ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯುವ ನಿಟ್ಟಿನಲ್ಲಿ, ಉಭಯ ದೇಶಗಳು ಇಂದು (ಸೋಮವಾರ, ಏಪ್ರಿಲ್ 27, 2026) ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement – FTA) ಸಹಿ ಹಾಕಲಿವೆ. ದಶಕಗಳಲ್ಲೊಮ್ಮೆ ಸಂಭವಿಸುವ ಇಂತಹ “ಅಪರೂಪದ” (Once in a generation) ಒಪ್ಪಂದವು ಭಾರತೀಯ ರಫ್ತುದಾರರಿಗೆ ನ್ಯೂಜಿಲೆಂಡ್ ಮಾರುಕಟ್ಟೆಗೆ ಶೇ. 100ರಷ್ಟು ಸುಂಕ ರಹಿತ ಪ್ರವೇಶವನ್ನು ಕಲ್ಪಿಸಲಿದೆ.
ಈ ಒಪ್ಪಂದದ ಅಡಿಯಲ್ಲಿ, ನ್ಯೂಜಿಲೆಂಡ್‌ಗೆ ರಫ್ತಾಗುವ ಭಾರತದ ಎಲ್ಲಾ ಉತ್ಪನ್ನಗಳ ಮೇಲೆ ಶೂನ್ಯ ಸುಂಕ ಅನ್ವಯವಾಗಲಿದೆ. ಇದರಿಂದಾಗಿ ಭಾರತದ ಜವಳಿ, ಔಷಧ (Pharmaceuticals), ಎಂಜಿನಿಯರಿಂಗ್ ಸರಕುಗಳು, ರತ್ನ ಮತ್ತು ಆಭರಣಗಳ ರಫ್ತುದಾರರಿಗೆ ಭಾರಿ ಅನುಕೂಲವಾಗಲಿದೆ.
ಈ ಒಪ್ಪಂದದ ಭಾಗವಾಗಿ ನ್ಯೂಜಿಲೆಂಡ್ ಮುಂದಿನ 15 ವರ್ಷಗಳಲ್ಲಿ ಭಾರತದ ಉತ್ಪಾದನೆ, ಮೂಲಸೌಕರ್ಯ ಮತ್ತು ಸೇವಾ ವಲಯಗಳಲ್ಲಿ 20 ಶತಕೋಟಿ ಡಾಲರ್ (ಸುಮಾರು ₹1.6 ಲಕ್ಷ ಕೋಟಿ) ಹೂಡಿಕೆ ಮಾಡಲು ಬದ್ಧವಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ಒಟ್ಟು ವ್ಯಾಪಾರವನ್ನು 5 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಗಿದೆ.








