ಬೆಂಗಳೂರು : ಒಳ ಮೀಸಲಾತಿ ಅಧಿಸೂಚನೆ ಪ್ರಕಟ ವಿಚಾರಕ್ಕೆ ಸಂಬಂಧಪಟ್ಟಂತೆ ತೀರ್ಮಾನಕ್ಕೆ ತಕ್ಕಂತೆ ಅಧಿಸೂಚನೆ ಬಂದಿದೆ ಹಾಗಾಗಿ ರಾಜ್ಯದಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಐವತ್ತಾರು ಸಾವಿರ ಹುದ್ದೆಗಳ ನೇಮಕಾತಿ ಆಗಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್. ನಮ್ಮ ಇಲಾಖೆಯಲ್ಲೂ ಖಾಲಿ ಹುದ್ದೆಗಳು ಇದ್ದು ನೇಮಕಾತಿ ಮಾಡಿಕೊಳ್ಳುತ್ತೇವೆ ಇಲಾಖೆಗಳಿಗೂ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಲಿದೆ ಖಾಲಿ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ಕೊಟ್ಟಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಪ್ರಮುಖ ಅಂಶಗಳು:
-
ನೇಮಕಾತಿ ಪ್ರಮಾಣ: ಸುಮಾರು 56,000 ಖಾಲಿ ಹುದ್ದೆಗಳ ಭರ್ತಿಗೆ ಚಾಲನೆ.
-
ಒಳ ಮೀಸಲಾತಿ ಅನ್ವಯ: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಒಳ ಮೀಸಲಾತಿ ಅಧಿಸೂಚನೆಯಂತೆ ನೇಮಕಾತಿ ನಡೆಯಲಿದೆ.
-
ವಿವಿಧ ಇಲಾಖೆಗಳು: ಕೇವಲ ಪೊಲೀಸ್ ಇಲಾಖೆಯಷ್ಟೇ ಅಲ್ಲದೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.








