ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕ ರಿಯಾನ್ ಪರಾಗ್ ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪಿಂಗ್’ (E-Cigarette) ಮಾಡುತ್ತಾ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಏಪ್ರಿಲ್ 28ರಂದು ಮುಲ್ಲನ್‌ಪುರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡವು 223 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿದ್ದಾಗ, 16ನೇ ಓವರ್‌ನಲ್ಲಿ ಕ್ಯಾಮೆರಾ ಆರ್‌ಆರ್ ಡ್ರೆಸ್ಸಿಂಗ್ ರೂಮ್ ಕಡೆಗೆ ತಿರುಗಿತು. ಈ ವೇಳೆ ನಾಯಕ ರಿಯಾನ್ ಪರಾಗ್ ಅವರು ತಮ್ಮ ಸಹ ಆಟಗಾರರಾದ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಸಮ್ಮುಖದಲ್ಲೇ ಆರಾಮವಾಗಿ ವೇಪಿಂಗ್ ಮಾಡುತ್ತಿರುವುದು ನೇರ ಪ್ರಸಾರದಲ್ಲಿ ಕಂಡುಬಂದಿದೆ.
ಐಪಿಎಲ್ ನಿಯಮಾವಳಿಗಳ ಪ್ರಕಾರ, ಡ್ರೆಸ್ಸಿಂಗ್ ರೂಮ್ ಮತ್ತು ಕ್ರೀಡಾಂಗಣದ ಆವರಣದಲ್ಲಿ (ನಿಗದಿತ ಪ್ರದೇಶಗಳನ್ನು ಹೊರತುಪಡಿಸಿ) ಧೂಮಪಾನ ಅಥವಾ ವೇಪಿಂಗ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಭಾರತದಲ್ಲಿ 2019ರ ‘ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ’ (PECA) ಅಡಿಯಲ್ಲಿ ಇ-ಸಿಗರೇಟ್ ಅಥವಾ ವೇಪ್‌ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ಕಾನೂನುಬಾಹಿರವಾಗಿದೆ.
ಒಬ್ಬ ಜವಾಬ್ದಾರಿಯುತ ನಾಯಕನಾಗಿ ಮತ್ತು ಕ್ರೀಡಾಪಟುವಾಗಿ ರಿಯಾನ್ ಪರಾಗ್ ಇಂತಹ ವರ್ತನೆ ತೋರಿರುವುದು ಅಭಿಮಾನಿಗಳಿಗೆ ಅಸಮಾಧಾನ ತಂದಿದೆ.
What’s happening in the ipl ?#PBKS#RR@IPL @BCCI
Riyan parag is using vape 😱😱😱😓 pic.twitter.com/xVXhb0LKZW— Vansh Goyal (@vanshgoyal0674) April 28, 2026








