Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ರೈಲಿನಲ್ಲಿ ನೀಡಿದ ಎಗ್ ಬಿರಿಯಾನಿಯಲ್ಲಿ `ಜೀವಂತ ಹುಳುಗಳು’ ಪತ್ತೆ : ವಿಡಿಯೋ ವೈರಲ್ | WATCH VIDEO

29/04/2026 12:50 PM

ಹಾವೇರಿಯಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ : ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ!

29/04/2026 12:49 PM

BIG NEWS : ಕೋವಿಡ್ ವೇಳೆ ಅಕ್ರಮ ಪ್ರಕರಣ : ತನಿಖೆಗೆ ನೀಡಿದ್ದ ತಡೆ ತೆರವುಗೊಳಿಸಲು ನಿರಾಕರಿಸಿದ ಹೈಕೋರ್ಟ್

29/04/2026 12:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜನಗಣತಿ ರಾಷ್ಟ್ರ ಕರ್ತವ್ಯ : ಖಾಸಗಿ ಶಾಲೆಯ ಸಿಬ್ಬಂದಿಗಳು ಗಣತಿಯಲ್ಲಿ ಭಾಗಿಯಾಗುವುದು ಕಡ್ಡಾಯ : ಹೈಕೋರ್ಟ್
KARNATAKA

ಜನಗಣತಿ ರಾಷ್ಟ್ರ ಕರ್ತವ್ಯ : ಖಾಸಗಿ ಶಾಲೆಯ ಸಿಬ್ಬಂದಿಗಳು ಗಣತಿಯಲ್ಲಿ ಭಾಗಿಯಾಗುವುದು ಕಡ್ಡಾಯ : ಹೈಕೋರ್ಟ್

By kannadanewsnow0529/04/2026 10:28 AM

ಬೆಂಗಳೂರು : ಜನಗಣತಿ ಎಂಬುದು ರಾಷ್ಟ್ರೀಯ ಕರ್ತವ್ಯವಾಗಿದ್ದು, ಅದಕ್ಕಾಗಿ ಬದ್ಧರಾಗಿರಬೇಕು ಎಂದು ತಿಳಿಸಿರುವ ಹೈಕೋರ್ಟ್, ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣ ಕರ್ತ್ಯವಕ್ಕೆ ಹಿಂದಿರುಗಿ, ಗಣತಿ ಕಾರ್ಯದಲ್ಲಿ ಭಾಗಿಯಾಗುವಂತೆ ಬೆಂಗಳೂರು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರಿಗೆ ನಿರ್ದೇಶನ ನೀಡಿದೆ.

ಅಲ್ಲದೆ, ಮುಂದಿನ ಒಂದು ವಾರದಲ್ಲಿ ಎಲ್ಲ ಶಿಕ್ಷಕರನ್ನು ಹಿಂದಿರುಗುವಂತೆ ಸೂಚನೆ ನೀಡಿ, ಜನಗಣತಿ ಆಯುಕ್ತರ ಮುಂದೆ ವರದಿ ಮಾಡಿಕೊಳ್ಳುವುದನ್ನು ಖಾತರಿ ಪಡಿಸಬೇಕು ಎಂಬ ಷರತ್ತಿನೊಂದಿಗೆ ಶಾಲೆಯ ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯ್ದೆಯ ಸೆಕ್ಷನ್​ 11ರ ಅಡಿಯಲ್ಲಿ ಎಫ್ಐಆರ್​ ದಾಖಲಿಸುವಂತಹ ಕ್ರಮಕ್ಕೆ ಮುಂದಾಗಬಾರದು ಎಂದು ತಿಳಿಸಿದೆ.

ಶಾಲೆಯ ಶಿಕ್ಷಕರನ್ನು ಜನಗಣತಿಗೆ ನಿಯೋಜನೆ ಮಾಡದ ಶಾಲೆಯ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಜೆ.ಪಿ. ನಗರದ 7ನೇ ಹಂತದಲ್ಲಿರುವ ದಿ ಬ್ರಿಗೇಡ್​ ಶಾಲೆ ಪ್ರಾಂಶುಪಾಲ ಶುಭಾರ್​ ಜೈನ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್​ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಪ್ರಕರಣ ಏನು?

ದೇಶದಾದ್ಯಂತ ಮೊದಲ ಹಂತ ಜನಗಣತಿ ಎಪ್ರಿಲ್​ 1 ರಿಂದ ಸ್ವಯಂ ಗಣತಿಯೊಂದಿಗೆ ಪ್ರಾರಂಭವಾಗಿದ್ದು, ಎರಡನೇ ಹಂತವಾಗಿ ಎಪ್ರಿಲ್​ 16ರಿಂದ ಗಣತಿದಾರರು ಮನೆ ಮನೆಗೆ ತೆರಳಿ ಕುಟುಂಬಸ್ಥರ ವಿವರ ಪಡೆದುಕೊಳ್ಳುತ್ತಿದ್ದಾರೆ. ಎಪ್ರಿಲ್​ ಮತ್ತು ಸೆಪ್ಟಂಬರ್ 2026ರ ಅಂತ್ಯಕ್ಕೆ ಗಣತಿ ಕಾರ್ಯ ಪೂರ್ಣಗೊಳ್ಳಬೇಕಾಗಿದೆ.

