ಜಕಾರ್ತ: ಇಂಡೋನೇಷ್ಯಾದಿಂದ ಅತ್ಯಂತ ಆಘಾತಕಾರಿ ಮತ್ತು ಎದೆನಡುಗಿಸುವ ಸುದ್ದಿಯೊಂದು ಹೊರಬಿದ್ದಿದೆ. ಮಕ್ಕಳನ್ನು ಆರೈಕೆ ಮಾಡಬೇಕಾದ ‘ಡೇ-ಕೇರ್’ (Daycare) ಕೇಂದ್ರವೊಂದರಲ್ಲಿ ಸುಮಾರು 53 ಪುಟಾಣಿಗಳನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಂಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.
ಇಂಡೋನೇಷ್ಯಾದ ಈ ಶಿಶುಪಾಲನಾ ಕೇಂದ್ರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ಕಂಡು ದಬಾಯಿಸಿದ್ದಾರೆ. ಕೇವಲ ಡೈಪರ್ ಧರಿಸಿದ್ದ ಸುಮಾರು 53 ಪುಟ್ಟ ಮಕ್ಕಳ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ, ಸಾಲಾಗಿ ನೆಲದ ಮೇಲೆ ಮಲಗಿಸಲಾಗಿತ್ತು. ಮಕ್ಕಳು ಅಳಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು, ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಕ್ಕಳು ಅಸಹಾಯಕರಾಗಿ ನೆಲದ ಮೇಲೆ ಬಿದ್ದಿರುವುದು. ಅಳುವ ಶಕ್ತಿಯೂ ಇಲ್ಲದೆ ಮಕ್ಕಳು ಸುಸ್ತಾಗಿರುವುದು ಕಂಡುಬಂದಿದೆ. ಈ ಅಮಾನವೀಯ ಕೃತ್ಯ ಎಸಗಿದ ಡೇ-ಕೇರ್ ಸಿಬ್ಬಂದಿಗಳ ಬೇಜವಾಬ್ದಾರಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಡೇ-ಕೇರ್ ಕೇಂದ್ರದ ಮೇಲೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಈ ಕೇಂದ್ರದ ಮಾಲೀಕ ಮತ್ತು ಕೆಲವು ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಕೇಂದ್ರಗಳಿಗೆ ಬಿಡುವ ಮುನ್ನ ಸಾವಿರ ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Bayangin, udah percaya dan bayar daycare, tapi anakmu malah diperlakukan kayak gini
Kalau gk suka anak kecil, PLEASE jangan jadi pengasih anak
Orang tua juga harus extra hati-hati milih daycare 😭
Rekaman CCTV dari salah satu daycare di Banda Aceh
🎥 ayakasakura_ pic.twitter.com/ihdD94DDBA
— Si Paling Gen Z (@txtdarigenz97) April 28, 2026
This is the video of the Horrific daycare abuse in Yogyakarta: 53 toddlers tied up, drugged & neglected. 13 suspects arrested.
https://t.co/B7yu9eWsxe https://t.co/tgxNq2qZOz
— Dapsy𓃵 (@symplyDAPO) April 27, 2026








