ಬೆಂಗಳೂರು: “ಕುಮಾರಸ್ವಾಮಿ ತಮ್ಮ ಅನುಭವದ ಲೆಕ್ಕಾಚಾರದ ಮೇಲೆ ಮಾತನಾಡಿರಬೇಕು. ಅವರಲ್ಲಿ ಏನೋ ಸಮಸ್ಯೆ ಇರಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದರು.
ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸಚಿವ ಸುಧಾಕರ್ ಆರೋಗ್ಯದ ವಿಚಾರ ಮುಚ್ಚಿಡಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಯಾವ ಹೆಬ್ಬೆಟ್ಟು, ಏನು ಎಂದು ಗೊತ್ತಿದ್ದರೆ ಅವರೇ ಹೇಳಬೇಕು. ಅವರ ಕುಟುಂಬದವರಿಗೆ ಹೇಳಬೇಕು. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕೆ ಮಾತನಾಡುತ್ತಿದ್ದಾರೆ. ಇದರಿಂದ ಅವರ ಘನತೆಗೆ, ಹಿರಿತನಕ್ಕೆ ಗೌರವ ಬರುವುದಿಲ್ಲ” ಎಂದು ಹರಿಹಾಯ್ದರು.
CRIME NEWS: ಮದ್ಯದ ಅಮಲಿನಲ್ಲಿ ಕಲ್ಲು ಎತ್ತಿಹಾಕಿ ತಮ್ಮನ ಹತ್ಯೆಗೈದ ಅಣ್ಣ








