ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಮೇ 1, 2026 ರಿಂದ ಜಾರಿಗೆ ಬರುವಂತೆ ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ವಾರ್ಷಿಕ ಶುಲ್ಕ ಮತ್ತು ತಡವಾದ ಪಾವತಿ ಶುಲ್ಕಗಳಲ್ಲಿ (Late Payment Charges) ಈ ಬದಲಾವಣೆಗಳು ಅನ್ವಯವಾಗಲಿವೆ.
ಬದಲಾದ ಪ್ರಮುಖ ನಿಯಮಗಳು ಇಲ್ಲಿವೆ:
1. ವಾರ್ಷಿಕ ಶುಲ್ಕ ಮನ್ನಾ (Annual Fee Waiver) ಮಿತಿ ಹೆಚ್ಚಳ
ಎಸ್‌ಬಿಐ ಬಿಪಿಸಿಎಲ್ (SBI BPCL) ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಇದು ನಿಜಕ್ಕೂ ಬೇಸರದ ಸಂಗತಿ.
ಹಳೆಯ ನಿಯಮ: ವರ್ಷಕ್ಕೆ 50,000 ರೂ. ಖರ್ಚು ಮಾಡಿದರೆ ವಾರ್ಷಿಕ ಶುಲ್ಕ ವಿನಾಯಿತಿ ಸಿಗುತ್ತಿತ್ತು.
ಹೊಸ ನಿಯಮ: ಇನ್ಮುಂದೆ ವಾರ್ಷಿಕ ಶುಲ್ಕ ಮನ್ನಾ ಪಡೆಯಲು ಕನಿಷ್ಠ 1 ಲಕ್ಷ ರೂ. ಖರ್ಚು ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಗ್ರಾಹಕರು 499 ರೂ. ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
2. ಹೆಚ್ಚಾದ ಲೇಟ್ ಪೇಮೆಂಟ್ ಚಾರ್ಜ್ (Late Payment Charges)
ಬಾಕಿ ಹಣ ಪಾವತಿಸಲು ತಡವಾದರೆ ವಿಧಿಸುವ ಶುಲ್ಕವನ್ನು ಕೂಡ ಬ್ಯಾಂಕ್ ಹೆಚ್ಚಿಸಿದೆ:
ಈ ಹಿಂದೆ 500 ರೂ. ವರೆಗಿನ ಬಾಕಿಗೆ ಯಾವುದೇ ಲೇಟ್ ಫೀ ಇರಲಿಲ್ಲ. ಆದರೆ ಈಗ 100 ರೂ. ಗಿಂತ ಹೆಚ್ಚಿನ ಬಾಕಿ ಇದ್ದರೆ 100 ರೂ. ಶುಲ್ಕ ವಿಧಿಸಲಾಗುತ್ತದೆ.
500 ರೂ. ನಿಂದ 1,000 ರೂ. ವರೆಗಿನ ಬಾಕಿ ಪಾವತಿಯ ಮೇಲೆ ವಿಧಿಸುತ್ತಿದ್ದ 400 ರೂ. ಶುಲ್ಕವನ್ನು ಈಗ 500 ರೂ. ಗೆ ಏರಿಕೆ ಮಾಡಲಾಗಿದೆ.
ಗಮನಿಸಿ: ಮೇ ತಿಂಗಳಿನಿಂದ ಕೇವಲ ಗ್ಯಾಸ್ ಸಿಲಿಂಡರ್ ಬೆಲೆ ಅಥವಾ ಆನ್‌ಲೈನ್ ಗೇಮಿಂಗ್ ನಿಯಮಗಳು ಮಾತ್ರವಲ್ಲದೆ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಇಂತಹ ಬ್ಯಾಂಕಿಂಗ್ ನಿಯಮಗಳೂ ಬದಲಾಗಿವೆ. ಆದ್ದರಿಂದ ಎಸ್‌ಬಿಐ ಕಾರ್ಡ್ ಗ್ರಾಹಕರು ತಮ್ಮ ಪಾವತಿ ಮತ್ತು ಖರ್ಚುಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸುವುದು ಉತ್ತಮ.








