ಬೆಂಗಳೂರು : ಬೆಂಗಳೂರಿನಲ್ಲಿ ಮಳೆಯಿಂದ ಭಾರಿ ಅವತಾರ ಸೃಷ್ಟಿಯಾಗಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೂ ಮೊದಲ ಮಳೆಯ ಹೊಡೆತ ತಟ್ಟಿದೆ. ಕಾವೇರಿ ನಿವಾಸದಲ್ಲಿ 4-5 ಮರಗಳು ಧರೆಗೆ ಉರುಳಿವೆ. ಕಾವೇರಿ ನಿವಾಸದ ಕಾಂಪೌಂಡ್ ಮೇಲೆ ಮರಗಳು ಬಿದ್ದು ಅವಾಂತರ ಸೃಷ್ಟಿಯಾಗಿದೆ. ಕಾಂಪೌಂಡ್ ಮೇಲೆ ಗ್ರೌಂಡಿನ ಕಬ್ಬಿಣದ ವಾಲ್ಗಳು ಬಿದ್ದಿವೆ. ಸಿಎಂ ಸಿದ್ದರಾಮಯ್ಯ ಮನೆಯಲ್ಲಿದ್ದಾಗಲೇ ಕಬ್ಬಿಣದ ವಾಲ್ಗಳು ಉರುಳಿ ಬಿದ್ದಿವೆ.
ಈ ವೇಳೆ ಮ್ಯಾನ್ ಹೋಲ್ ಬ್ಲಾಕ್ ಆಗಿದ್ದರೆ ಕೂಡಲೇ ಸರಿಪಡಿಸಿ ಎಂದು ಜಿಬಿಎಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ. ರಸ್ತೆ ಪಕ್ಕದ ಎಲ್ಲಾ ಗಟರ್ಗಳ ಹೂಳುಗಳನ್ನು ತೆಗೆಯಿರಿ. ಬೀಳುವ ಹಂತದ ರಂಬೆ ಕೊಂಬೆಗಳನ್ನು ತೆರವುಗೊಳಿಸಿ, ರಸ್ತೆಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಬೌಲಿಂಗ್ ರೀತಿ ದುರ್ಘಟನೆ ನಡೆಯದಂತೆ ಎಚ್ಚರವಹಿಸಿ ಎಂದು ಜಿಬಿಎ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ.








