ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯಲ್ಲಿರುವ ಪಂಚಮಸಾಲಿ ಪೀಠದಲ್ಲಿ ಲೆಕ್ಕಕೊಡುವ ಅಭಿಯಾನ ಪ್ರಕ್ರಿಯೆ ಆರಂಭವಾಗಿದ್ದು ಈ ಒಂದು ಪಂಚಮಸಾಲಿ ಪೀಠದ ಟ್ರಸ್ಟ್ ಧರ್ಮದರ್ಶಿ, ಬಿಸಿ ಉಮಾಪತಿ ಅವರು 2008ರಿಂದ 2026 ರ ವರೆಗೆ ಮಠಕ್ಕೆ ಬಂದಿರುವ ಧಣಿಗೆ ಕುರಿತು ಸಂಪೂರ್ಣವಾದ ಮಾಹಿತಿ ನೀಡಿದ್ದಾರೆ.
2008ರಿಂದ 2026ರ ವರೆಗಿನ ಲೆಕ್ಕ ಮಂಡನೆ ಆರಂಭವಾಗಿದ್ದು ಟ್ರಸ್ಟಿನ ಧರ್ಮದರ್ಶಿ ಬಿಸಿ ಉಮಾಪತಿ ಲೆಕ್ಕ ಮಂಡನೆ ಮಾಡಿದ್ದು 27 ಕೋಟಿ 61 ಲಕ್ಷದ 57,518 ರೂಪಾಯಿ ದೇಣಿಗೆ ಬಂದಿದೆ. ಭಕ್ತರ ಮತ್ತು ಸರ್ಕಾರದಿಂದ ಬಂದಿದ್ದ ಒಟ್ಟು ಹಣ ಇದಾಗಿದ್ದು ಕಳೆದ 18 ವರ್ಷಗಳಿಂದ ಮಠಕ್ಕೆ ಬಂದಂತಹ ದೇಣಿಗೆ ಇದಾಗಿದೆ. ಸರ್ಕಾರದಿಂದ, ಭಕ್ತರಿಂದ, ಸಮಾಜ ಬಾಂಧವರಿಂದ ಹಾಗೂ ದಾಸೋಹ ನಿಧಿಗಾಗಿ ಒಟ್ಟು 27 ಕೋಟಿ 61 ಲಕ್ಷದ 57,518 ರೂಪಾಯಿ ಜಮಾ ಆಗಿದೆ.
ಇದು ಲೆಕ್ಕ ಕೊಡಬೇಕು ಅಂತ ಏನು ಚಳುವಳಿ ಮಾಡುತ್ತಿದ್ದಾರೋ ಇದು ಲೆಕ್ಕ ಕೊಡುವ ಚಳುವಳಿ ಅಲ್ಲ. ನಾವು ಈಗಾಗಲೇ ಹೇಳಿಕೆ ಸಂಬಂಧ ಲೆಕ್ಕ ಕೊಟ್ಟಿದ್ದೇವೆ ಸ್ವಾಮೀಜಿ ಮಾಡಿದ ತಪ್ಪನ್ನು ಮುಚ್ಚಿ ಹಾಕುವುದಕ್ಕೆ ಈ ಲೆಕ್ಕ ಕೊಡುವ ಚಳುವಳಿ ತಂತ್ರ ಮಾಡಲಾಗಿದೆ ಎಂದು ಉಮಾಪತಿ ಆರೋಪಿಸಿದ್ದಾರೆ.