ಇದರ ಮುಂದುವರೆದ ಭಾಗವಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿಯು ಎಪ್ರಿಲ್​ 9 ರಂದು ಅರ್ಜಿದಾರ ಶಾಲೆಗೆ ಪತ್ರ ಬರೆದು ಶಾಲೆಯ ಸಿಬ್ಬಂದಿಯನ್ನು ಜನ ಗಣತಿಗೆ ಕಾರ್ಯಕ್ಕೆ ನಿಯೋಜನೆ ಮಾಡುವಂತೆ ಸೂಚನೆ ನೀಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶಾಲೆಯಲ್ಲಿರುವ 84 ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಬಹುದಾಗಿದೆ. ಇನ್ನುಳಿದ ಶಿಕ್ಷಕರು ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಪ್ರವಾಸದಲ್ಲಿದ್ದಾರೆ.
ಶಿಕ್ಷಕರು ರಜೆ ಪಡೆಯುವುದಕ್ಕೆ ಅವಕಾಶ ಇರುವುದರಿಂದ ತಕ್ಷಣ ಹಿಂದಿರುಗುವಂತೆ ಸೂಚನೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಅಲ್ಲದೆ, ಈಗಾಗಲೇ 12 ಮಂದಿ ಶಿಕ್ಷಕರನ್ನು ಜನಗಣತಿಗೆ ನಿಯೋಜಿಸಲಾಗಿದ್ದು, ಈಗಾಗಲೇ ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾರೆ, ಹೆಚ್ಚಿನ ಸಿಬ್ದಂದಿಯನ್ನು ನಿಯೋಜಿಸುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಗಣತಿ ಅಧಿಕಾರಿ ಹೊರಡಿಸಿರುವ ಆದೇಶ ರದ್ದುಮಾಡಬೇಕು ಎಂದು ಕೋರಿದರು.

Share. Facebook Twitter LinkedIn WhatsApp Email

Related Posts

ಹಾವೇರಿಯಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ : ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ!

29/04/2026 12:49 PM1 Min Read

BIG NEWS : ಕೋವಿಡ್ ವೇಳೆ ಅಕ್ರಮ ಪ್ರಕರಣ : ತನಿಖೆಗೆ ನೀಡಿದ್ದ ತಡೆ ತೆರವುಗೊಳಿಸಲು ನಿರಾಕರಿಸಿದ ಹೈಕೋರ್ಟ್

29/04/2026 12:44 PM2 Mins Read

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

29/04/2026 12:19 PM1 Min Read
Recent News

SHOCKING : ರೈಲಿನಲ್ಲಿ ನೀಡಿದ ಎಗ್ ಬಿರಿಯಾನಿಯಲ್ಲಿ `ಜೀವಂತ ಹುಳುಗಳು’ ಪತ್ತೆ : ವಿಡಿಯೋ ವೈರಲ್ | WATCH VIDEO

29/04/2026 12:50 PM

ಹಾವೇರಿಯಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ : ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ!

29/04/2026 12:49 PM

BIG NEWS : ಕೋವಿಡ್ ವೇಳೆ ಅಕ್ರಮ ಪ್ರಕರಣ : ತನಿಖೆಗೆ ನೀಡಿದ್ದ ತಡೆ ತೆರವುಗೊಳಿಸಲು ನಿರಾಕರಿಸಿದ ಹೈಕೋರ್ಟ್

29/04/2026 12:44 PM

BREAKING : ಮೀರತ್-ಪ್ರಯಾಗ್ರಾಜ್ ಸಂಪರ್ಕಿಸುವ 594 ಕಿ.ಮೀ ಉದ್ದದ ‘ಗಂಗಾ ಎಕ್ಸ್ ಪ್ರೆಸ್ ವೇ’ ಉದ್ಘಾಟಿಸಿದ ಪ್ರಧಾನಿ ಮೋದಿ | WATCH VIDEO

29/04/2026 12:38 PM
State News
KARNATAKA

ಹಾವೇರಿಯಲ್ಲಿ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ : ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ!

By kannadanewsnow0529/04/2026 12:49 PM KARNATAKA 1 Min Read

ಹಾವೇರಿ : ಹಾವೇರಿಯಲ್ಲಿ ಬೀದಿ ನಾಯಿಗಳಿಗೆ ಅಟ್ಯಾಕ್ ನಡೆಸಿದ್ದು ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ…

BIG NEWS : ಕೋವಿಡ್ ವೇಳೆ ಅಕ್ರಮ ಪ್ರಕರಣ : ತನಿಖೆಗೆ ನೀಡಿದ್ದ ತಡೆ ತೆರವುಗೊಳಿಸಲು ನಿರಾಕರಿಸಿದ ಹೈಕೋರ್ಟ್

29/04/2026 12:44 PM

BREAKING : ಒಳಮೀಸಲಾತಿ ಅಧಿಸೂಚನೆಯಂತೆ 56 ಸಾವಿರ ಹುದ್ದೆಗಳ ನೇಮಕಾತಿ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

29/04/2026 12:19 PM

BREAKING : ಬೆಂಗಳೂರು ಪೊಲೀಸರ ಅತಿ ದೊಡ್ಡ ಡ್ರಗ್ಸ್ ಸೀಜ್ : ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

29/04/2026 12:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.