ಇಂದು ಶನಿವಾರ (ಮೇ 2, 2026) ನಿಮ್ಮ ಮೊಬೈಲ್ ಫೋನ್ಗೆ ಹಠಾತ್ತನೆ ಭೀಕರವಾದ ಸೈರನ್ ಶಬ್ದದೊಂದಿಗೆ ‘ಡಿಸಾಸ್ಟರ್ ಅಲರ್ಟ್’ (Disaster Alert) ಸಂದೇಶ ಬಂದರೆ ಗಾಬರಿಯಾಗಬೇಡಿ. ಇದು ಕೇಂದ್ರ ಸರ್ಕಾರ ನಡೆಸುತ್ತಿರುವ ಒಂದು ತಾಂತ್ರಿಕ ಪರೀಕ್ಷೆಯಾಗಿದೆ.
ಏನಿದು ‘ಡಿಸಾಸ್ಟರ್ ಅಲರ್ಟ್’ ಟೆಸ್ಟ್?
ನೈಸರ್ಗಿಕ ವಿಕೋಪಗಳಾದ ಪ್ರವಾಹ, ಭೂಕಂಪ ಅಥವಾ ಸುನಾಮಿ ಅಂತಹ ಸಂದರ್ಭಗಳಲ್ಲಿ ಜನರನ್ನು ಮೊದಲೇ ಎಚ್ಚರಿಸಲು ಸರ್ಕಾರ ‘ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್’ ಅನ್ನು ಅಭಿವೃದ್ಧಿಪಡಿಸಿದೆ. ಇದರ ಭಾಗವಾಗಿಯೇ ಇವತ್ತು ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ.
ಯಾರಿಗೆ ಬರುತ್ತೆ?: ದೇಶದಾದ್ಯಂತ ಇರುವ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಈ ಸಂದೇಶ ಬರಲಿದೆ. ನಿಮ್ಮ ಫೋನ್ ಸೈಲೆಂಟ್ ಮೋಡ್ನಲ್ಲಿದ್ದರೂ ಕೂಡ ಜೋರಾದ ಸೈರನ್ ಶಬ್ದದೊಂದಿಗೆ ಫ್ಲ್ಯಾಶ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.
ಈ ಸಂದೇಶ ಬಂದಾಗ ಗಾಬರಿಯಾಗುವ ಅಗತ್ಯವಿಲ್ಲ. ಸಂದೇಶದ ಕೆಳಗೆ ಇರುವ ‘OK’ ಬಟನ್ ಒತ್ತಿದರೆ ಸಾಕು. ಇದು ಕೇವಲ ಟೆಸ್ಟಿಂಗ್ ಆಗಿರುವುದರಿಂದ ನೀವು ಯಾವುದೇ ಸುರಕ್ಷಿತ ಜಾಗಕ್ಕೆ ಓಡುವ ಅವಶ್ಯಕತೆಯಿಲ್ಲ.
ಸಂದೇಶದ ಉದ್ದೇಶ: ತುರ್ತು ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನರಿಗೆ ಏಕಕಾಲದಲ್ಲಿ ನಿಖರ ಮಾಹಿತಿ ತಲುಪಿಸಲು ಈ ವ್ಯವಸ್ಥೆ ಎಷ್ಟು ಸಜ್ಜಾಗಿದೆ ಎಂಬುದನ್ನು ಪರಿಶೀಲಿಸುವುದು ಇದರ ಮುಖ್ಯ ಉದ್ದೇಶ.








