ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಬಾರಿ ಸಾರಿಗೆ ನೌಕರರ ಮುಷ್ಕರ ನಡೆದಾಗ ಒಂದಷ್ಟು ಆಶ್ವಾಸನೆ ನೀಡಿದ್ದ ಸರ್ಕಾರ ಬುಧವಾರ (ಏ. 29) ನೌಕರರ ಸಂಘಟನೆಗಳ ಜೊತೆಗೆ ಮತ್ತೊಮ್ಮೆ ಸಭೆ ನಡೆಸಿತು. ಈ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತಿರ್ಮಾನಿಸಲಾಗಿದೆ. ಮುಂದಿನ ತಿಂಗಳು ಮೇ 20ರಂದು ರಾಜ್ಯವ್ಯಾಪಿ ಮುಷ್ಕರ ಜರುಗಲಿದೆ.
ರಾಜ್ಯ ಸರ್ಕಾರ ಇಂದು ಸಾರಿಗೆ ನೌಕರರ ಮೊದಲ ಕಂತಿನ ಹಿಂಬಾಕಿ ವೇತನ ಬಿಡುಗಡೆಗೆ ಅನುಮೋದನೆ ನೀಡಿ ಆದೇಶಿಸಿತು. ಅದರ ಬೆನ್ನಲ್ಲೆ ಸಂಧಾನಸಭೆಯ ಮಾತುಕತೆ ವಿಫಲವಾಯಿತು. ಶೇ.7ರಷ್ಟು ವೇತನ ಹೆಚ್ಚಳ ಪ್ರಸ್ತಾವನೆ ಮುಂದಿಟ್ಟರು. ಅದನ್ನು ನೌಕರರ ಸಂಘಟನೆ ಮುಖ್ಯಸ್ಥರು ಒಪ್ಪದ ಹಿನ್ನೆಲೆ ಸಭೆಯಲ್ಲಿ ಸೂಕ್ತ ನೀರ್ಣಯಕ್ಕೆ ಬರಲಾಗಲಿಲ್ಲ.
ನೌಕರರ ಬೇಡಿಕೆಗಳೇನು?
ನೌಕರರ ಮೂಲ ವೇತನ ಶೇ.25ರಷ್ಟು ಹೆಚ್ಚಳ, ಶೇ.31ರಷ್ಟು ತುಟ್ಟಿಭತ್ಯೆ ಮೂಲ ವೇತನದಲ್ಲಿ ವಿಲೀನ ಮಾಡುವುದು. ವೇತನ ಶ್ರೇಣಿ ರಚಿಸಿ ಬಾಕಿ ಹಣ ಪಾವತಿಸುವುದು, 26 ತಿಂಗಳ ಬಾಕಿ ಹಿಂಬಾಕಿ ಹಣ ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಲ್ಲ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ಮೇ 20ರಂದು ಪ್ರತಿಭಟಿಸಲಿದ್ದಾರೆ ಎಂದು ಸಮಿತಿ ಮುಖಸ್ಥರು ಘೋಷಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಏಪ್ರಿಲ್ 29ರಂದು ನಡೆದ ಸಭೆಯಲ್ಲಿ ನೌಕರರ ಬೇಡಿಕೆಗಳಿಗೆ ಸರ್ಕಾರ ನೀಡಿದ ಸ್ಪಂದನೆ ತೃಪ್ತಿಕರವಾಗಿಲ್ಲದ ಕಾರಣ, ನೌಕರರ ಸಂಘಟನೆಗಳು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಅಧಿಕೃತವಾಗಿ ನೋಟಿಸ್ ನೀಡಿವೆ.
ಮುಖ್ಯ ಬೇಡಿಕೆಗಳು ಏನು?
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ:
-
ವೇತನ ಬಾಕಿ (Arrears): 2020ರ ಜನವರಿಯಿಂದ 2023ರ ಫೆಬ್ರವರಿವರೆಗಿನ ಒಟ್ಟು 38 ತಿಂಗಳ ವೇತನ ಬಾಕಿಯನ್ನು (ಸುಮಾರು ₹1,785 ಕೋಟಿ) ಪೂರ್ಣವಾಗಿ ಪಾವತಿಸಬೇಕು. ಸರ್ಕಾರವು ಕೇವಲ 26 ತಿಂಗಳ ಬಾಕಿ ನೀಡಲು ಮುಂದಾಗಿರುವುದನ್ನು ನೌಕರರು ತಿರಸ್ಕರಿಸಿದ್ದಾರೆ.
-
25% ವೇತನ ಹೆಚ್ಚಳ: 2024ರ ಜನವರಿಯಿಂದ ಅನ್ವಯವಾಗುವಂತೆ ನೌಕರರ ಮೂಲ ವೇತನದಲ್ಲಿ 25% ಹೆಚ್ಚಳ ಮಾಡಬೇಕು. ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾದ 27.5% ವೇತನ ಹೆಚ್ಚಳದ ಮಾದರಿಯಲ್ಲೇ ತಮಗೂ ಸೌಲಭ್ಯ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.
-
ತುಟ್ಟಿಭತ್ಯೆ (DA) ವಿಲೀನ: 2022ರ ಜುಲೈ 1ರವರೆಗೆ ಇದ್ದ 31% ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು.
-
‘ಫಾರಂ-4’ ಸಮಸ್ಯೆ: ಶಿಸ್ತು ಕ್ರಮಗಳ ಹೆಸರಿನಲ್ಲಿ ನೌಕರರಿಗೆ ನೀಡಲಾಗುವ ಕಿರುಕುಳ ಮತ್ತು ತಾಂತ್ರಿಕ ಸಮಸ್ಯೆಗಳನ್ನು (ಫಾರಂ-4) ಒಂದು ತಿಂಗಳೊಳಗೆ ಬಗೆಹರಿಸಬೇಕು.
ಸರ್ಕಾರದ ನಿಲುವು:
ಸಚಿವ ರಾಮಲಿಂಗಾರೆಡ್ಡಿ ಅವರು ಸಭೆಯಲ್ಲಿ ಮಾತನಾಡಿ, “ಸರ್ಕಾರವು ಈಗಾಗಲೇ 26 ತಿಂಗಳ ವೇತನ ಬಾಕಿಗಾಗಿ ₹1,271 ಕೋಟಿ ಬಿಡುಗಡೆ ಮಾಡಲು ಒಪ್ಪಿದೆ. ಉಳಿದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಆದರೆ, ಸಂಘಟನೆಗಳು ಕೇವಲ ಭರವಸೆಗಳಿಂದ ತೃಪ್ತರಾಗದೆ ಹೋರಾಟಕ್ಕೆ ಮುಂದಾಗಿವೆ.
ಯಾವೆಲ್ಲಾ ಸಂಸ್ಥೆಗಳ ಮೇಲೆ ಪರಿಣಾಮ?
ಈ ಮುಷ್ಕರವು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಮೇಲೆ ನೇರ ಪರಿಣಾಮ ಬೀರಲಿದೆ:
-
KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ)
-
BMTC (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)
-
NWKRTC (ವಾಯುವ್ಯ ಕರ್ನಾಟಕ ಸಾರಿಗೆ)
-
KKRTC (ಕಲ್ಯಾಣ ಕರ್ನಾಟಕ ಸಾರಿಗೆ)







