಿದುಬಂದಿದೆ.
ಪತಿ ವಿಕ್ರಂ, ಮಾವ ಶ್ರೀನಿವಾಸ್ ಹಾಗೂ ಮೈದುನ ವಿನಿಶ್ ವಿರುದ್ಧ ಇದೀಗ ದೂರು ದಾಖಲಾಗಿದೆ. ಮದುವೆ ಸಮಯದಲ್ಲಿ ವಿಕ್ರಮಗೆ ಬೈಕ್ ಚಿನ್ನಾಭರಣ ಕೊಟ್ಟಿದ್ದರು. ಅದ್ದೂರಿಯಾಗಿ ಮದುವೆಯನ್ನು ಸಹ ಮಾಡಿಕೊಟ್ಟಿದ್ದರು. ಆದರೂ ವರದಕ್ಷಿಣೆಗಾಗಿ ವಿಕ್ರಂ ಪದೇ ಪದೇ ವಂದನಾಗೆ ಕಿರುಕುಳ ನೀಡುತ್ತಿದ್ದ.
ಈ ವೇಳೆ ಎಲ್ಲಾ ಹಿರಿಯರು ಸೇರಿ ರಾಜಿ ಸಂಧಾನ ಮಾಡಿದರು ಕೂಡ ಪತ್ನಿಗೆ ವಿಕ್ರಂ ಕಿರುಕುಳ ನೀಡಿದ್ದಾನೆ. ಗಂಡನ ಹಣದ ಹಪಾಹಪಿಗೆ ವಂದನಾ ಬಲಿಯಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಇದೀಗ ಮರಣೋತರ ಪರೀಕ್ಷೆ ನಡೆಸಿದ ಬಳಿಕ ವಂದನಾ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.








