ಬೆಂಗಳೂರು : ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದುಬಿದ್ದು 7 ಜನ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಘಟನಾ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳಾದ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತುಂಬಾ ಮಣ್ಣು ಹಾಕಿ, ಸಿಮೆಂಟ್ ಬ್ಲಾಕ್ ಹಾಕಿ ಗೋಡೆ ಕಟ್ಟಿದರಿಂದ ಅದು ಕಾಂಪೌಂಡ್ ಬಿದ್ದಿದೆ. ಬಿದ್ದಿದ್ದನ್ನ ಕಟ್ಟಬಹುದು ಆದರೆ ಮೃತರನ್ನು ಮರಳಿ ತರೋಕಾಗಲ್ಲ. ಅಲ್ಲೇ ಇರುವಂತಹ ಗೋಡೆ ಪಕ್ಕದಲ್ಲಿ ಅಮಾಯಕರಿಗೆ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವಕಾಶ ಮಾಡಿಕೊಡಬೇಕಾದವರು ಇದರ ಸೇಫ್ಟಿ ವಿಚಾರ ಮಾಡಬೇಕಾಗಿತ್ತು. ಮಳೆ ಬಂದರೆ ಇತರ ಅನಾಹುತಗಳು ಆಗುತ್ತವೆ ಯಾವ ರೀತಿ ಅವರಿಗೆ ಸೇಫ್ಟಿ ಇದೆ ಇಲ್ಲಿ ಜಾಗ ಕೊಡಬೇಕ ವ್ಯಾಪಾರ ಮಾಡಲು ವ್ಯವಹಾರ ಮಾಡಲು ಕೊಡಬೇಕಾ ಅಂತ ಗಮನದಲ್ಲಿಟ್ಟುಕೊಂಡು ಮಾಡಬೇಕು. ಇದೆಲವೂ ಬಿಬಿಎಂಪಿ ಹಾಗು ಆಸ್ಪತ್ರೆ ಸೇರಿದಂತೆ ಇತರರ ಕರ್ತವ್ಯವಾಗಿದೆ ಆದರೆ ಇದನ್ನು ಅವರು ಮಾಡಿಲ್ಲ ಈ ತರಹದ ಘಟನೆಗಳು ನಿರ್ಲಕ್ಷದಿಂದ ಆಗುತ್ತಿರುವುದು ದುರಾದೃಷ್ಟ.
ಬಿಬಿಎಂಪಿ ಯಾಗಲಿ ಆಸ್ಪತ್ರೆದವರಾಗಲಿ, ಸಂಬಂಧಪಟ್ಟ ಅಧಿಕಾರಿಗಳು ಯಾರ್ಯಾರು ಇದರಲ್ಲಿ ನಿರ್ಲಕ್ಷ ವಹಿಸಿದ್ದಾರೋ ಅದನ್ನು ಕಂಡು ಹಿಡಿಯಬೇಕು. ಸಾರ್ವಜನಿಕ ಕಟ್ಟಡಗಳಲ್ಲಿ ಯಾವ ಕಟ್ಟಡಗಳು ಶಿಥಿಲವಾದ ಕಟ್ಟಡಗಳು ಇವೆಯೋ ಅವುಗಳನ್ನ ಪತ್ತೆಹಚ್ಚಬೇಕು ಆಸ್ಪತ್ರೆಯವರು ಸಹ ಪತ್ತೆಹಚ್ಚ ಬೇಕಾಗಿತ್ತು ಇಂತಹ ದೊಡ್ಡ ರಸ್ತೆಯಲ್ಲಿ ಜನ ಹೆಚ್ಚು ಎಲ್ಲಿ ಓಡಾಡುತ್ತಾರೋ ಅಂತಹ ಪ್ರದೇಶಗಳಲ್ಲಿ ಹಳೆ ಕಟ್ಟಡಗಳ ಕಾಂಪೌಂಡ್ ಗಳ ಪತ್ತೆ ಹಚ್ಚಿ ದುರಸ್ತಿ ಮಾಡಬೇಕು. ಅವುಗಳನ್ನು ಡೆಮಾಲಿಶ್ ಮಾಡಿ ಹೊಸದಾಗಿ ಕಟ್ಟಡ ಮಾಡಬೇಕು. ಘಟನೆ ಕುರಿತು ಸುಮೊಟೊ ಕೇಸ್ ರಿಜಿಸ್ಟರ್ ಮಾಡುತ್ತೇನೆ ಎಂದು ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ತಿಳಿಸಿದರು.








