ವಾಷಿಂಗ್ಟನ್:ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರಕ್ಕೆ ಸಂಸತ್ತಿನ (ಕಾಂಗ್ರೆಸ್) ಅನುಮತಿ ಪಡೆಯುವ ಗಡುವು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ (Pete Hegseth) ತಿಳಿಸಿದ್ದಾರೆ.
ಅಮೆರಿಕದ ‘ವಾರ್ ಪವರ್ಸ್ ಆಕ್ಟ್’ ಪ್ರಕಾರ, ಯಾವುದೇ ಯುದ್ಧ ಅಥವಾ ಮಿಲಿಟರಿ ಕಾರ್ಯಾಚರಣೆ ಆರಂಭವಾದ 60 ದಿನಗಳ ಒಳಗೆ ಅಧ್ಯಕ್ಷರು ಸಂಸತ್ತಿನ ಅಧಿಕೃತ ಅನುಮತಿ ಪಡೆಯಬೇಕು. ಈ ಗಡುವು ಮೇ 1ಕ್ಕೆ ಕೊನೆಗೊಳ್ಳಬೇಕಿತ್ತು.
ಇರಾನ್ ಮತ್ತು ಅಮೆರಿಕ ನಡುವೆ ಸದ್ಯ ಕದನ ವಿರಾಮ (Ceasefire) ಜಾರಿಯಲ್ಲಿರುವುದರಿಂದ, ಈ 60 ದಿನಗಳ ಕಾಲಮಿತಿಯ ‘ಗಡಿಯಾರ’ ಸ್ತಬ್ಧಗೊಂಡಿದೆ. ಹಾಗಾಗಿ ಸಂಸತ್ತಿನ ಅನುಮೋದನೆ ಪಡೆಯುವ ತುರ್ತು ಸದ್ಯಕ್ಕಿಲ್ಲ ಎಂಬುದು ರಕ್ಷಣಾ ಇಲಾಖೆಯ ವಾದ.
ಸೆನೆಟ್ ಸಮಿತಿಯ ಮುಂದೆ ಸಾಕ್ಷ್ಯ ನುಡಿದ ಹೆಗ್ಸೆತ್, “ನಾವು ಈಗ ಕದನ ವಿರಾಮದಲ್ಲಿದ್ದೇವೆ. ನಮ್ಮ ತಿಳುವಳಿಕೆಯ ಪ್ರಕಾರ, ಕದನ ವಿರಾಮದ ಸಮಯದಲ್ಲಿ 60 ದಿನಗಳ ಕಾಲಮಿತಿಯು ತಾತ್ಕಾಲಿಕವಾಗಿ ನಿಲ್ಲುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.








